ಹಾಸನ: ಅನುದಾನಿತ ಹೈಸ್ಕೂಲ್ ನ ಇಬ್ಬರು ಶಿಕ್ಷಕರನ್ನು ನಿಯೋಜನೆಗೊಳಿಸಲು ಸುಮಾರು 40 ಸಾವಿರ ಲಂಚ ಪಡೆಯುವಾಗ ಸೂಪರಿಂಟೆAಡೆAಟ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಜಿಲ್ಲಾ ಪತ್ರಕರ್ತರದ ಭವನದ ಎದುರಿನ ಡಿಡಿಪಿಐ ಕಚೇರಿಯಲ್ಲಿ ನಡೆದಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಅನುದಾನಿತ ಹೈಸ್ಕೂಲ್ ನ ಇಬ್ಬರು ಶಿಕ್ಷಕರನ್ನು ನಿಯೋಜನೆಗೊಳಿಸಲು ಸುಮಾರು 40 ಸಾವಿರ ಲಂಚ ಕೇಳಿದ್ದು, ಲಂಚ ಕೊಡಲು ಇಷ್ಟವಿರದ ಶಿಕ್ಷಕರು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು. ಶಿಕ್ಷಕರ ದೂರು ಆಧರಿಸಿ ಲೋಕಾಯುಕ್ತ ಸಿಪಿಐ ಶಿಲ್ಪಾ ಮತ್ತು ಬಾಲು ಅವರ ನೇತೃತ್ವದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಮೇಲೆ ದಾಳಿ ನಡೆಸಿ ಲಂಚದ ಹಣದ ಸಮೇತ ಸೂಪರಿಂಟೆಂಡೆಂಟ್ ವೇಣುಗೋಪಾಲ್ ಅವರನ್ನು ಬಂಧನ ಮಾಡಿದ್ದಾರೆ. ಈಗಾಗಲೆ ಹಲವಾರು ವರ್ಷಗಳಿಂದಲು ಈತ ಇಂತಹ ಹಣದಾಸೆಗೆ ಬಿದ್ದು ಹಣ ಪೀಕುತ್ತಿರುವುದು ಗಮನದಲ್ಲಿ ಇತ್ತು ಮತ್ತು ಇಂತಹ ಅದಿಕಾರಿಗಳ ವಿರುದ್ದ ಹಲವಾರು ಶಾಲೆಗಳ ವಿಷಯಗಳಲ್ಲಿ ಹಣಕ್ಕೆ ವತ್ತಾಯಿಸಿರುವುದು ಕೂಡ ಕಂಡು ಬಂದಿದೆ.
ಇತನನ್ನು ವಿಚಾರಣೆಗೆ ಒಳಪಡಿಸಿದಾಗ ಉಪನಿರ್ದೇಶಕರು ಆದೇಶದ ಮೆರೆಗೆ ಹಣ ಪಡೆಯುತ್ತಿರುವುದಾಗಿ ಹೇಳಿಕೆ ಪಡೆದು ಸಾರ್ವಜನಿಕ ಶೀಕ್ಷಣ ಇಲಾಖೆ ಉಪ ಉಪನಿರ್ದೇಶಕ ಹೆಚ್.ಕೆ. ಪಾಂಡು ಅವರನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಡಿಡಿಪಿಐ ಸೂಚನೆಯಂತೇ ಲಂಚ ಪಡೆಯುತ್ತಿದ್ದ ಬಗ್ಗೆ ದೂರು ಹಿನ್ನಲೆಯಲ್ಲಿ ಲೋಕಾಯುಕ್ತ ಅದಿಕಾರಿಗಳು ವೇಣುಗೋಪಾಲ್ ಹಾಗು ಡಿಡಿಪಿಐ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.