Home ಮೀಡಿಯಾ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಡಾ.ಗುರುರಾಜ ಹೆಬ್ಬಾರ್ ರವರ ಹುಟ್ಟು ಹಬ್ಬ ಆಚರಣೆ

ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಡಾ.ಗುರುರಾಜ ಹೆಬ್ಬಾರ್ ರವರ ಹುಟ್ಟು ಹಬ್ಬ ಆಚರಣೆ

ಡಾ|| ಗುರುರಾಜ ಹೆಬ್ಬಾರ್ಅ ರವರ ಸಮಾಜ ಸೇವೆ ನಮಗೆ ಆದರ್ಶ


ಹಾಸನ:
ಯಾವ ಮನುಷ್ಯನಿಗೆ ಒಳ್ಳೆಯ ದೃಷ್ಠಿಕೋನ ಇರುತ್ತದೆಯೊ ಆತನಿಂದ ಒಳ್ಳೆಯ ಪರಿಸರ ಸೃಷ್ಠಿ ಮಾಡಲು ಸಾಧ್ಯ. ಅಂತವರ ಸಾಲಿನಲ್ಲಿ ಡಾ. ಗುರುರಾಜ ಹೆಬ್ಬಾರ್ ಸೇರುತ್ತಾರೆ. ಯಾರೆ ಆಗಲಿ ಸಾಧ್ಯವಾದರೇ ಒಳ್ಳೆಯದು ಮಾಡಿ, ಅವಕಾಶ ಸಿಗದಿದ್ದರೇ ಒಳ್ಳೆ ಕೆಲಸ ಮಾಡುವವರ ಜೊತೆ ಸೇರಿ ಕೈಜೋಡಿಸು ಎಂದು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠ ಕೆಂಗೇರಿಯ ಡಾ. ನಿಶ್ಚಲಾನಂದನಾಥ ಮಹಾಸ್ವಾಮೀಜಿ ತಿಳಿಸಿದರು.
ನಗರದ ಸಾಲಗಾಮೆ ರಸ್ತೆ ಬಳಿ ಇರುವ ಜನಕಲ್ಯಾಣ ರೀಸರ್ಚ್ ಚಾರಿಟೆಬಲ್ ಟ್ರಸ್ಟ್ ಆವರಣದಲ್ಲಿ ಡಾ|| ಗುರುರಾಜ ಹೆಬ್ಬಾರ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಹಾಗೂ ಜನಕಲ್ಯಾಣ ರಿಸರ್ಚ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಸಂಜೀವಿನಿ ಸಹಕಾರಿ ಆಸ್ಪತ್ರೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ. ರಾಷ್ಟಿಯ ಸೇವಾ ಯೋಜನೆ, ಹಿಮ್ಸ್, ಪರಿಪೂರ್ಣ ಚಾರಿಟಬಲ್ ಟ್ರಸ್ಟ್, ಕಾಮಧೇನು ಸಹಕಾರಿ ವಿದ್ಯಾಶ್ರಮ, ರೈತ ಬಂದು ಸಹಕಾರಿ ಸಂಘ, ವಿದ್ಯಾಸೌಧ ಶಿಕ್ಷಣ ಸಂಸ್ಥೆ ಮತ್ತು ಪ್ರಶಾಂತಿ ಸೇವಾ ಟ್ರಸ್ಟ್, ಕಟ್ಟಾಯ ಹೋಬಳಿ ಗ್ರಾಮಸ್ಥರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಡಾ.ಗುರುರಾಜ ಹೆಬ್ಬಾರ್ ರವರ ಹುಟ್ಟು ಹಬ್ಬದ ಪ್ರಯುಕ್ತ ಶನಿವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರ ಹಾಗೂ ದೇಹದಾನ-ನೇತ್ರದಾನ ನೊಂದಣಿ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ತಮ್ಮ ಆಶೀರ್ವಚನದಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ನಾನು ಸರಕಾರಿ ಅಧಿಕಾರಿಯಾಗಿ ನಂತರ ಸ್ವಾಮೀಜಿಯಾಗಿ 20 ದಿನಗಳು ಕಳೆದಿದೆ. ಸ್ವಾಮೀಜಿಯಾಗಿ ಮೊದಲ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ನಗರಸಭೆ ಅಧ್ಯಕ್ಷರು ಹೆಬ್ಬಾರ್ ಹೆಸರಿನಲ್ಲಿ ಉದ್ಘಾಟನೆ ಗೊಂಡಿರುವ ವೃತ್ತದಲ್ಲಿ ರಸ್ತೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಮಹಾನಗರ ಪಾಲಿಕೆ ಆಗುವ ಸಮಯದಲ್ಲಿ ಅವರ ಹೆಸರಿನಲ್ಲಿ ಒಂದು ಡಾ. ಗುರುರಾಜ ಹೆಬ್ಬಾರ್ ವಾರ್ಡ್ ರಚನೆ ಮಾಡುವ ಮೂಲಕ ಅವರ ಹೆಸರು ಶಾಶ್ವತವಾಗಿ ಉಳಿಸಲು ನಮ್ಮ ಮನವಿ. ನೀವು ದೇವಾಲಯಗಳಿಗೆ ಹೋಗದಿದ್ದರೂ ಪರವಾಗಿಲ್ಲ. ಸ್ಮರಣೆ ಮಾಡದಿದ್ದರೂ ಪರವಾಗಿಲ್ಲ ಒಳ್ಳೆಯರ ಸಂಘ ಸೇರಿ ಒಳ್ಳೆ ಕೆಲಸ ಮಾಡಿದರೆ ಅದೆ ದೇವಾಲಯದ ಪ್ರವೇಶ ಮತ್ತು ದೇವರ ಸ್ಮರಣೆ ಆಗುತ್ತದೆ ಎಂದರು. ಯಾವ ಮನುಷ್ಯನಿಗೆ ಒಳ್ಳೆಯ ದೃಷ್ಠಿಕೋನ ಇರುತ್ತದೆಯೋ ಆತನಿಂದ ಒಳ್ಳೆಯದನ್ನೆ ಸೃಷ್ಟಿ ಮಾಡಲು ಸಾಧ್ಯಬಾಗುತ್ತದೆ. ಅಂತವರ ಸಾಲಿನಲ್ಲಿ ಡಾ. ಗುರುರಾಜ ಹೆಬ್ಬಾರ್ ಸೇರುತ್ತಾರೆ. ಯಾವುದೇ ಪವರ್ ಇಲ್ಲದಿದ್ದರೂ, ರಾಜಕೀಯದಲ್ಲಿ ಇಲ್ಲದಿದ್ದರೂ ಹಾಗೂ ನಮ್ಮತರ ಅಧಿಕಾರಿ ಆಗದಿದ್ದರೂ ಅದರೂ ಇಡೀ ಹಾಸನ ಜಿಲ್ಲೆ ನೆನಪು ಮಾಡುವಂತಹ ಅನುಪಮವಾದಂತಹ ಸೇವೆಯನ್ನು ಮಾಡಿ ಸಾಂಸ್ಕಂತಿಕವಾಗಿ ಒಂದು ಸೇವೆಯನ್ನು ಮಾಡಿದ್ದಾರೆ. ಸಾಧ್ಯವಾದರೆ ಒಳ್ಳೆಯದ ಮಾಡು, ಒಳ್ಳೆಯದು ಮಾಡಲು ಸಾಧ್ಯವಾಗುತ್ತಿಲ್ಲ ಇಲ್ಲವೇ ಅವಕಾಶ ಸಿಗುತ್ತಿಲ್ಲ ಎಂದರೇ ಒಳ್ಳೆಯ ಕೆಲಸ ಮಾಡುವವರ ಜೊತೆ ಸೇರಿ ಕೈಜೋಡಿಸು ಎಂದು ಸ್ವಾಮಿ ವಿವೇಕಾನದರು ಹೇಳಿರುವುದಾಗಿ ಕಿವಿಮಾತು ಹೇಳಿದರು. ಗುರುರಾಜ ಹೆಬ್ಬಾರ್ ಶ್ರೇಷ್ಠ ದಾರ್ಶನಿಕರು, ಈ ಸಮಾಜಕ್ಕಾಗಿ ತಮ್ಮ ಆರೋಗ್ಯ ಕೆಡಿಸಿಕೊಂಡರು. ಈ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದು, ಅವರ ಸ್ಮರಣೆಯೇ ದೇವರ ಸ್ಮರಣೆ. ಇಡೀ ಸಮಾಜಕ್ಕೆ ದೇವರಾಗಿದ್ದು, ಅಂತಹ ಸೇವೆ ಮಾಡಿದ್ದಾರೆ. ಡಾ ಗುರುರಾಜ ಹೆಬ್ಬಾರ್ ಟ್ರಸ್ಟ್ ಮೂಲಕ ಸಮಾಜ ಸೇವಾ ಕೆಲಸ ಇನ್ನಷ್ಟು ಆಗಲಿ. ಸಮಾಜ ಬದಲಾಯಿಸುವ ಮಾರ್ಗೋಪಯ ಪ್ರತಿ ಕುಟುಂಬದಿAದಲೇ ಮೊದಲು ಆದರೇ ಮಾತ್ರ ಈ ದೇಶ ಸುಭಿಕ್ಷವಾಗಿರುತ್ತದೆ ಎಂದು ತಮ್ಮ ಆಶೀರ್ವಚನದಲ್ಲಿ ನುಡಿದರು.


ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಮಾತನಾಡಿ, ಡಾ.ಗುರುರಾಜ ಹೆಬ್ಬಾರ್ ಅವರ ಕಾಲಾವಧಿಯಲ್ಲಿ ಶಾಶ್ವತವಾದ ಕೆಲಸ ಮಾಡಿದ್ದು, ನಮ್ಮ ತಂದೆಯವರಾದ ದಿವಂಗತ ಹೆಚ್.ಎಸ್. ಪ್ರಕಾಶ್ ಅವರು ಒಡನಾಟವನ್ನು ಹೊಂದಿದ್ದು, ನಾನು ಕೂಡ ಶಾಸಕನಾಗಿ ಡಾ. ಗುರುರಾಜ ಹೆಬ್ಬಾರ್ ಅವರ ಆಶೀರ್ವಾದ ಹಾಗೂ ಸಂಜೀವಿನಿ ಆಸ್ಪತ್ರೆ ಅಧ್ಯಕ್ಷರಾಗಿದ್ದ ಅವರು ನನಗೆ ಅಧ್ಯಕ್ಷರಾಗಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತೇನೆ ಎಂದರು. ಕಾಮಧೇನು ವೃದ್ಧಾಶ್ರಮವನ್ನು ಅತ್ಯಂತ ಪ್ರೀತಿಯಿಂದ ಬೆಳೆಸಿದ್ದಾರೆ. ಅವರ ಆದರ್ಶಗಳನ್ನು ನಾವು ಪಾಲಿಸಬೇಕು. ಅವರು ಬೆಳೆಸಿದಘ ಸಂಸ್ಥೆಯನ್ನು ನಾವು ಬೆಳಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.


ಕಾರ್ಯಕ್ರಮದಲ್ಲಿ ಮೊದಲು ನಗರದ ಸರಕಾರಿ ಮಹಿಳಾ ಕಾಲೇಜು ಮುಂಬಾಗ ಡಾ. ಗುರುರಾಜ ಹೆಬ್ಬಾರ್ ಹೆಸರಿನ ರಸ್ತೆಯ ನಾಮಫಲಕ ಅನಾವರಣಗೊಳಿಸಿದರು. ಇದೆ ವೇಳೆ ನೂರಾರು ಜನರು ರಕ್ತದಾನ ಶಿಬಿರ ಹಾಗೂ ದೇಹದಾನ ನೇತ್ರದಾನ ನೊಂದಣಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಡಾ|| ಗುರುರಾಜ ಹೆಬ್ಬಾರ್ ಸೇವಾ ಪ್ರಶಸ್ತಿ ಪುರಸ್ಕೃತವನ್ನು ವೈದ್ಯಕೀಯ ಕ್ಷೇತ್ರದಲ್ಲಿ ಬೆಂಗಳೂರಿನ ಐಗಾಟ್ ಸಂಸ್ಥಾಪಕ ನಿರ್ದೇಶಕ ಡಾ|| ಎನ್.ಎಸ್. ನಾಗೇಶ್, ಸಮಾಜಸೇವಾ ಕ್ಷೇತ್ರದಲ್ಲಿ ಬೆಂಗಳೂರಿನ ಕರ್ನಾಟಖ ಗಾಂಧಿ ಸ್ಮಾರಕ ನಿಧಿ ನಿರ್ದೇಶಕರಾದ ಜಿ.ಬಿ. ಶಿವರಾಜು ಹಾಗೂ ಪ್ರತಿಭಾ ಪುರಸ್ಕಾರದಲ್ಲಿ ಕಟ್ಟಾಯ ಸರಕಾರಿ ಪ್ರೌಢಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿ ಎಂ. ಬಿಂದುಲತಾ ಇವರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಿದರು.


ಇದೆ ವೇಳೆ ಜನಕಲ್ಯಾಣ ರೀಸರ್ಚ್ ಅಂಡ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬಿ.ವಿ. ಕರೀಗೌಡ, ಡಾ|| ಗುರುರಾಜ ಹೆಬ್ಬಾರ್ ಮೆಮೋರಿಯಲ್‌ಚಾರಿಟೇಬಲ್ ಟ್ರಸ್ಟ್ ಗೌರವಾಧ್ಯಕ್ಷ ಹೆಚ್.ಪಿ. ಮೋಹನ್, ಅಧ್ಯಕ್ಷೆ ಡಾ. ಜಿ. ಪ್ರತಿಭಾ, ಕಾಮಧೇನು ಸಹಕಾರಿ ವಿದ್ಯಾಶ್ರಮದ ಅಧ್ಯಕ್ಷ ಮಾಧವ್ ಶೆಣ್ಯೆ, ಡಾ. ವೈ.ಎಸ್. ವೀರಭದ್ರಪ್ಪ, ಪರಿಪೂರ್ಣ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ಹೆಚ್.ವಿ. ಲಕ್ಷಿö್ಮÃನಾರಾಯಣ್, ಹಿಮ್ಸ್ ಪ್ರಾಂಶುಪಾಲ ಬಿ.ಸಿ. ರವಿಕುಮಾರ್, ರೈತ ಬಂಧು ಸಹಕಾರಿ ಸಂಘ ಅಧ್ಯಕ್ಷ ಬಿ. ಗೋಪಾಲಕೃಷ್ಣ ಪ್ರಭು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಚ್.ಎಲ್. ಮಲ್ಲೇಶ್ ಗೌಡ, ವಿಶ್ವಪಥ ಎಡಿಟರ್ ಆರ್.ಪಿ. ವೆಂಕಟೇಶ್ ಮೂರ್ತಿ, ಕೆ.ಟಿ. ಜಯಶ್ರೀ, ಶಬ್ಬೀರ್ ಅಹಮದ್, ಇತರರು ಉಪಸ್ಥಿತರಿದ್ದರು.

You cannot copy content of this page

Exit mobile version