ಭಾರತದ ವಾಹನ ಮಾರುಕಟ್ಟೆಯಲ್ಲಿ ಸತತವಾಗಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಟೋಯೋವಾ ಕಂಪನಿಯು ಈಗಾಗಲೇ ಸಂಚಲನ ಉಂಟು ಮಾಡಿರುವ ಇನ್ನೊವಾ ಕ್ರಿಸ್ಟಾದ ಹೊಸಾ ಆವೃತ್ತಿಯೊಂದನ್ನು ಬಿಡುಗಡೆಗೊಳಿಸಲು ಸಿದ್ಧವಾಗುತ್ತಿದೆ.
2023 ರ ಹೊಸ್ತಿಲಿನಲ್ಲಿ ‘ಟೋಯೋಟಾ ಇನ್ನೊವಾ ಹೈಕ್ರಾಸ್’ ಹೆಸರಿನಲ್ಲಿ ಭಾರತದ ವಾಹನ ಮಾರುಕಟ್ಟೆಗೆ ಹೆಜ್ಜೆ ಇಡಲಿದೆ.
ಟೊಯೋಟಾ ಇನ್ನೋವಾ ತನ್ನ ಮೂರನೇ ಆವೃತ್ತಿ ಇದಾಗಿದ್ದು ಇನ್ನೋವಾ ಹೈಕ್ರಾಸ್ ಎಂಬ ಹೆಸರಿನೊಂದಿಗೆ ಈಗಾಗಲೇ ರಿಜಿಸ್ಟರ್ ಆಗಿರುವುದಾಗಿ ಹೇಳಲಾಗುತ್ತಿದೆ.
ಹೋಸಾ ವೈಶಿಷ್ಟ್ಯ ಮತ್ತು ತಂತ್ರಜ್ಞಾನಗಳೊಂದಿರುವ ಹೈಕ್ರಾಸ್ ವಾಹನವು ನಾಲ್ಕು ಸಿಲಿಂಡರ್ ಗಳ ಇಂಜಿನ್ ಹೊಂದಿರಲಿದ್ದು ಪೆಟ್ರೋಲ್ ಮತ್ತು ಡೀಸಲ್ ಮಾದರಿಯನ್ನು ಬಿಡುಗಳೆ ಗೊಳಿಸಲಿದೆ.
ಈಗಾಗಲೇ ಇಂಡೋನೇಷಿಯಾದಲ್ಲಿ ಈ ವಾಹನ ಬಿಡುಗಡೆಯಾಗಿದ್ದು ಒಟ್ಟು ಮೂರು G V ಮತ್ತು Venture ಮಾದರಿಯ ವಾಹನಗಳನ್ನು ಪರಿಚಯ ಗೊಳಿಸದೆ.
ಸನ್ ರೂಫ಼್ , ಕ್ಲೈಮೇಟ್ ಕಂಟ್ರೋಲ್ , ಮಲ್ಟಿ ಏರ್ ಬ್ಯಾಗ್ , ವೈರ್ ಲೆಸ್ ಚಾರ್ಜರ್ , ಹೊಸಾ ಮಾದರಿಯ ಡ್ಯಾಶ್ ಬೋರ್ಡ್ ಸೇರಿದಂತೆ ಹಲವಾರು ಆಕರ್ಷಣೀಯ ವೈಶಿಷ್ಟ್ಯತೆಗಳನ್ನು ಹೊಂದಿರುವುದಾಗಿ ಕಂಪನಿ ತಿಳಿಸಿದೆ.
ಭಾರತದ ಮಾರುಕಟ್ಟೆಯಲ್ಲಿ ಈ ನವಂಬರ್ ನಂತರ ಕಾಣಸಿಗಲಿದೆ ಎಂದು ಹೇಳಲಾಗುತ್ತಿದೆ.
🔸 ಪೀಪಲ್ ಗ್ರೂಪ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo
ಇದನ್ನೂ ನೋಡಿ: ಕರ್ನಾಟಕದಲ್ಲಿ ಭಾರತ್ ಐಕ್ಯತಾ ಯಾತ್ರೆ : ರಾಹುಲ್ ಗಾಂಧಿ ಅಬ್ಬರ | Congress Bharat Jodo Yatra
ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್ ಐಕ್ಯತಾ ಯಾತ್ರೆ ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಭರ್ಜರಿ ಯಶಸ್ಸುಗಳಿಸಿ ಇದೀಗ ಕರ್ನಾಟಕಕ್ಕೆ ಪ್ರವೇಶಿಸಿದೆ. ಯಾತ್ರೆ ಸೃಷ್ಟಿಸಿರುವ ರಾಜಕೀಯ ಸಂಚಲನ ಕುರಿತು ಒಂದು ನೋಟ ಇಲ್ಲಿದೆ.