ಕೇರಳ : ಕೇರಳದ ಶಬರಿಮೆಲೆಗೆ (Sabarimala) ತೆರಳಿದ ಮಂಡ್ಯ (Mandya) ಜಿಲ್ಲೆಯ ಅಯ್ಯಪ್ಪ ಮಾಲಾಧಾರಿಗಳು (Ayyappa Devotees) ಪರದಾಡುವ ಪರಿಸ್ಥಿತಿಯುಂಟಾಗಿದೆ
ಮಂಡ್ಯ ಮೂಲದ ಮಾಲಾಧಾರಿಗಳು ಅಯ್ಯಪ್ಪಸ್ವಾಮಿ ದರ್ಶನಕ್ಕೆ ಹೋಗಿದ್ದು, ಈ ನಡುವೆ ನಿನ್ನೆ ಕೇರಳದ ಏರಿಮಲೈ ತಟ್ಟಿಪಿಟ್ಟಮ್ ಬಳಿ ಅವರ ವಾಹನ ಪಲ್ಟಿಯಾಗಿದೆ. ಆದರೆ ಈ ಸಂದರ್ಭದಲ್ಲಿ ಸಹಾಯಕ್ಕೆ ಯಾರೂ ಸಿಗದೇ ಅಯ್ಯಪ್ಪ ಭಕ್ತರು ಪರದಾಡಿದ್ದಾರೆ. ಬಸ್‌ನಲ್ಲಿ ಮಂಡ್ಯದ ಕೆ.ಆರ್.ಪೇಟೆ ತಾ ಯಾಲದಹಳ್ಳಿ ಕೊಪ್ಪಲು ಗ್ರಾಮ ಮಾಲಾಧಾರಿಗಳು ಇದ್ದರು. ಯಾಲದಹಳ್ಳಿ ಕೊಪ್ಪಲು ಗ್ರಾಮದ ಸುಮಾರು 33 ಮಂದಿ ಶಬರಿಮಲೆಗೆ ತೆರಳಿದ್ರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ.
ಬಸ್‌ನಲ್ಲಿದ್ದ ಅಯ್ಯಪ್ಪನ ಮಾಲಾಧಾರಿಗಳು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಕೆಲವರಿಗೆ ಗಾಯಗಳಾಗಿದ್ದು, ಸ್ಥಳೀಯ ಆಡಳಿತವು ಕೇವಲ ಪ್ರಥಮ ಚಿಕಿತ್ಸೆ ನೀಡಿ ಕಳುಹಿಸಿದೆ. ಇದಾದ ಬಳಿಕ ಸ್ಥಳೀಯ ಆಡಳಿತ ಮಾಲಾಧಾರಿಗಳನ್ನು ತಿರುಗಿ ನೋಡಲಿಲ್ಲ ಎಂದು ಮಾಲಾಧಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಇದೀಗ ಪುಟ್ಟ ಮಾಲಾಧಾರಿಗಳು ರಸ್ತೆಯಲ್ಲಿಯೇ ಕಾಲ ಕಳೆಯುತ್ತಿದ್ದು, ಶಬರಿಮಲೆಗೆ ಹೋಗಲು ಸಾಧ್ಯವಾಗದೇ ಕಂಗಾಲಾಗಿದ್ದಾರೆ. ಇನ್ನೊಂದೆಡೆ ಶಬರಿ ಮಲೆಗೆ ಪರ್ಯಾಯ ಬಸ್ ಕೂಡ ಇಲ್ಲದೇ ಮಾಲಧಾರಿಗಳು ಪಡಬಾರದ ಪರದಾಟ ಅನುಭವಿಸುತ್ತಿದ್ದಾರೆ. ಅಲ್ಲದೇ ತಮ್ಮನ್ನು ಯಾವುದಾರು ವಾಹನ ಕಳಿಸಿ ಊರಿಗೆ ಕಳಿಸಿಕೊಳ್ಳಿ ಎಂದು ಅಯ್ಯಪ್ಪ ಭಕ್ತರು ಅಂಗಲಾಚುತ್ತಿದ್ದಾರೆ
