Home ಇನ್ನಷ್ಟು ಗ್ಯಾಜೆಟ್ ಲೋಕ ಮಾರುಕಟ್ಟೆಗೆ ಐಫೋನ್ 16 ಲಗ್ಗೆ ; ಮಸ್ತ್ ಫೀಚರ್ಸ್ ; ಸೇಲ್ ನಲ್ಲಿ ದಾಖಲೆ ಬರೆಯುತ್ತಾ?

ಮಾರುಕಟ್ಟೆಗೆ ಐಫೋನ್ 16 ಲಗ್ಗೆ ; ಮಸ್ತ್ ಫೀಚರ್ಸ್ ; ಸೇಲ್ ನಲ್ಲಿ ದಾಖಲೆ ಬರೆಯುತ್ತಾ?

0

ಮೊಬೈಲ್ ಹ್ಯಾಂಡ್ ಸೆಟ್ ಲೋಕದ ದಿಗ್ಗಜ ಆಪಲ್ ತನ್ನ ಐಫೋನ್ ಸರಣಿಯ ಐಫೋನ್ 16 ಅನ್ನು ಸೋಮವಾರ ರಾತ್ರಿ ಲೋಕಾರ್ಪಣೆಗೊಳಿಸಿದೆ. ಐಫೋನ್ 16 ಹಲವಾರು ಅಪ್‌ಡೇಟ್‌ಗಳನ್ನು ಪಡೆದುಕೊಂಡಿದ್ದು ಐಫೋನ್ ಪ್ರಿಯರಿಗೆ ಮತ್ತಷ್ಟು ಆಕರ್ಷಣೀಯವಾಗಿ ಸೆಳೆಯುತ್ತಿದೆ.

ಐಫೋನ್ ಸರಣಿಯ ಹಿಂದಿನ ಮಾದರಿಗಳಿಗೆ ಹೋಲಿಸಿದರೆ ಐಫೋನ್ 16 ಪ್ರೊ ಹಲವಾರು ಮಾರ್ಪಾಡುಗಳೊಂದಿಗೆ ಮಾರಕಟ್ಟೆಗೆ ಲಗ್ಗೆ ಇಟ್ಟಿದೆ. ಐಫೋನ್ 16 ಸರಣಿ ಶೀಘ್ರದಲ್ಲೇ ಆನ್ ಲೈನ್ ಆರ್ಡರ್ ಗಳು ಆರಂಭವಾಗಲಿದ್ದು ಫ್ಲಿಪ್ ಕಾರ್ಟ್, ಅಮೆಜಾನ್, ಆಪಲ್ ಸ್ಟೋರ್ ಮತ್ತು ಇತರ ಪ್ಲಾಟ್ ಫಾರ್ಮ್‌ಗಳಲ್ಲಿ ಲಭ್ಯವಾಗಲಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಅಪ್ಡೇಟೆಡ್ ವರ್ಷನ್ :
ಆಪಲ್ ಐಫೋನ್ 16 ಮತ್ತು ಐಫೋನ್ 16 ಪ್ಲಸ್ ಫೋನ್‌ಗಳನ್ನು ಏರೋಸ್ಪೇಸ್-ಗ್ರೇಡ್ ಅಲ್ಯೂಮಿನಿಯಂನಿಂದ ತಯಾರಿಸಲಾಗಿದೆ. ಹೊಸ ಬಣ್ಣ-ತುಂಬಿದ ಬ್ಯಾಕ್‌ಗ್ಲಾಸ್ ನೀಡಲಾಗಿದೆ. ಅಲ್ಟ್ರಾಮರೈನ್, ಟೀಲ್, ಪಿಂಕ್‌, ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿರುತ್ತದೆ. ಐಫೋನ್ 16 ಮೊಬೈಲ್‌ 6.1 ಇಂಚಿನ ಡಿಸ್ಪ್ಲೇ ಹೊಂದಿದ್ದರೆ, ಐಫೋನ್ 16 ಪ್ಲಸ್ 6.7 ಇಂಚಿನ ದೊಡ್ಡ ಡಿಸ್‌ಪ್ಲೇ ಜತೆ ಸಿಗಲಿದೆ. ಎರಡೂ ಮಾದರಿಗಳು 2000 ನಿಟ್ ಗರಿಷ್ಠ ಬ್ರೈಟ್‌ನೆಸ್‌ ಹೊಂದಿವೆ. ಕತ್ತಲೆಯಲ್ಲಿ 1 ನಿಟ್ ವರೆಗೆ ಮಸುಕಾಗಬಹುದು.

ಆಪಲ್ ಕಂಪನಿಯು ಸ್ಟ್ಯಾಂಡರ್ಡ್ ಮಾದರಿಗಳಲ್ಲೂ ಆಕ್ಷನ್ ಬಟನ್ ಈ ಬಾರಿ ನೀಡಿದೆ. ಇದು ವಾಯ್ಸ್‌ ಮೆಮೊಗಳನ್ನು ರೆಕಾರ್ಡ್ ಮಾಡಲು, ಹಾಡುಗಳನ್ನು ಗುರುತಿಸಲು ಅಥವಾ ಭಾಷಾಂತರಿಸಲು ಸುಲಭ ಮಾಡುತ್ತದೆ. ಹೆಚ್ಚುವರಿಯಾಗಿ, ಐಫೋನ್ 16 ಹೊಸ ಕ್ಯಾಮೆರಾ ಕಂಟ್ರೋಲ್‌ ಫೀಚರ್ ಜತೆಗೆ ಬಂದಿದೆ. ಇದು ಆನ್ / ಆಫ್ ಸ್ವಿಚ್ ಕೆಳಗೆ ಬಲಭಾಗದಲ್ಲಿರುವ ಸ್ಕ್ರೀನ್‌ ಮೇಲೆ ಬೆರಳನ್ನು ಜಾರಿಸುವ ಮೂಲಕ ಸೆಟ್ಟಿಂಗ್‌ಗಳನ್ನು ಸರಿಹೊಂದಿಸಲು ಅನುಕೂಲ ಮಾಡಿಕೊಡಲಿದೆ.

ಐಫೋನ್ 16 ನಲ್ಲಿ ಕ್ಯಾಮೆರಾನೇ ಹೈಲೈಟ್ :
ಐಫೋನ್ 16 ಈಗ ಶಕ್ತಿಯುತ 48 ಮೆಗಾಪಿಕ್ಸೆಲ್ ಮೇನ್‌ ಕ್ಯಾಮೆರಾದೊಂದಿಗೆ ಬರುತ್ತದೆ. ಇದು 48 ಎಂಪಿ ಮತ್ತು 12 ಎಂಪಿ ಫೋಟೋಗಳನ್ನು ಸ್ಪಷ್ಟವಾದ 24 ಎಂಪಿ ಚಿತ್ರವಾಗಿ ಸಂಯೋಜಿಸುತ್ತದೆ. ಇದು ಸೆನ್ಸರ್ ನ ಮಧ್ಯದ 12 ಎಂಪಿ ಬಳಸಿ 2 ಎಕ್ಸ್ ಟೆಲಿಫೋಟೋ ಜೂಮ್ ಆಯ್ಕೆಯನ್ನು ಸಹ ಹೊಂದಿದೆ, ಜೊತೆಗೆ ಲೋಲೈಟ್‌ ಶಾಟ್ ಗಳಿಗಾಗಿ ವೇಗದ ಎಫ್ / 1.6 ಅಪರ್ಚರ್ ಹೊಂದಿದೆ.

ಡಾಲ್ಬಿ ವಿಷನ್ ಎಚ್‌ಡಿಆರ್‌ ಸಹಾಯದಿಂದ 4 ಕೆ 60 ವೀಡಿಯೊವನ್ನು ಶೂಟ್ ಮಾಡಬಹುದು. ಹೊಸ 12 ಎಂಪಿ ಅಲ್ಟ್ರಾ-ವೈಡ್ ಕ್ಯಾಮೆರಾ ದೊಡ್ಡ ಅಪರ್ಚರ್ ಮತ್ತು ದೊಡ್ಡ ಪಿಕ್ಸೆಲ್‌ಗಳನ್ನು ಹೊಂದಿದೆ. ಐಫೋನ್ 16 ಒಂದು ಫೋನ್‌ ಕ್ಯಾಮೆರಾವು ನಾಲ್ಕು ಕ್ಯಾಮೆರಾ ಲೆನ್ಸ್‌ಗಳಿಗೆ ಸಮಾನವಾಗಿದೆ. ತನ್ನ ಎರಡೂ ಲೆನ್ಸ್‌ಗಳನ್ನು ಬಳಸಿಕೊಂಡು ವಿಶೇಷ ವೀಡಿಯೊ ಮತ್ತು ಫೋಟೋಗಳನ್ನು ಸೆರೆಹಿಡಿಯಬಹುದು ಎಂದು ಆಪಲ್ ಹೇಳಿಕೊಂಡಿದೆ.

ಸ್ಟ್ಯಾಂಡರ್ಡ್ ಐಫೋನ್ 16 ಮಾದರಿಗಳಲ್ಲಿ ಆಪಲ್ ಇಂಟೆಲಿಜೆನ್ಸ್ ಫೀಚರ್‌ ಸೇರಿಸಿರುವುದ ಪ್ರಮುಖ ಹೈಲೈಟ್. ಈ ಎಐ-ಚಾಲಿತ ಫೀಚರ್‌ ಭಾಷೆಗಳು, ಚಿತ್ರಗಳು ಮತ್ತಿತರ ಸಂಗತಿಗಳನ್ನು ಅರ್ಥಮಾಡಿಕೊಳ್ಳುತ್ತದೆ.

ಈ ಬಣ್ಣಗಳಲ್ಲಿ ಲಭ್ಯ:
ಐಫೋನ್ 16 ಪ್ರೊ ಮಾದರಿಗಳು ಹೊಸ ಚಿನ್ನದ ಬಣ್ಣದಲ್ಲಿ ಬರುತ್ತವೆ ಮತ್ತು ಕ್ಯಾಮೆರಾ ಕಂಟ್ರೋಲ್ ಬಟನ್ ಹೊಂದಿವೆ. ಐಫೋನ್ 16 ಪ್ರೊ 6.3 ಇಂಚಿನ ಡಿಸ್ಪ್ಲೇ ಹೊಂದಿದ್ದರೆ, ಐಫೋನ್ 16 ಪ್ರೊ ಮ್ಯಾಕ್ಸ್ 6.9 ಇಂಚಿನ ಸ್ಕ್ರೀನ್‌ ಹೊಂದಿದೆ. ಎರಡೂ ಮಾದರಿಗಳು ತೆಳ್ಳಗಿನ ಅಂಚುಗಳನ್ನು ಹೊಂದಿವೆ ಮತ್ತು ಯಾವಾಗಲೂ 120Hz ಪ್ರೊಮೋಷನ್ ಡಿಸ್‌ಪ್ಲೇಗಳನ್ನು ಹೊಂದಿವೆ. ಪ್ರೊ ಮಾದರಿಗಳು ಕಪ್ಪು ಟೈಟಾನಿಯಂ, ಬಿಳಿ ಟೈಟಾನಿಯಂ, ನ್ಯಾಚುರಲ್ ಟೈಟಾನಿಯಂ ಮತ್ತು ಹೊಸ ಡೆಸರ್ಟ್ ಟೈಟಾನಿಯಂ ಬಣ್ಣಗಳಲ್ಲಿ ಲಭ್ಯವಿದೆ.

ಬ್ಯಾಟರಿ ಬ್ಯಾಕಅಪ್ :
ಕಂಪನಿಯು ಬ್ಯಾಟರಿ ಗಾತ್ರವನ್ನು ಬಹಿರಂಗಪಡಿಸಿಲ್ಲ. ಆದರೆ ಪರ್ಪಾಮೆನ್ಸ್‌ ಬಗ್ಗೆ ಹೆಮ್ಮೆಪಡುತ್ತಿದೆ. ದೊಡ್ಡ ಸಾಮರ್ಥ್ಯ ಮತ್ತು ಉತ್ತಮ ನಿರ್ವಹಣೆಯೊಂದಿಗೆ ಬ್ಯಾಟರಿಯನ್ನು ಆಪ್ಟಿಮೈಸ್ ಮಾಡಲಾಗಿದೆ ಎಂದು ಆಪಲ್ ಹೇಳಿದೆ.

You cannot copy content of this page

Exit mobile version