ಬೆಂಗಳೂರು : 19 ವರ್ಷದ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ(gang rape) ಆರೋಪದ ಮೇಲೆ ಮಾಗಡಿ(Magadi) ಠಾಣಾ ಪೊಲೀಸರು ಮೂವರು ಯುವಕರನ್ನ ಬಂಧಿಸಿದ್ದಾರೆ. ವಿಕಾಸ್, ಪ್ರಶಾಂತ್, ಚೇತನ್ ಬಂಧಿತ ಆರೋಪಿಗಳು.
19 ವರ್ಷದ ಯುವತಿ ಬೆಂಗಳೂರಿನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ವಿಕಾಸ್ ಎಂಬಾತ ಯುವತಿಯನ್ನ ಪರಿಚಯ ಮಾಡಿಕೊಂಡು ಪ್ರೀತಿಯ ನೆಪದಲ್ಲಿ ಯುವತಿಯ ಜೊತ ಲೈಂಗಿಕ ಸಂರ್ಪಕ ಬೆಳೆಸಿದ್ದ. ಈ ಮಧ್ಯೆ ಇದನ್ನು ವಿಡಿಯೋ ಮಾಡಿಕೊಂಡಿದ್ದ ವಿಕಾಸ್ ನಾನು ಕರೆದಾಗ ಬರಬೇಕೆಂದು ಬೆದರಿಕೆ ಹಾಕಿದ್ದ. ಮೂರು ತಿಂಗಳ ಹಿಂದೆ ವಿಡಿಯೋ ಮಾಡಿಕೊಂಡು ಬೆದರಿಕೆ ಎನ್ನಲಾಗಿದೆ. ಈ ವಿಡಿಯೋ ತೋರಿಸುತ್ತೇನೆ ಎಂದು ಬೆದರಿಸಿ,ನಂತರ ಮೂವರು ಸೇರಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಯುವತಿ ಮಾಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
