ಹಾಸನ : ಮಾಜಿ ಸಂಸದ ಹಾಗೂ ಭವಾನಿ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಆರೋಪದ ಪ್ರಕರಣದ ಸಂತ್ರಸ್ತೆಯ ಅಪಹರಣದ ಕೇಸ್ನಲ್ಲಿ ಆರೋಪಿಯಾಗಿರುವ ಭವಾನಿಯವರು ಇಂದು ಬರೋಬ್ಬರಿ 10 ತಿಂಗಳ ಬಳಿಕ ಹಾಸಕ್ಕೆ ರೀ ಎಂಟ್ರಿ ಕೊಟ್ಟರು.
ನ್ಯಾಯಾಲಯವು ಷರತ್ತು ಸಡಿಲಿಕೆ ನೀಡಿದ್ದರಿಂದ ಭವಾನಿ ರೇವಣ್ಣ ಅವರು ಜಿಲ್ಲೆಯ ಹೊಳೆನರಸೀಪುರಕ್ಕೆ ಆಗಮಿಸಲು ಅನುಕೂಲಗಾಗಿದ್ದು, ಪಟಾಕಿ ಸಿಡಿಸಿ ಹೂಮಳೆ ಸುರಿದು ಅವರನ್ನು ಅದ್ದೂರಿಯಾಗಿ ಅಭಿಮಾನಿಗಳು ಸ್ವಾಗತಿಸಿದರು.
ಅಭಿಮಾನಿಗಳ ಶಿಳ್ಳೆ ಚಪ್ಪಾಳೆ ತಟ್ಟಿ, ಆರತಿ ಬೆಳಗಿ ಭವಾನಿಯವರನ್ನು ಬರಮಾಡಿಕೊಂಡರು. ನಾನು ಆರಾಮಾಗಿದ್ದೇನೆ. ನೀವು ಹೇಗಿದ್ದೀರಿ ಎಂದು ಅಭಿಮಾನಿಗಳೊಂದಿಗೆ ಭವಾನಿ ಇದೇ ವೇಳೆ ಸಂತಸದಿಂದ ಮಾತನಾಡಿದರು. ನಾನು ಇಲ್ಲಿಗೆ ಬರುತ್ತಿರುವ ಬಗ್ಗೆ ಯಾರಿಗೂ ತಿಳಿಸಿರಲಿಲ್ಲ. ಆದರೂ ಹೆಚ್ಚು ಜನ ನನ್ನನ್ನು ಸ್ವಾಗತಿಸಲು ಬಂದಿದ್ದೀರಿ. ನಿಮ್ಮ ಅಭಿಮಾನವು ನೋಡಿ ನನಗೆ ಅತೀವ ಖುಷಿಯಾಗಿದೆ ಎಂದು ಭವಾನಿ ಭಾವುಕರಾದರು ಎಂದು ತಿಳಿದುಬಂದಿದೆ.