ಗದಗ: ಜಿಲ್ಲೆಯ ಮುಂಡರಗಿ ತಾಲ್ಲೂಕಿನಾದ್ಯಂತ ರಸ್ತೆಗಳಲ್ಲಿ ಬಿದ್ದಿರುವ ತಗ್ಗು ಗುಂಡಿಗಳನ್ನು ಮುಚ್ಚುವಂತೆ ಲೋಕೋಪಯೋಗಿ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ವತಿಯಿಂದ ಮನವಿ ಸಲ್ಲಿಸಲಾಯಿತು.
ಮುಂಡರಗಿ ತಾಲ್ಲೂಕಿನ ರಸ್ತೆಗಳಲ್ಲಿ ತಗ್ಗು ಗುಂಡಿಗಳು ಬಿದ್ದಿದ್ದು, ರಸ್ತೆಗಳು ಹದಗೆಟ್ಟಿರುವ ಕಾರಣ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಈ ಹಿನ್ನಲೆ ಆದಷ್ಟು ಬೇಗ ರಸ್ತೆಗುಂಡಿಗಳನ್ನು ಸರಿಪಡಿಸಿ ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗದಂತೆ ಮುನ್ನೆಚ್ಚರ ವಹಿಸಬೇಕು ಎಂದು ತಾಲ್ಲೂಕು ಅಧ್ಯಕ್ಷರು, ಜಿಲ್ಲಾ ಉಪಾಧ್ಯಾಕ್ಷರು ಹಾಗೂ ಕರವೇ ಮುಖಂಡರು ಮತ್ತು ಕಾರ್ಯಕರ್ತರು ಸೇರಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಂಡರಗಿ ತಾಲ್ಲೂಕು ಅಧ್ಯಕ್ಷರಾದ ರಾಮನಗೌಡ ಹಳೆಮನಿ ಗದಗ ಜಿಲ್ಲಾ ಉಪಾಧ್ಯಕ್ಷರಾದ ಭರಮಣ್ಣ ಕಿಲ್ಲಾರಿ ತಾಲೂಕ ಕರವೇ ಮುಖಂಡ ಅಮನ್ ನಾಗರಹಳ್ಳಿ ಮಹಿಳಾ ಘಟಕದ ಶ್ರೀಮತಿ ಮೇರಿ ಪೂಜಾರ ಮತ್ತು ಬಳ್ಳಾರಿ ಮಲ್ಲಪ್ಪ ಹಂದ್ರಾಳ ಮಂಜುನಾಥ ಡಂಬಳ ಇನ್ನು ಮುಂತಾದ ಕರವೇ ಕಾರ್ಯಕರ್ತರು ಹಾಜರಿದ್ದರು.