Home ಬ್ರೇಕಿಂಗ್ ಸುದ್ದಿ ಪೀಪಲ್ ಮೀಡಿಯಾ ವರದಿ ಇಂಪ್ಯಾಕ್ಟ್ : ಬಿಜೆಪಿ ಕಾರ್ಯಕರ್ತೆ ಶಕುಂತಲಾ ಅರೆಸ್ಟ್

ಪೀಪಲ್ ಮೀಡಿಯಾ ವರದಿ ಇಂಪ್ಯಾಕ್ಟ್ : ಬಿಜೆಪಿ ಕಾರ್ಯಕರ್ತೆ ಶಕುಂತಲಾ ಅರೆಸ್ಟ್

0

ಉಡುಪಿ ಶೌಚಾಲಯದ ಖಾಸಗಿ ಸಂದರ್ಭದ ಚಿತ್ರೀಕರಣದ ಬಗ್ಗೆ ಟ್ವಿಟ್ ಮಾಡುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆಯ ಹೆಣ್ಣು ಮಕ್ಕಳ ಪ್ರಸ್ತಾಪವನ್ನು ಅನವಶ್ಯಕವಾಗಿ ಎಳೆದು ತಂದ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಎಂಬ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನ ಹೈಗ್ರೌಂಡ್ ಪೊಲೀಸರು ಬಿಜೆಪಿ ಕಾರ್ಯಕರ್ತೆ ಶಕುಂತಲಾ ಅವರನ್ನು ವಶಕ್ಕೆ ಪಡೆದು FIR ದಾಖಲು ಮಾಡಿದ್ದಾರೆ. “ಸಿದ್ದರಾಮಯ್ಯನವರ ಹೆಂಡತಿ ಅಥವಾ ಸೊಸೆಯ ಖಾಸಗಿ ವಿಡಿಯೋ ಮಾಡಿದ್ದರೆ ಸುಮ್ಮನಿರುತ್ತಿದಾದರೇ?” ಎಂಬಂತೆ ಸಾಮಾಜಿಕ ಪ್ರಕರಣವನ್ನು ಸಿದ್ದರಾಮಯ್ಯನವರ ವಯಕ್ತಿಕ ವಿಚಾರಕ್ಕೆ ಎಳೆದು ತಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

ಪೀಪಲ್ ಮೀಡಿಯಾ ಈ ಬಗ್ಗೆ ಮೊಟ್ಟ ಮೊದಲು ವರದಿ ಮಾಡಿ ಎಲ್ಲರ ಗಮನ ಸೆಳೆದಿತ್ತು. ಅಷ್ಟೆ ಅಲ್ಲದೇ ಇದೇ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಹಿಂದೆ ಅನೇಕ ಬಾರಿ ಸಾಮಾಜಿಕ ಸ್ವಾಸ್ಥ್ಯ ಕೆಡುವಂತಹ ರೀತಿಯಲ್ಲಿ ಟ್ವಿಟ್ ಮಾಡಿದ್ದನ್ನು ಪೀಪಲ್ ಮೀಡಿಯಾ ಉಲ್ಲೇಖಿಸಿತ್ತು.

ಕೆಲವೇ ದಿನಗಳ ಹಿಂದೆ ಪ್ರಿಯಾಂಕ್ ಖರ್ಗೆ ಅವರನ್ನು ಉಲ್ಲೇಖಿಸಿ, ಮೈ ಬಣ್ಣದ (ಖರ್ಗೆ ಹೆಸರು ‘ಕರ್ರಗೆ’ ಎಂದು ಉಲ್ಲೇಖ) ಟ್ವಿಟ್ ಮಾಡಲಾಗಿತ್ತು. ಇದೂ ಕೂಡ ವರ್ಣಭೇದ ನೀತಿಯ ಅಡಿಯಲ್ಲಿ ಅಪರಾಧವಾಗಿದೆ. ಆದರೆ ಕಾಂಗ್ರೆಸ್ ಪಕ್ಷ ಈ ಬಗ್ಗೆ ಗಂಭೀರವಾಗಿ ತಗೆದುಕೊಂಡಿರಲಿಲ್ಲ.

ಇನ್ನು ಈಕೆ ಇದೇ ರೀತಿಯ ಇತಿಹಾಸ ಹೊಂದಿದ್ದು, ಒಂದೋ ಪ್ರಚೋದನಕಾರಿ ಅಥವಾ ಸುಳ್ಳು ಮಾಹಿತಿಯ ಹಂಚುವ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾಳೆ. ಈ ಹಿಂದೆಯೂ ಸಹ ಗುಜರಾತ್ ಕಚ್ ನಲ್ಲಾದ ಸೇತುವೆ ದುರಂತದ ಬಗ್ಗೆ ದಾರಿ ತಪ್ಪಿಸುವ ಟ್ವಿಟ್ ಮಾಡಿ ಹಲವ ಕೆಂಗಣ್ಣಿಗೆ ಗುರಿಯಾಗಿದ್ದಳು. ‘ಸೇತುವೆ ದುರಂತ, ಯಾರೋ ಉದ್ದೇಪೂರ್ವಕವಾಗಿಯೇ ಮಾಡಿದ್ದು, ಕಿಡಿಗೇಡಿಗಳು ಸೇತುವೆ ಮುರಿಯಲೆಂದೇ ಕಾಲಿನಿಂದ ಕೇಬಲ್ಲಿಗೆ ಒದ್ದಿದ್ದು’ ಎನ್ನುವ ರೀತಿಯಲ್ಲಿ ಟ್ವಿಟ್ ಮಾಡಿದ್ದಳು.

ಇನ್ನು ಇತ್ತೀಚೆಗೆ ಒಡಿಶಾದಲ್ಲಿ ಸಂಭವಿಸಿದ ಭೀಕರ ಸರಣಿ ರೈಲು ಅಪಘಾತದ ಬಗ್ಗೆಯೂ ಟ್ವಿಟ್ ಮಾಡಿ ‘ಅಪಘಾತವಾದ ಸ್ಥಳದ ಪಕ್ಕದಲ್ಲಿ ಮಸೀದಿ ಇರುವ ಕಾರಣಕ್ಕೇ ರೈಲು ಅಪಘಾತ ಸಂಭವಿಸಿದೆ’ ಎನ್ನುವ ಅರ್ಥ ಬರುವಂತೆ ಟ್ವಿಟ್ ಮಾಡಿ ಮತ್ತೊಮ್ಮೆ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಳು.

ಇದೇ ಕಾರಣಕ್ಕೆ ಒಡಿಶಾ ಪೊಲೀಸರು ಈಕೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು.

ಸಧ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆ ಹೆಣ್ಣು ಮಕ್ಕಳನ್ನು ಉಲ್ಲೇಖಿಸಿ ಬರೆದ ಪೋಸ್ಟ್ ಹೆಚ್ಚು ಗಮನ ಸೆಳೆದು ಶಕುಂತಲಾ ಬಂಧನವಾಗಿ, FIR ದಾಖಲಾಗಿದೆ.

You cannot copy content of this page

Exit mobile version