ಕ್ರೆಡಿಟ್ ರಿಪೋರ್ಟ್ ನೀಡಲು ಮೇಲೆ ₹100 ಕ್ಕಿಂತ ಹೆಚ್ಚು ಶುಲ್ಕ ವಿಧಿಸಬಾರದು
ದೆಹಲಿ: ಬ್ಯಾಂಕ್‌ಗಳಿಂದ ಮೊದಲ ಬಾರಿಗೆ ಸಾಲ ಪಡೆಯುವವರಿಗೆ ಸಿಬಿಲ್ ಸ್ಕೋರ್ ಕಡ್ಡಾಯವಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ಕ್ರೆಡಿಟ್ ಸ್ಕೋರ್ ಕಡಿಮೆ ಅಥವಾ ಶೂನ್ಯ ಎಂಬ ಕಾರಣಕ್ಕೆ ಮೊದಲ ಬಾರಿಗೆ ಸಾಲಕ್ಕೆ ಅರ್ಜಿ ಸಲ್ಲಿಸುವವರ ಅರ್ಜಿಯನ್ನು ತಿರಸ್ಕರಿಸಬಾರದು ಎಂದು ಕೇಂದ್ರ ತಿಳಿಸಿದೆ.
ಆದರೆ, ಅರ್ಜಿದಾರರ ಹಿನ್ನೆಲೆಯನ್ನು ಪರಿಶೀಲಿಸಲು ಬ್ಯಾಂಕ್‌ಗಳಿಗೆ ಸೂಚಿಸಿದೆ. ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಕೇಂದ್ರ ಸಹಾಯಕ ಸಚಿವ ಪಂಕಜ್ ಚೌಧರಿ ಈ ಉತ್ತರವನ್ನು ನೀಡಿದರು.
ಕ್ರೆಡಿಟ್ ಮಾಹಿತಿ ಕಂಪನಿಗಳು ವ್ಯಕ್ತಿಯ ಕ್ರೆಡಿಟ್ ವರದಿಗಳನ್ನು ನೀಡಲು ₹100 ವರೆಗೆ ಶುಲ್ಕ ವಿಧಿಸಬಹುದು ಮತ್ತು ಅದಕ್ಕಿಂತ ಹೆಚ್ಚಿನ ಶುಲ್ಕ ವಿಧಿಸುವುದು ಸರಿಯಲ್ಲ ಎಂದು ಪಂಕಜ್ ಚೌಧರಿ ಸದನಕ್ಕೆ ತಿಳಿಸಿದರು.
ಸಾಲ ಮಂಜೂರು ಮಾಡುವಾಗ ಕನಿಷ್ಠ ಸಿಬಿಲ್ ಸ್ಕೋರ್ ಎಂದು ಆರ್‌ಬಿಐ ನಿಗದಿಪಡಿಸಿಲ್ಲ ಎಂದು ಕೇಂದ್ರ ಹೇಳಿದೆ. ಕೇವಲ ಸಾಲದ ಇತಿಹಾಸ ಇಲ್ಲ ಎಂಬ ಕಾರಣಕ್ಕೆ ಮೊದಲ ಬಾರಿಗೆ ಸಾಲಕ್ಕೆ ಅರ್ಜಿ ಸಲ್ಲಿಸುವವರನ್ನು ತಿರಸ್ಕರಿಸಬಾರದು ಎಂದು ಸಾಲ ನೀಡುವ ಸಂಸ್ಥೆಗಳಿಗೆ ತಿಳಿಸಲಾಗಿದೆ ಎಂದು ಅವರು ತಿಳಿಸಿದರು. ಈ ಕುರಿತು ಆರ್‌ಬಿಐ ಕೂಡ ಆದೇಶ ಹೊರಡಿಸಿದೆ ಎಂದು ಹೇಳಿದರು.