Home ಬ್ರೇಕಿಂಗ್ ಸುದ್ದಿ ಹಾಸನ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಟೋ ಚಾಲಕರ ಮೌನ ಪ್ರತಿಭಟನೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಟೋ ಚಾಲಕರ ಮೌನ ಪ್ರತಿಭಟನೆ

ಹಾಸನ : ಮಧ್ಯವರ್ತಿಗಳಾಗಿ ಕೆಲಸ ನಿರ್ವಹಿಸುತ್ತಿರುವ ಓಲ್ವಾ, ಉಬರ್, ರಾಪಿಡೋ, ಬೈಕ್ ಟ್ಯಾಕ್ಸಿ, ಅಗ್ರಿಗೇಟರ್ ಗಳನ್ನು ನಿಷೇಧಿಸಬೇಕು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಟೋ ಚಾಲಕರ ಮಜ್ದೂರ್ ಸಂಘದಿಂದ ಮೌನ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಇದೆ ವೇಳೆ ಸಂಘದ ರಾಜ್ಯ ಉಪಾಧ್ಯಕ್ಷ ಹೆಚ್.ಕೆ. ದಿಲೀಪ್ ಕುಮಾರ್ ಮತ್ತು ಜಿಲ್ಲಾಧ್ಯಕ್ಷ ಜಾನಿ ಮಾಧ್ಯಮದೊಂದಿಗೆ ಮಾತನಾಡಿ, ಚಾಲಕರಾದ ನಾವುಗಳು ಅಸಂಘಟಿತ ಕಾರ್ಮಿಕ ವರ್ಗಕ್ಕೆ ಸೇರಿದ್ದು, ಆಟೋ ಚಾಲಕರು ಹಾಗೂ ಮಾಲೀಕರಾದ ನಾವು ಸಮಾಜದಲ್ಲಿ ಯಾವುದೇ ಸವಲತ್ತು ಸಿಗದೇ ಕಾರಣ ಈ ಹಿಂದೆ ನಿರುದ್ಯೋಗಿಯಾಗಿದ್ದು, ಯಾವುದೇ ಸರ್ಕಾರಿ/ಖಾಸಗಿ ನೌಕರಿಗಳು ಸಿಗದಿದ್ದ ಕಾರಣಕ್ಕಾಗಿ ಜೀವನೋಪಾಯಕ್ಕಾಗಿ ನಾವುಗಳು ಆಟೋರಿಕ್ಷಾ ಚಾಲಕರಾಗಿ ನಮ್ಮ ಜೀವನ ಸಾಗಿಸುತ್ತಿದ್ದೇವೆ. ಇತ್ತೀಚೆಗೆ ಖಾಸಗಿ ಆಪ್ ಮತ್ತು ಅಗ್ರಿಗೇಟರ್ ಹೆಸರಿನಲ್ಲಿ ನಮ್ಮನ್ನು ಮತ್ತು ನಮ್ಮ ಸಾರ್ವಜನಿಕರನ್ನು ದೋಚುವ ಕೆಲಸ ಮಾಡುತ್ತಿರುತ್ತಾರೆ. ನಾವುಗಳು ಮತ್ತು ನಮ್ಮ ಕುಟುಂಬ ನಿರ್ವಹಣೆ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಆಟೋ ಚಾಲನೆ ವೃತ್ತಿಯನ್ನೇ ಅವಲಂಬಿಸುತ್ತಿರುತ್ತೇವೆ ಎಂದರು. ಇಷ್ಟು ವರ್ಷಗಳ ನಂತರ ಮಧ್ಯವರ್ತಿಗಳಾಗಿ ಕೆಲಸ ನಿರ್ವಹಿಸುತ್ತಿರುವ ಓಲ್ವಾ, ಉಬರ್, ರಾಪಿಡೋ, ಬೈಕ್ ಟ್ಯಾಕ್ಸಿ ಅಗ್ರಿಗೇಟರ್ ಗಳನ್ನು ನಿಷೇಧಿಸಿ ಎಂಬ ಆದೇಶ ಇದ್ದರು ಸಹ ಹಾಗೂ ಘನ ರಾಜ್ಯ ಸರ್ಕಾರ ಹಾಗೂ ಮಾನ್ಯ ನ್ಯಾಯಾಲಯ ತೀರ್ಪಿನ ಮೇರೆಗೆ ಖಾಸಗಿ ಸಂಸ್ಥೆಗಳನ್ನು ರಾಜ್ಯಾದ್ಯಂತ ನಿಷೇಧಿಸಲಾಗಿದೆ ಆದರೂ ಕೆಲವು ಅಗ್ರಿಗೇಟರ್ ಕಂಪನಿಗಳು ನಮ್ಮ ಜಿಲ್ಲೆಗೆ ಆಪ್ ಮುಖಾಂತರ ಕೆಲವು ಕಂಪನಿಗಳು ಅನಧಿಕೃತವಾಗಿ ನಮ್ಮ ಆಟೋ ಚಾಲಕರಿಗೆ ಹಣದ ಆಸೆ ತೋರಿಸಿ ಆಫ್ ಡೌನ್ಲೌಡ್ ಮಾಡಿ ನಮ್ಮ ಅಟೋ ಚಾಲಕರ ವಿರುದ್ಧವಾಗಿ ಸಮಸ್ಯೆ ಮತ್ತು ವೈಮನಸ್ಯ ಉಂಟು ಮಾಡುತ್ತಿದ್ದು ಇದರಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಅಹಿತಕರ ಘಟನೆ ಹಾಗೂ ಕಾನೂನು ಭಂಗವಾದರೆ ಖಾಸಗಿ ಕಂಪನಿಗಳೇ ನೇರ ಹೊಣೆ. ಸಮಾಜಮುಖಿ ಕೆಲಸ ನಿರ್ವಹಿಸುವ ನಮ್ಮನ್ನು( ಆಟೋ ಚಾಲಕರನ್ನು) ಪರಿಗಣಿಸಿ ಖಾಸಗಿ ಮಧ್ಯವರ್ತಿಗಳನ್ನು ನಿಷೇಧಿಸಬೇಕಾಗಿ ವಿನಂತಿಸಿದರು.


ಸರಿಸುಮಾರು 4000 ಆಟೋ ಚಾಲಕರು ಹಾಸನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾರಿಗೆ ಇಲಾಖೆಯಲ್ಲಿ ಒಂದು ಸೇವಾ ಕೇಂದ್ರವನ್ನು ಅಟೋ ಚಾಲಕರಿಗೆ ಮಾಡಿಕೊಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ. ಆಟೋ ಮೀಟರ್ ಅಧಿಕಾರಿಯನ್ನು ಹಾಸನಕ್ಕೆ ನಿಯೋಜನೆ ಮಾಡಲಾಗಿದ್ದು, ಆದರೆ ಅವರಿಗೆ ಅಧಿಕ ಹೊರೆಯಿದೆ ಎಂದು ಹೇಳುತ್ತಾರೆ. ವಾರಕ್ಕೆ ಎರಡು ದಿನ ಸತ್ಯ ಮಾಪನ ಮುದ್ರೆ ಮಾಡುತ್ತಿದ್ದು, 4000 ಆಟೋ ಚಾಲಕರಿಗೆ ಜಿಲ್ಲೆಯಲ್ಲಿ ತುಂಬಾ ತೊಂದರೆ ಆಗಿರುವುದರಿಂದ ಅದಕ್ಕಾಗಿ ಪ್ರತಿನಿತ್ಯ ಮಾಪನಕ್ಕೆ ಆದೇಶ ನೀಡಬೇಕಾಗಿ ವಿನಂತಿ ಆಟೋ ಮೀಟರ್ ಇದ್ದರೆ ಇಲ್ಲದಿದ್ದರೆ ಸಾರಿಗೆ ಕಚೇರಿಯಲ್ಲಿ ಫಿಟ್ನೆಸ್ ಎಫ್.ಸಿ. ಮಾಡಿಕೊಡಲಾಗುವುದಿಲ್ಲ ಎಂದು ದೂರಿದರು. ನಗರದ ಪ್ರಮುಖ ಹೆದ್ದಾರಿ ಹಾಗೂ ವೃತ್ತದಲ್ಲಿ ಇರುವ ಮುಖ್ಯ ಆಟೋ ನಿಲ್ದಾಣಗಳಲ್ಲಿ ಕೊರತೆ ಇದೆ. ನಗರದಲ್ಲಿ ಸಂಚಾರಿ ಫಲಕ ಗಳಿಲ್ಲ, ವಾಹನ ನಿಲುಗಡೆ ಏಕಮುಖ ಸಂಚಾರ ಫಲಕ ಇಲ್ಲ. ರಸ್ತೆ ಮಾರ್ಗ ಸೂಚಿಗಳಿಲ್ಲ, ರಸ್ತೆ ಹುಬ್ಬುಗಳಲ್ಲಿ ಪೇಯಿಂಟಿಲ್ಲ, ಸಂಚಾರಿ ದಟ್ಟಣೆ ಹಾಗೂ ನಗರದ ಪ್ರಮುಖ ಹೆದ್ದಾರಿ ಹಾಗೂ ವೃತ್ತದಲ್ಲಿ ಇರುವ ಮುಖ್ಯ ಆಟೋ ನಿಲ್ದಾಣಗಳಲ್ಲಿ ಮೂಲಸೌಕರ್ಯದ ಕೊರತೆ ಇದ್ದು ಪೊಲೀಸ್ ಸಿಬ್ಬಂದಿಯವರನ್ನು ಪ್ರಮುಖ ಆಟೋ ನಿಲ್ದಾಣಗಳಲ್ಲಿ ನಿಯೋಜಿಸಬೇಕಾಗಿ ಕೋರುತ್ತೇವೆ ಮತ್ತು ಸಂಚಾರಿ ಇಲಾಖೆಗೆ ನಿರ್ದೇಶನ ನೀಡಬೇಕಾಗಿ ಒತ್ತಾಯಿಸಿದರು. ನಗರದಲ್ಲಿ ಬಾರಿ ಗಾತ್ರದ ವಾಹನಗಳು ಹಾಗೂ ಕೆ.ಎಸ್.ಆರ್.ಟಿ.ಸಿ. ವಾಹನಗಳು ನಗರ ವ್ಯಾಪ್ತಿಗಿಂತ ಹೆಚ್ಚಿನ ವೇಗದಲ್ಲಿ ವಾಹನ ಓಡಿಸಿ ಹಲವು ಅಪಘಾತಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬಂದಿರುವುದರಿಂದ ಹಲವು ಕುಟುಂಬಗಳಿಗೆ ಸಾವು/ನೋವು ಉಂಟಾಗಿದೆ ಹಾಗಾಗಿ ಕೆ.ಎಸ್.ಆರ್.ಟಿ.ಸಿ. ಇಲಾಖೆ ಅಪಘಾತ ರಹಿತವಾಗಿ ವಾಹನ ಚಲಾವಣೆ ಮಾಡಬೇಕೆಂದು ಈ ಮೂಲಕ ಕೋರುವುದಾಗಿ ಹೇಳಿದರು. ಇದೆ ವೇಳೆ ಆಟೋ ಚಾಲಕರ ಮಜ್ದೂರ್ ಸಂಘದ ಜಿಲ್ಲಾಧ್ಯಕ್ಷ ಜಾನಿ, ಹೊಳೆನರಸೀಪುರ ತಾಲೂಕು ಅಧ್ಯಕ್ಷ ಚೇತನ್, ಉಪಾಧ್ಯಕ್ಷ ಸುನೀಲ್, ಸದಸ್ಯ ದಿನಾಕರ್, ಪಾಲರಾಜು, ನಿರಂಜನ್, ಹಾಸನ ಪ್ರಧಾನ ಕಾರ್ಯದರ್ಶಿ ಯಶವಂತ್, ಕಾರ್ಯದರ್ಶಿ ಹರೀಶ್, ಸತೀಶ್, ರಂಗನಾಥ್, ಕಾನೂನು ಸಲಹೆಗಾರ ಅಶೋಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ್ ಇತರರು ಉಪಸ್ಥಿತರಿದ್ದರು.

You cannot copy content of this page

Exit mobile version