ಚಾಮರಾಜನಗರ: ಭಾರತ ಐಕ್ಯತಾ ಯಾತ್ರೆ ಕರ್ನಾಟಕವನ್ನು ಪ್ರವೇಶಿಸಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗಿಯಾಗುವುದರ ಮೂಲಕ ಬೆಂಬಲ ಸೂಚಿಸಿದ್ದಾರೆ.
ಕರ್ನಾಟಕವನ್ನು ಪ್ರವೇಶಿಸಿರುವ ಭಾರತ ಐಕ್ಯತಾ ಯಾತ್ರೆಯ ಉದ್ಘಾಟನೆಯನ್ನು ರಾಹುಲ್ ಗಾಂಧಿ ಮತ್ತು ರಾಜ್ಯ ಕಾಂಗ್ರೆಸ್ ನಾಯಕರು ಸೇರಿ ಉದ್ಘಾಟಿಸಿದರು.
ಈ ವೇಳೆ ಯಾತ್ರೆಯ ಉದ್ಘಾಟನೆ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅವರು, ದೇಶದಲ್ಲಿ ಬಿಜೆಪಿ ಆರ್ ಎಸ್‌ಎಸ್ ದ್ವೇಷ ಹರಡುವ ವಿರುದ್ಧ, ಸಂವಿಧಾನದ ರಕ್ಷಣೆಗಾಗಿ ಭಾರತ್ ಜೋಡೋ ಯಾತ್ರೆ ನಡೆಸಲಾಗುತ್ತಿದೆ. ಇದು ಭಾರತೀಯರ ಯಾತ್ರೆ. ಈ ಯಾತ್ರೆಗೆ ಧರ್ಮ, ಜಾತಿ, ಲಿಂಗ ಎಂಬ ಅಸಮಾನತೆ ಇಲ್ಲದೇ ಭಾರತ ಐಕ್ಯತೆಗೆ ಎಲ್ಲಾರು ಬೆಂಬಲವಾಗಿ ನಿಂತಿದ್ದಾರೆ. ಇದೆ ನಮ್ಮ ಸುಂದರವಾದ, ಶಾಂತಿಯುತವಾದ, ಸೌಹಾರ್ದತೆಯ ಭಾರತ. ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು, ಈ ಯಾತ್ರೆಯನ್ನು ಯಾರು ನಿಲ್ಲಿಸಲು ಸಾಧ್ಯವಿಲ್ಲ, ಯಾತ್ರೆಯಲ್ಲಿ ಸಾವಿರಾರು ಜನರು ತಮ್ಮ ನೋವನ್ನು , ಕಷ್ಟವನ್ನು ಹಂಚಿಕೊಂಡಿದ್ದಾರೆ. ನಿರುದ್ಯೋಗ, ಬೆಲೆ ಏರಿಕೆ, ರೈತರ ಮೇಲೆ ಆಗುತ್ತಿರುವ ಅನ್ಯಾಯದ ಬಗ್ಗೆ ತಿಳಿಸುತ್ತಿದ್ದಾರೆ. ಈ ಹಿನ್ನಲೆ, ಯಾತ್ರೆಗೆ ಲಕ್ಷಾಂತರ ಜನರು ಬೆಂಬಲ ನೀಡುತ್ತಿರುವುದು ನಿಜಕ್ಕೂ ಯಾತ್ರೆಗೆ ಹುರುಪು ನೀಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಯಾತ್ರೆಯು ಗುಂಡ್ಲುಪೇಟೆಯಿಂದ ಶುರುವಾಗಿದ್ದು, ಯಾತ್ರೆಯಲ್ಲಿ ಕಾಂಗ್ರೆಸ್ ಮುಖಂಡರುಗಳು, ನಾಯಕರು ಸೇರಿದಂತೆ, ಯಾತ್ರೆಯ ಬೆಂಬಲಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದರು.