ಕುಂದಾಪುರ, ಸಪ್ಟೆಂಬರ್.13: ಕೋಮು ಉದ್ರೇಕಿಸುವ ಭಾಷಣಗಳ ಮೂಲಕ ದ್ವೇಷ ಹಂಚುತ್ತಿದ್ದ ಚೈತ್ರಾ ಕುಂದಾಪುರ ಎಂಬ ಮಹಿಳೆಯನ್ನು ತಡರಾತ್ರಿ ಸಿಬಿಐ ಪೊಲೀಸರು ವಂಚನೆಯ ಆರೋಪದಡಿ ಬಂಧಿಸಿದ್ದಾರೆ. ಈ ಬಂಧನವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಚೈತ್ರಾ ಬಗ್ಗೆ ಚರ್ಚೆ ನಡೆಯುತ್ತಿದ್ದು, ಆಕೆ ಮತ್ತು ಆಕೆಯ ಸಂಗಡಿಗರು ನಡೆಸಿರುವ ವಂಚನೆಗೆ ಆಕ್ರೋಶ ವ್ಯಕ್ತವಾಗಿದೆ.
ಕುಂದಾಪುರ ಮೂಲದ ಉದ್ಯಮಿ ಹಾಗೂ ರಾಜಕಾರಣಿ ಗೋವಿಂದ ಬಾಬು ಪೂಜಾರಿ ಎನ್ನುವವರಿಗೆ ಬಿಜೆಪಿಯಿಂದ ಬೈಂದೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ಹೇಳಿ ಐದು ಕೋಟಿ ರುಪಾಯಿ ವಂಚಿಸಿದ ಪ್ರಕರಣದಡಿ ಚೈತ್ರಾ ಮತ್ತು ಆಕೆಯ ಸಹಚರರಾದ ಚೈತ್ರಾ ಕುಂದಾಪುರ, ಗಗನ್ ಕಡೂರು, ಶ್ರೀಕಾಂತ ನಾಯಕ್, ಪ್ರಸಾದನನ್ನು ಬಂಧಿಸಲಾಗಿದೆ.
ಚೈತ್ರಾ ಹಾಗೂ ಗ್ಯಾಂಗಿನ ಬಂಧನವಾಗಿ ಹತ್ತು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಸೆಪ್ಟೆಂಬರ್ 23 ರವರೆಗೆ ಪೊಲೀಸ್ ಕಸ್ಟಡಿಗೆ ಹಾಕುವಂತೆ ನ್ಯಾಯಾಲಯ ಆದೇಶ ನೀಡಿದೆ.
ಟಿಕೆಟ್ ಡೀಲ್ ಹಣದಲ್ಲಿ ಚೈತ್ರಾ ಐಷಾರಾಮಿ ಜೀವನ
ಗೋವಿಂದ ಬಾಬು ಪುಜಾರಿಯವರಿಗೆ ವಂಚನೆ ಮಾಡಿರುವ ಬಗ್ಗೆ ಹಲವು ದಿನಗಳಿಂದ ಅಲ್ಲಲ್ಲಿ ಚರ್ಚೆ ನಡೆಯುತ್ತಿದ್ದರೂ ಆಕೆಯ ಮೇಲೆ ದೂರು ದಾಖಲಾಗಿರಲಿಲ್ಲ. ಈ ಮಧ್ಯೆ ಚೈತ್ರಾ 24 ಲಕ್ಷ ರುಪಾಯಿ ಮೌಲ್ಯದ ಹೊಸದಾದ ಕಾರೊಂದನ್ನು ಖರೀದಿಸಿದ್ದು , ಕಾರಿನ ಜೊತೆಗೆ ಇರುವ ಚೈತ್ರಾ ಫೋಟೋ ವೈರಲ್ ಆಗಿತ್ತು. ಇದು ʼಬಾಬಣ್ಣರವರ ಕೃಪೆʼ ಎಂದು ಟ್ರೋಲ್ ಆಗಿತ್ತು