Home ಬೆಂಗಳೂರು ‘ಇಲ್ಲಿ ಅತಿ ದೊಡ್ಡ ಮೂರ್ಖರು ಯಾರು?’ | ಒಂದೆಡೆ ಉಳಿತಾಯದ ಪಾಠ, ಮತ್ತೊಂದೆಡೆ ವಾಹನಗಳ ದಂಡಿನ...

‘ಇಲ್ಲಿ ಅತಿ ದೊಡ್ಡ ಮೂರ್ಖರು ಯಾರು?’ | ಒಂದೆಡೆ ಉಳಿತಾಯದ ಪಾಠ, ಮತ್ತೊಂದೆಡೆ ವಾಹನಗಳ ದಂಡಿನ ರೋಡ್ ಶೋ: ಪ್ರಧಾನಿ ವಿರುದ್ಧ ನಟ ಕಿಶೋರ್ ಕಿಡಿ

0

ಬೆಂಗಳೂರು: “ಇಂಧನವನ್ನು ಮಿತವಾಗಿ ಬಳಸಿ” ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಹೇಳಿಕೆಯನ್ನು ಬಹುಭಾಷಾ ನಟ ಕಿಶೋರ್ ಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ತೀಕ್ಷ್ಣವಾಗಿ ಟೀಕಿಸಿದ್ದಾರೆ. ಸರ್ಕಾರದ ಈ ನಡೆಯು ವಿರೋಧಾಭಾಸದಿಂದ ಕೂಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪಶ್ಚಿಮ ಏಷ್ಯಾದ ಯುದ್ಧದ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ವಿವೇಚನೆಯಿಂದ ಬಳಸುವುದು ಅನಿವಾರ್ಯ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದರು. ಈ ಕುರಿತು ಫೇಸ್‌ಬುಕ್‌ನಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಕಿಶೋರ್, ಪ್ರಧಾನಿಯವರ ಸಾರ್ವಜನಿಕ ನಡವಳಿಕೆ ಮತ್ತು ಅವರು ನೀಡುವ ಸಲಹೆಗಳ ನಡುವಿನ ವ್ಯತ್ಯಾಸವನ್ನು ಪ್ರಶ್ನಿಸಿದ್ದಾರೆ.

ಕಿಶೋರ್ ಅವರ ಪೋಸ್ಟ್‌ನ ಮುಖ್ಯಾಂಶಗಳು: “ಇಲ್ಲಿ ಅತಿ ದೊಡ್ಡ ಮೂರ್ಖರು ಯಾರು?” ಎಂದು ಪ್ರಶ್ನಿಸಿರುವ ಅವರು, ಒಂದು ಕಡೆ ದೇಶಭಕ್ತಿಯ ಹೆಸರಿನಲ್ಲಿ ಜನರಿಗೆ ಇಂಧನ ಉಳಿಸಿ, ಖರ್ಚು ಕಡಿಮೆ ಮಾಡಿ ಎಂದು ಹೇಳಿ, ಮರುದಿನವೇ ನೂರಾರು ವಾಹನಗಳ ದಂಡಿನೊಂದಿಗೆ ಬೃಹತ್ ರೋಡ್ ಶೋಗಳಲ್ಲಿ ಭಾಗವಹಿಸುವ ನಡೆಯನ್ನು ಟೀಕಿಸಿದ್ದಾರೆ.

ಗಲ್ಫ್ ಯುದ್ಧ ಪ್ರಾರಂಭವಾದ ನಂತರದ ಕಳೆದ ಕೆಲವು ತಿಂಗಳುಗಳಲ್ಲಿ ನಡೆಸಲಾದ ಚುನಾವಣಾ ರ್ಯಾಲಿಗಳನ್ನು ಕಿಶೋರ್ ನೆನಪಿಸಿದ್ದಾರೆ. “ಇಂತಹ ಮಾತುಗಳನ್ನು ನಂಬಿ, ಮತ ಹಾಕಿ ಅಧಿಕಾರದಲ್ಲಿಡುವ ಜನರು ಮೂರ್ಖರೋ ಅಥವಾ ಈ ರೀತಿ ನಡೆದುಕೊಳ್ಳುವವರು ಮೂರ್ಖರೋ?” ಎಂಬರ್ಥದಲ್ಲಿ ಕಿಶೋರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಕಿಶೋರ್ ಅವರ ಈ ಪೋಸ್ಟ್ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

You cannot copy content of this page

Exit mobile version