Home ರಾಜ್ಯ ನರೇಂದ್ರ ಮೋದಿಯವರಿಂದ ಆಹಾರ ಭದ್ರತಾ ಕಾಯ್ದೆ ದುರುಪಯೋಗ: ಮುಖ್ಯಮಂತ್ರಿ ಸಿದ್ದರಾಮಯ್ಯ

ನರೇಂದ್ರ ಮೋದಿಯವರಿಂದ ಆಹಾರ ಭದ್ರತಾ ಕಾಯ್ದೆ ದುರುಪಯೋಗ: ಮುಖ್ಯಮಂತ್ರಿ ಸಿದ್ದರಾಮಯ್ಯ

0

ಮಂಜೇಶ್ವರಲ್ಲಿದ್ದರೆ ಕನ್ನಡ ನೆಲದಲ್ಲಿರುವಂತೆ ಭಾಸವಾಗುತ್ತದೆ-ಸಿಎಂ

ಮಂಜೇಶ್ವರ: ಏಪ್ರಿಲ್ 5 : ಕನ್ನಡದ ಉಳಿವಿಗಾಗಿ ಹೋರಾಡುವ ಕಾಂಗ್ರೆಸ್ ಬೆಂಬಲಿತ ಯುಡಿಎಫ್ ಅಭ್ಯರ್ಥಿ ಹಾಲಿ ಶಾಸಕ ಅಶ್ರಫ್ ಅವರನ್ನು ಜನರು ಬಹುಮತದೊಂದಿಗೆ ಗೆಲ್ಲಿಸುವ ವಿಶ್ವಾಸವಿದೆಯೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಮಂಜೇಶ್ವರದಲ್ಲಿ ಕಾಂಗ್ರೆಸ್ ಬೆಂಬಲಿತ ಯುಡಿಎಫ್ ಅಭ್ಯರ್ಥಿ, ಹಾಲಿ ಶಾಸಕ ಅಶ್ರಫ್ ಅವರ ಪರವಾಗಿ ಚುನಾವಣಾ ಪ್ರಚಾರ ಮಾಡಿ ಮಾತನಾಡಿದರು.

ಮಂಜೇಶ್ವರದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಯುಡಿಎಫ್ ಅಭ್ಯರ್ಥಿಯಾದ ಶಾಸಕ ಅಶ್ರಫ್ ಅವರು ಈ ಹಿಂದೆಯೂ ಆಯ್ಕೆಯಾಗಿ ಜನಸೇವೆ ಸಲ್ಲಿಸಿದ್ದಾರೆ. ಈ ಬಾರಿಯೂ ಅವರಿಗೆ ಜನಾರ್ಶೀವಾದ ಮಾಡಬೇಕೆಂದು ಕೋರುತ್ತಿರುವುದಾಗಿ ತಿಳಿಸಿದರು.

ಕನ್ನಡಕ್ಕಾಗಿ ಹೋರಾಡುವ ಯುಡಿಎಫ್ ಅಭ್ಯರ್ಥಿ ಅಶ್ರಫ್ ಅವರನ್ನು ಬೆಂಬಲಿಸಿ

ಮಂಜೇಶ್ವರಕ್ಕೆ ಬಂದರೆ ಕನ್ನಡ ನೆಲದಲ್ಲೇ ಇರುವಂತೆ ಭಾಸವಾಗುತ್ತದೆ. ಕನ್ನಡ ಭಾಷಿಕರು ಹೆಚ್ಚಿರುವ ಪ್ರದೇಶವಾಗಿರುವ ಮಂಜೇಶ್ವರ ಗೋವಿಂದಪೈ ರಂತಹ ಅನೇಕ ಸಾಹಿತ್ಯ ದಿಗ್ಗಜರು ಈ ನೆಲದಿಂದ ಹೊರಹೊಮ್ಮಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಕೇರಳ ರಾಜ್ಯದಲ್ಲಿಯೂ ಕನ್ನಡದ ಉಳಿವಿಗೆ ಕಾರಣರಾಗಿರುವ ಇಲ್ಲಿನ ಜನರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. 2019 ರಲ್ಲಿ ಪುದುಚೆರಿಗೆ ನಾನು ಭೇಟಿ ನೀಡಿದ್ದೆ. ಈಗ ಪಕ್ಷದ ವರಿಷ್ಠರ ತೀರ್ಮಾನದಂತೆ ಮತಯಾಚನೆಗೆ ಬಂದಿದ್ದು, ಕಾಂಗ್ರೆಸ್ ಬೆಂಬಲಿತ ಯುಡಿಎಫ್ ಅಭ್ಯರ್ಥಿಯನ್ನು ಜನರು ಖಂಡಿತವಾಗಿ ಗೆಲ್ಲಿಸುವರೆಂಬ ವಿಶ್ವಾಸವಿದೆ. ಕನ್ನಡದ ಉಳಿವಿಗಾಗಿ ಹೋರಾಡುವ ಅಶ್ರಫ್ ರವರನ್ನು ಇಲ್ಲಿನ ಕನ್ನಡಿಗರು ಒಕ್ಕೊರಲಿನಿಂದ ಮತನೀಡಿ ಬೆಂಬಲಿಸಿ ಎಂದು ಕೋರಿದರು.

ಬಿಜೆಪಿಯವರಿಗೆ ಯಾವುದೇ ಸಿದ್ಧಾಂತವಿಲ್ಲ

ಕೇರಳದಲ್ಲಿ ಬಿಜೆಪಿಗೆ ಸ್ಥಾನವಿಲ್ಲ. ಏಕೆಂದರೆ ಬಿಜೆಪಿಯವರು ರೈತರ, ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ, ಮಹಿಳೆಯರ ವಿರೋಧಿಗಳು. ಬಿಜೆಪಿಯವರಿಗೆ ಯಾವುದೇ ಸಿದ್ಧಾಂತವಿಲ್ಲ. ಶ್ರೀಮಂತರು, ಮೇಲ್ವರ್ಗದವರು, ಮತ್ತು ಕಾರ್ಪೊರೇಟ್ ಸಂಸ್ಥೆಗಳ ಪರವಾಗಿ ಬಿಜೆಪಿಯಿದೆ. ಕರ್ನಾಟಕದಲ್ಲಿ 2023 ರ ಚುನಾವಣೆಯ ಮುಂಚೆ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತು. ಆದರೆ ಗ್ಯಾರಂಟಿಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ. ಮಾಡಿದರೂ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಪ್ರಧಾನಿ ಮೋದಿಯವರು ಟೀಕಿಸಿದ್ದರು ಎಂದು ತಿಳಿಸಿದರು.

ಗ್ಯಾರಂಟಿಗಳಿಂದ ಜನರ ಹಣ ಉಳಿತಾಯವಾಗಿದೆ

ಗ್ಯಾರಂಟಿಗಳಿಂದ ಸರ್ಕಾರ ಖಜಾನೆ ಖಾಲಿಯಾಗುತ್ತದೆಂಬ ಬಿಜೆಪಿಯವರ ನಿರಂತರ ಟೀಕೆಗಳು ಬಂದವು. ಆದರೆ ಕಾಂಗ್ರೆಸ್ ಸರ್ಕಾರ ಕಳೆದ ಮೂರು ವರ್ಷಗಳಿಂದ ಗ್ಯಾರಂಟಿಗಳನ್ನು ಸಮರ್ಪಕವಾಗಿ ಜಾರಿಗೊಳಿಸಿದೆ. ಇದುವರೆಗೆ 1.31 ಲಕ್ಷ ಕೋಟಿಗಳನ್ನು ಗ್ಯಾರಂಟಿಗಳಿಗೆ ವೆಚ್ಚ ಮಾಡಲಾಗಿದೆ. 2023 ರ ಮೇ ಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ತಿಂಗಳೊಳಗೆ ಶಕ್ತಿ ಯೋಜನೆ ಜಾರಿಮಾಡಲಾಯಿತು. ಕರ್ನಾಟಕದಲ್ಲಿ 3.5 ಕೋಟಿ ಮಹಿಳೆಯರು ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಸಂಚರಿಸುವ ಯೋಜನೆಯಾಗಿದೆ. ಕೇರಳದಲ್ಲಿಯೂ ಇಂದಿರಾ ಗ್ಯಾರಂಟಿಗಳನ್ನು ಘೋಷಿಸಲಾಗಿದೆ. ಉಚಿತ ಪ್ರಯಾಣ ಮಾಡುವ ಈ ಯೋಜನೆಯಿಂದ ಜನರಿಗೆ ಹಣ ಉಳಿತಾಯವಾಗಲಿದೆ ಎಂದರು.

  • ಯೋಜನೆಯಿಂದ ಮಹಿಳೆಯರ ಖರೀದಿ ಮಾಡುವ ಶಕ್ತಿ ಹೆಚ್ಚಳ
    ಆರ್ಥಿಕತೆಯಲ್ಲಿ ಯೂನಿವರ್ಸಲ್ ಬೇಸಿಕ್ ಇನಕ್ಂ ತತ್ವದಂತೆ ತಳಸಮುದಾಯದವರಿಗೆ ಆರ್ಥಿಕ ನೆರವು ನೀಡಿದರೆ, ಆ ಹಣ ವ್ಯರ್ಥವಾಗುವುದಿಲ್ಲ.ಶಕ್ತಿ ಯೋಜನೆಯಿಂದ ಉಳಿತಾಯವಾಗುವ ಹಣದಿಂದ ಮಹಿಳೆಯರ ಖರೀದಿ ಮಾಡುವ ಶಕ್ತಿ ಹೆಚ್ಚಾಗುತ್ತದೆ. ಗೃಹಲಕ್ಷ್ಮಿ ಯೋಜನೆಯಡಿ 1ಕೋಟಿ .26 ಲಕ್ಷ ಮಹಿಳೆಯರಿಗೆ ತಿಂಗಳಿಗೆ 2000 ರೂ.ಗಳನ್ನೂ ಒದಗಿಸಲಾಗುತ್ತಿದೆ.
    ಬಿಜೆಪಿಗೆ ಇಂಥ ಜನಪರ ಯೋಜನೆಗಳನ್ನು ರೂಪಿಸಿ ಗೊತ್ತಿಲ್ಲ ಬಿಜೆಪಿಗೆ ಇಂಥ ಜನಪರ ಯೋಜನೆಗಳನ್ನು ರೂಪಿಸಿ ಗೊತ್ತಿಲ್ಲ. ಆದರೆ ಮಹಾರಾಷ್ಟ್ರ ರಾಜ್ಯದಲ್ಲಿ ಈ ಯೋಜನೆಗಳನ್ನು ನಕಲು ಮಾಡಿದ್ದಾರೆ.

ನುಡಿದಂತೆ ನಡೆದ ರಾಜ್ಯ ಕರ್ನಾಟಕ ಮಾತ್ರ

ಕೇರಳ ರಾಜ್ಯ ಕೂಡ ನುಡಿದಂತೆ ನಡೆಯಲಿದೆ ಎಂಬ ನಂಬಿಕೆ ವಿಶ್ವಾಸವಿದ್ದರೆ ಯುಡಿಎಫ್ ಅಭ್ಯರ್ಥಿ ಅಶ್ರಫ್ ಅವರಿಗೆ ಮತ ಹಾಕಬೇಕು ಎಂದರು.

ಕಾಂಗ್ರೆಸ್ ಬಡವರ ಪರವಾಗಿರುವ ಪಕ್ಷ
ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಒದಗಿಸಲಾಗುತ್ತಿದೆ. ಬಡವರು ಯಾರೂ ವಿದ್ಯುತ್ ಬಿಲ್ ಕಟ್ಟುವಂತಿಲ್ಲ. ಕಾಂಗ್ರೆಸ್ ಬಡವರ ಪರವಾಗಿರುವ ಪಕ್ಷವಾಗಿದ್ದು ಯುಡಿಎಫ್ ಕೂಡ ಬಡವರ ಪರವಾಗಿರುವ ಮಿತ್ರ ಪಕ್ಷ ಎಂದರು.

ನರೇಂದ್ರ ಮೋದಿಯವರಿಂದ ಆಹಾರ ಭದ್ರತಾ ಕಾಯ್ದೆ ದುರುಪಯೋಗ

ಆಹಾರ ಭದ್ರತಾ ಕಾಯ್ದೆಯನ್ನು ಮನಮೋಹನ್ ಸಿಂಗ್ ಅವರು ಪ್ರಧಾನಿಗಳಾಗಿದ್ದಾಗ ಜಾರಿ ಮಾಡಿದರು. ನರೇಂದ್ರ ಮೋದಿಯವರು ಇದನ್ನು ವಿರೋಧಿಸಿದ್ದರು, ಆದರೆ ಈಗ ಅದನ್ನು ದುರುಪಯೋಗ ಮಾಡಿಕೊಂಡಿದ್ದಾರೆ. 2023 ರಲ್ಲಿ ಮುಖ್ಯಮಂತ್ರಿಯಾದಾಗ 5 ಕೆಜಿ ಜೊತೆಗೆ ಮತ್ತು 5 ಕೆಜಿ ಅಕ್ಕಿಯನ್ನು ಕೊಡುವುದಾಗಿ ಘೋಷಿಸಿದಾಗ ಅಕ್ಕಿ ಕೊಡಲು ಕೇಂದ್ರ ಸರ್ಕಾರ ಅಕ್ಕಿ ಲಭ್ಯವಿದ್ದರೂ ಅದನ್ನು ಕೊಡಲಿಲ್ಲ ಒಪ್ಪಲಿಲ್ಲ. ಅದಕ್ಕಾಗಿ ಅಕ್ಕಿಯ ಮೊತ್ತವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಯಿತು. ಖಾತೆಗೆ ನೇರವಾಗಿ ಹಣ ಹಾಕಿದರೆ ಭ್ರಷ್ಟಾಚಾರ ನಡೆಯುವುದಿಲ್ಲ. ಮಧ್ಯವರ್ತಿಗಳ ಹಾವಳಿಯೂ ಇಲ್ಲ ಎಂದರು.

ಕೇರಳದಲ್ಲಿ ಶೇ. 8% ರಷ್ಟು ನಿರುದ್ಯೋಗವಿದೆ
ದೇಶಡೆಲ್ಲೆಡೆ ನಿರುದ್ಯೋಗ ಸಮಸ್ಯೆ ಇದೆ. ಆದರೆ ಕರ್ನಾಟಕದಲ್ಲಿ 2.5%, ಕೇರಳದಲ್ಲಿ 8% ನಿರುದ್ಯೋಗವಿದೆ ಎಂದರು. ನಿರುದ್ಯೋಗ ಸಮಸ್ಯೆಯಿಂದಾಗಿ ಯುವಜನಾಂಗ ವಿದೇಶಗಳಿಗೆ ಹೋಗುತ್ತಿದ್ದಾರೆ. ಕೇರಳದಲ್ಲಿ 8.05% ಹಣದುಬ್ಬರವಿದೆ. ಕರ್ನಾಟಕದಲ್ಲಿ 4% ಒಳಗಿದೆ. ಎನ್ ಡಿ. ಎಫ್ ಪಕ್ಷಕ್ಕೆ ಮತ ಹಾಕಬೇಕೆ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ಕೇರಳ ಸಾಲಗಾರ ರಾಜ್ಯವಾಗಿದೆ ಆರ್ಥಿಕ ಹೊಣೆಗಾರಿಕೆ ಕಾಯ್ದೆಯಡಿ ವಿತೀಯ ಕೊರತೆ 3.5% ರಷ್ಟಿದೆ. ಒಟ್ಟು ಜಿಡಿಪಿ ಯ 25%ಒಳಗಿರಬೇಕು, ಆದರೆ 35% ಇದ್ದು, ಕೇರಳ ರಾಜ್ಯ ಆರ್ಥಿಕ ದಿವಾಳಿಯತ್ತ ಹೋಗಿದೆ. ಆದ್ದರಿಂದ ಬಿಜೆಪಿಗೆ ಮತ ಹಾಕಬೇಡಿ. ಅದು ಸಂವಿಧಾನ, ಬಡವರ, ಮಹಿಳೆಯರ, ರೈತರ ವಿರೋಧಿ ಪಕ್ಷವಾಗಿದೆ ಎಂದರು.

You cannot copy content of this page

Exit mobile version