ಯುಎಸ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವುದಾಗಿ ಮೆಟಾ ಶುಕ್ರವಾರ ಹೇಳಿದೆ. 2021 ರಲ್ಲಿ ಯುಎಸ್ ಕ್ಯಾಪಿಟಲ್‌ಗೆ ಅವರ ಬೆಂಬಲಿಗರು ಹಿಂಸಾತ್ಮಕವಾಗಿ ದಾಳಿ ಮಾಡಿದ ನಂತರ ಜಾರಿಗೆ ತಂದ ನಿಯಮವನ್ನು ಮೇಟಾ ಕೈ ಬಿಟ್ಟಿದೆ.
“ಮಾಜಿ ಅಧ್ಯಕ್ಷ ಟ್ರಂಪ್, ರಿಪಬ್ಲಿಕನ್ ಪಕ್ಷದ ನಾಮನಿರ್ದೇಶಿತರಾಗಿರುವಾಗ ಇನ್ನು ಮುಂದೆ ಈ ಅಮಾನತು ಶಿಕ್ಷೆಗೆ ಒಳಪಡುವುದಿಲ್ಲ” ಎಂದು ಮೇಟಾ ಹೇಳಿದೆ.
ಜನವರಿ 6, 2021 ರಂದು ಯುಎಸ್ ಕ್ಯಾಪಿಟಲ್ ಮೇಲೆ ಡೋನಾಲ್ಡ್ ಟ್ರಂಪ್ ಬೆಂಬಲಿಗರು ದಾಳಿ ಮಾಡಿದ ಒಂದು ದಿನದ ನಂತರ ಟ್ರಂಪ್ ಅವರ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳನ್ನು ಅನಿರ್ದಿಷ್ಟ ಕಾಲಾವಧಿಗೆ ಅಮಾನತುಗೊಳಿಸಲಾಗಿತ್ತು. ಸಾಮಾಜಿಕ ಮಾಧ್ಯಮದಲ್ಲಿ ಹಿಂಸಾಚಾರದಲ್ಲಿ ತೊಡಗಿರುವ ಜನರನ್ನು ಅವರು ಹೊಗಳಿದ್ದಾರೆ. ಈ ಹಿನ್ನೆಲೆಯಲ್ಲಿ ಮೇಟಾ ಈ ನಿರ್ಧಾರಕ್ಕೆ ಬಂದಿದೆ ಎಂದು ನಿಖರ ಕಾರಣ ಕೊಟ್ಟಿತ್ತು.
US ಅಧ್ಯಕ್ಷೀಯ ಅಭ್ಯರ್ಥಿಗಳು “ದ್ವೇಷ ಭಾಷಣ ಮತ್ತು ಹಿಂಸೆಗೆ ಪ್ರಚೋದನೆಯನ್ನು ತಡೆಗಟ್ಟಲು ವಿನ್ಯಾಸಗೊಳಿಸಿದ ನೀತಿಗಳನ್ನು ಒಳಗೊಂಡಂತೆ ಎಲ್ಲಾ Facebook ಮತ್ತು Instagram ಬಳಕೆದಾರರಂತೆ ಅದೇ ಸಮುದಾಯ ಮಾನದಂಡಗಳಿಗೆ ಒಳಪಟ್ಟಿರುತ್ತಾರೆ” ಎಂದು ಅದು ಸೇರಿಸಿದೆ.
ಅಪರಾಧಕ್ಕಾಗಿ ಶಿಕ್ಷೆಗೊಳಗಾದ ಮೊದಲ ಮಾಜಿ ಅಧ್ಯಕ್ಷ ಟ್ರಂಪ್, ಟ್ವಿಟರ್ ಮತ್ತು ಯೂಟ್ಯೂಬ್‌ನಿಂದ ಕೂಡ ನಿಷೇಧಕ್ಕೊಳಗಾಗಿದ್ದರು. ಆ ನಿರ್ಬಂಧಗಳನ್ನು ಕಳೆದ ವರ್ಷವೇ ಬಹುತೇಕ ಸಾಮಾಜಿಕ ಜಾಲತಾಣಗಳಳು ತೆಗೆದುಹಾಕಲಾಗಿದ್ದರೂ, ಟ್ರಂಪ್ ಈಗ ಮುಖ್ಯವಾಗಿ ತನ್ನದೇ ಆದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ‘ಟ್ರೂತ್ ಸೋಷಿಯಲ್’ನಲ್ಲಿ ಸಂವಹನ ನಡೆಸುತ್ತಿದ್ದಾರೆ.
ಸಧ್ಯ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಈಗ ಟ್ರಂಪ್ ಮೇಲಿನ ನಿರ್ಬಂಧ ಕೈ ಬಿಟ್ಟ ಹಿನ್ನೆಲೆಯಲ್ಲಿ ಮತ್ತೆ ಫೇಸ್ಬುಕ್ ಮೂಲಕ ಕಾಣಸಿಗುವ ಕಾಲ ದೂರವಿಲ್ಲ ಎಂದು ಟ್ರಂಪ್ ಬೆಂಬಲಿಗರು ಹರ್ಷ ವ್ಯಕ್ತಪಡಿಸಿದ್ದಾರೆ.