ಹೈಕಮಾಂಡ್ ಸೂಚನೆ ನಡುವೆಯೂ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಚರ್ಚೆ ಮುಂದುವರೆದಿದ್ದು ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ಮತ್ತೊಮ್ಮೆ ಡಿಕೆ ಶಿವಕುಮಾರ್ ಪರ ಸಿಎಂ ರೇಸ್ ಬಗ್ಗೆ ಮಾತನಾಡಿದ್ದಾರೆ. “ಈ ವರ್ಷದ ಡಿಸೆಂಬರ್ ಒಳಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಾರೆ. ಅಕಸ್ಮಾತ್ ಆಗದಿದ್ದರೆ ನನ್ನನ್ನು ಬಂದು ಕೇಳಿ” ಎಂಬ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಈ ಹಿಂದೆ ಬಸವರಾಜ ಶಿವಗಂಗಾ ಅವರು ಹಲವು ಬಾರಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವ ಬಗ್ಗೆ ಡಿಕೆಶಿ ಪರ ಮಾತನಾಡಿದ್ದು, ‘ಡಿಸೆಂಬರ್ ಒಳಗೆ ಖಂಡಿತವಾಗಿಯೂ ಸಿಎಂ ಬದಲಾವಣೆ ಆಗಲಿದ್ದಾರೆ ಎಂದು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಡಿಸೆಂಬರ್ ಒಳಗೆ ಸಿಎಂ ಖುರ್ಚಿ ಖಾಲಿಯಾಗದಿದ್ದರೆ ನನ್ನನ್ನು ಬಂದು ಪ್ರಶ್ನೆ ಮಾಡಿ ಎಂದು ಆತ್ಮವಿಶ್ವಾಸದಲ್ಲಿ ಹೇಳಿದ್ದಾರೆ.
ಈ ಬಗ್ಗೆ ಹೆಚ್ಚಿಗೆ ಏನನ್ನೂ ಮಾತನಾಡುವುದಿಲ್ಲ. ಆದ್ರೆ ವರ್ಷಾಂತ್ಯದಲ್ಲಿ ಸಿಎಂ ಖುರ್ಚಿ ಖಾಲಿಯಾಗುವುದು ನಿಶ್ಚಿತ ಎಂದು ಹೇಳುವ ಮೂಲಕ ಸಂಚಲನ ಸೃಷ್ಟಿಮಾಡಿದ್ದಾರೆ.