ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ನೀತಿ ವಿರುದ್ಧ ಜಾಹೀರಾತುಗಳನ್ನು ಪ್ರಕಟಿಸಿದ ಕಾರಣಕ್ಕೆ ಕೆನಡಾ ಜತೆಗಿನ ವ್ಯಾಪಾರ ಒಪ್ಪಂದಗಳನ್ನು ರದ್ದುಗೊಳಿಸುವುದಾಗಿ ಟ್ರಂಪ್ ಗುರುವಾರ ಹೇಳಿದ್ದಾರೆ. ತಮ್ಮ ಟ್ರೂತ್ ಸೋಷಿಯಲ್ ಮೂಲಕ ಟ್ರಂಪ್ ಈ ಮಾತನ್ನು ಹೇಳಿದರು.
‘ಕೆನಡಾ ಸರ್ಕಾರವು ತಪ್ಪು ಜಾಹೀರಾತುಗಳನ್ನು ಪ್ರಕಟಿಸುತ್ತಿರುವ ಬಗ್ಗೆ ರೊನಾಲ್ಡ್ ರೇಗನ್ ಪ್ರತಿಷ್ಠಾನವು ಘೋಷಣೆ ಮಾಡಿದೆ. ಮತ್ತು ಇದು ಅಂತರರಾಷ್ಟ್ರೀಯ ವ್ಯವಹಾರಕ್ಕೆ ವಿರೋಧಿ ತಂತ್ರವಾಗಿದೆ ಎಂದು ಆರೋಪಿಸಿದ್ದಾರೆ.
ಸುಂಕ ಹೇರಿಕೆಯು ರಾಷ್ಟ್ರೀಯ ಭದ್ರತೆ ಹಾಗೂ ಆರ್ಥಿಕತೆಗೆ ಬಹಳ ಪ್ರಮುಖ ಅಂಶವಾಗಿದೆ. ಕೆನಡಾದ ಉದ್ಧಟತನದಿಂದಾಗಿ ಅವರ ಜತೆಗಿನ ಎಲ್ಲ ವ್ಯಾಪಾರ ಸಂಬಂಧ ರದ್ದು ಮಾಡಲಾಗಿದೆ’ಎಂದಿದ್ದಾರೆ.’ಸುಂಕ ಹೇರಿಕೆಯು ಅಮೆರಿಕದ ಸುಪ್ರೀಂ ಕೋರ್ಟ್‌ನ ಆದೇಶವಾಗಿದೆ. ಅದನ್ನು ನಾನು ಪಾಲಿಸುತ್ತಿದ್ದೇನೆ. ದೇಶದ ಭದ್ರತೆ, ಆರ್ಥಿಕತೆಗೆ ಸುಂಕವು ಅತ್ಯಂತ ಪ್ರಮುಖವಾಗಿದೆ. ಆದರೆ ಜಾಹೀರಾತು ಪ್ರಸಾರ ಮಾಡಿ ಉದ್ಧಟತನ ಮೆರೆದಿರುವ ಕೆನಡಾದೊಂದಿಗೆ ಎಲ್ಲಾ ವ್ಯಾಪಾರ ಒಪ್ಪಂದ ರದ್ದು ಮಾಡಲು ಆದೇಶಿಸಲಾಗಿದೆ’ ಎಂದು ಟ್ರಂಪ್ ಹೇಳಿದ್ದಾರೆ.
ಟ್ರಂಪ್ ಆದೇಶಕ್ಕೆ ಕೆನಡಾ ಪ್ರಧಾನಿ ಮಾರ್ಕ್ ಕಾರ್ನೆ ಅವರು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮಲೇಷ್ಯಾದಲ್ಲಿ ಆಯೋಜನೆಗೊಂಡಿರುವ ಆಸಿಯಾನ್ ಶೃಂಗದಲ್ಲಿ ಪಾಲ್ಗೊಳ್ಳಲು ಕಾರ್ನೆ ಅವರು ಶುಕ್ರವಾರ ಬೆಳಿಗ್ಗೆ ಪ್ರಯಾಣಿಸಿದ್ದಾರೆ. ಇದೇ ಸಭೆಯಲ್ಲಿ ಪಾಲ್ಗೊಳ್ಳಲು ಟ್ರಂಪ್ ಶುಕ್ರವಾರ ಸಂಜೆ ಪ್ರಯಾಣಿಸಲಿದ್ದಾರೆ ಎಂದು ವರದಿಯಾಗಿದೆ
