ಬೆಂಗಳೂರು : ದೇಶದ ಹಲವೆಡೆ ಚಾಲನೆಯಾಗುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನವೆಂಬರ್ ನಲ್ಲಿ ಬೆಂಗಳೂರಿನಲ್ಲೂ ಸಂಚರಿಸುತ್ತದೆ ಎಂದು ಪಿಟಿಐ ವರದಿ ಮಾಡಿದೆ.
ಅಕ್ಟೋಬರ್ 13 ರಂದು ಪ್ರದಾನಿ ನರೇಂದ್ರ ಮೋದಿಯವರು ಹಿಮಾಚಲ ಪ್ರದೇಶದಲ್ಲಿ ನಾಲ್ಕನೇ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚಾರಕ್ಕೆ ಚಾಲನೆ ನೀಡಿದ್ದರು. ಇತರ ಮೂರು ರೈಲುಗಳು ನವದೆಹಲಿಯಿಂದ ವಾರಣಾಸಿ , ನವದೆಹಲಿ – ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ ಮತ್ತು ಗಾಂಧಿನಗರ – ಮುಂಬೈನ ಮಧ್ಯೆ ಚಾಲನೆಯಲ್ಲಿವೆ. ಇದೀಗ ನವೆಂಬರ್ 10ರಿಂದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ದಕ್ಷಿಣ ಭಾರತದ ಚೆನ್ನೈ, ಬೆಂಗಳೂರು ಮತ್ತು ಮೈಸೂರಿನ ನಡುವೆ ಸಂಚಾರ ನಡೆಸಲಿದೆ ಎಂದು ಪಿಟಿಐನಿಂದ ವರದಿಯಾಗಿದೆ.
ದಕ್ಷಿಣ ಭಾರತದ ಈ ಮೂರೂ ಜಿಲ್ಲೆಗಳ ನಡುವೆ ಒಟ್ಟು 483 ಕಿಮೀ ದೂರ ಈ ಹೊಸ ರೈಲು ಸಂಚರಿಸಲಿದೆ.
ಹೊಸ ವಂದೇ ಭಾರತ್ ರೈಲು ಹಿಂದಿನ ರೈಲುಗಳಿಗೆ ಹೋಲಿಸಿದರೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ವೇಗವನ್ನು ತಲುಪುತ್ತಿದೆ. ಈ ರೈಲು ಮೂರು ಗಂಟೆಗಳ ಬ್ಯಾಟರಿ ಬ್ಯಾಕಪ್‌ನೊಂದಿಗೆ ಕೋಚ್ ಗಳು ಡಿಸಾಸ್ಟರ್ ಲೈಟ್ ಗಳನ್ನು ಹೊಂದಿದೆ.