Wednesday, July 31, 2024

ಸತ್ಯ | ನ್ಯಾಯ |ಧರ್ಮ

ವಾಲ್ಮೀಕಿ ನಿಗಮ ಹಗರಣದ ಬದಲು ಮುಡಾ ಹಗರಣದ ಬಗ್ಗೆ ಹೆಚ್ಚು ಗಮನ: ಬಿಜೆಪಿ ಅತೃಪ್ತರ ಅಸಮಾಧಾನ

ಬೆಂಗಳೂರು: ಬಿಜೆಪಿಯಲ್ಲಿ ಅದರ ನಾಯಕ ಬಿವೈ ವಿಜಯೇಂದ್ರ, ಆರ್‌ ಅಶೋಕ್ ವಿರುದ್ಧದ ಅಸಮಾಧಾನದ ಹೊಗೆ ದಿನದಿಂದ ದಿನಕ್ಕೆ ದಟ್ಟವಾಗುತ್ತಲೇ ಸಾಗಿದೆ. ಯತ್ನಾಳ್‌, ಲಿಂಬಾವಳಿ, ಜಾರಕಿಹೊಳಿ ಸೇರಿದಂತೆ ಹಲವು ನಾಯಕರು ಅವರ ವಿರುದ್ಧ ಕಿಡಿಕಾರುತ್ತಿದ್ದಾರೆ.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ತೆರಿಗೆದಾರರ ಬಹುಕೋಟಿ ಹಣದ ದುರುಪಯೋಗದ ಬಗ್ಗೆ ಸ್ವಲ್ಪವೂ ಮಾಡದೆ, ಮುಡಾ ಹಗರಣದ ಬಗ್ಗೆ ಹೆಚ್ಚಿನ ಗಮನ ಹರಿಸುವ ಪಕ್ಷದ ನಿರ್ಧಾರವನ್ನು ಬಿಜೆಪಿಯ ಒಂದು ವಿಭಾಗ ಸಾರ್ವಜನಿಕವಾಗಿ ವಿರೋಧಿಸುತ್ತಿದೆ.

ಬಿಜೆಪಿ ಶಾಸಕರಾದ ರಮೇಶ್ ಜಾರಕಿಹೊಳಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರು ವಾಲ್ಮೀಕಿ ನಿಗಮದ ಹಗರಣದ ವಿರುದ್ಧ ಪ್ರತ್ಯೇಕ (ಪಾದಯಾತ್ರೆ) ಪಾದಯಾತ್ರೆ‌ ನಡೆಸುವಂತೆ ಒತ್ತಾಯಿಸುತ್ತಿದ್ದಾರೆ, ಇದು ಮುಡಾ ಹಗರಣಕ್ಕಿಂತ ದೊಡ್ಡದು ಮತ್ತು ಮುಖ್ಯವಾದದ್ದು ಎನ್ನುವುದು ಅವರ ಅಭಿಮತ.

“ಆಗಸ್ಟ್ 3 ರಿಂದ ಪ್ರಾರಂಭವಾಗುವ ಪಕ್ಷದ ಉದ್ದೇಶಿತ ‘ಮೈಸೂರು ಚಲೋ’ (ಮುಡಾ ಹಗರಣದ ವಿರುದ್ಧ) ಪಾದಯಾತ್ರೆಗೆ ನನ್ನ ವಿರೋಧವಿಲ್ಲ, ಆದರೆ ಮುಖ್ಯ ಹಗರಣವನ್ನು ಬದಿಗಿರಿಸಿ ಇದನ್ನು ಮಾಡುತ್ತಿರುವುದು ನನಗೆ ಸರಿ ಕಾಣುತ್ತಿಲ್ಲ” ಎಂದು ಜಾರಕಿಹೊಳಿ ಭಾನುವಾರ ಪತ್ರಕಾಗೋಷ್ಟಿಯಲ್ಲಿ ತಿಳಿಸಿದ್ದರು.

“ನಾನು ಮತ್ತು ಯತ್ನಾಳ್‌ ವಿಜಯೇಂದ್ರ ನಾಯಕತ್ವವನ್ನು ಎಂದಿಗೂ ಒಪ್ಪುವುದಿಲ್ಲ. ಇದನ್ನು ನಾವು ಹೈಕಮಾಂಡ್‌ ಎದುರು ಚರ್ಚಿಸಲಿದ್ದೇವೆ” ಎಂದೂ ಜಾರಕಿಹೊಳಿ ಹೇಳಿದ್ದರು.

ಈ ನಾಯಕರ ಪ್ರಕಾರ ವಿಜಯೇಂದ್ರ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರೊಂದಿಗೆ ಕೈ ಜೋಡಿಸಿ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ. ಮೈಸೂರು ಚಲೋ ಉದ್ದೇಶ ಸಿದ್ಧರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದಾಗಿದೆಯೇ ಹೊರತು ಪಕ್ಷವನ್ನು ಕಟ್ಟುವುದಲ್ಲ. ವಿಜಯೇಂದ್ರ ಬಣಕ್ಕೆ ಪಕ್ಷ ಕಟ್ಟುವ ಉದ್ದೇಶ ಇದ್ದಿದ್ದರೆ ಅದು ವಾಲ್ಮೀಕಿ ನಿಗಮದ ಹಗರಣದ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಬೇಕಿತ್ತು.

ಈ ನಡುವೆ ಜಾರಕಿಹೊಳಿ ವಾಲ್ಮೀಕಿ ನಿಗಮದ ಹಗರಣದ ಕುರಿತು ಪ್ರತ್ಯೇಕ ಪಾದಯಾತ್ರೆ (ಕಾಲ್ನಡಿಗೆ) ನಡೆಸುವ ಸುಳಿವು ನೀಡಿದ್ದಾರೆ. ಇದರಲ್ಲಿ ಅವರೊಂದಿಗೆ ಯತ್ನಾಳ್‌ ಹಾಗೂ ಲಿಂಬಾವಳಿ ಕೈ ಜೋಡಿಸುವ ಸಾಧ್ಯತೆಯಿದೆ.

Related Articles

ಇತ್ತೀಚಿನ ಸುದ್ದಿಗಳು