ಹಾಸನ : ರಾಜೀವ್ ಆರ್ಯುವೇದ ಕಾಲೇಜಿನ ವಿದ್ಯಾರ್ಥಿಗಳು ರೀಲ್ಸ್ ಮಾಡುವ ಉದ್ದೇಶದಲ್ಲಿ ಪೆಟ್ರೋಲ್ ಬಾಂಬ್ ಸ್ಪೋಟಿಸಿ ಹುಚ್ಚಾಟ ಪ್ರದರ್ಶನ ಮಾಡಿದ ಘಟನೆ ನಗರದ ಹೊರವಲಯ ಬೊಮ್ಮನಾಯಕನಹಳ್ಳಿ ಬಳಿ ಸಂಭವಿಸಿದೆ.
ನಗರದ ಹೊರ ವಲಯದಲ್ಲಿರುವ ರಾಜೀವ್ ಆರ್ಯುವೇದ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡುತ್ತಿರುವ ಮೂವರು ವಿದ್ಯಾರ್ಥಿಗಳು ರೀಲ್ಸ್‌ಗಾಗಿ ಪಟ್ರೋಲ್ ಬಾಂಬ್ ಸ್ಪೋಟಿಸಿ ಹುಚ್ಚಾಟ ಪ್ರದರ್ಶನದ ಮೂಲಕ ಎಲ್ಲೆ ಮೀರಿ ವರ್ತನೆ ಪ್ರದರ್ಶಿಸಿದ್ದಾರೆ. ನಂತರ ಇನ್ಸ್ಟಾಗ್ರಾಂನಲ್ಲಿ ಯುವಕರು ವೀಡಿಯೋ ಅಪ್‌ಲೋಡ್ ಮಾಡಿದ್ದಾರೆ. ಹಾಸನ ನಗರದ ಇಬ್ಬರು ಯುವಕರು ಹಾಗೂ ಕುಣಿಗಲ್ ತಾಲ್ಲೂಕಿನ ಓರ್ವ ವಿದ್ಯಾರ್ಥಿಯಿಂದ ಈ ಹುಚ್ಚಾಟ ನಡೆದಿದೆ. ಪ್ಲಾಸ್ಟಿಕ್ ಕವರ್ ಒಳಗೆ ಪೆಟ್ರೋಲ್ ತುಂಬಿಸಿ ಅದರ ಮೇಲೆ ಆಟಂಬಾಂಬ್ ಇಟ್ಟು ಬೆಂಕಿಯನ್ನು ಓರ್ವ ವಿದ್ಯಾರ್ಥಿ ಹಚ್ಚಿದ್ದಾನೆ. ಈ ವೇಳೆ ಬಾರಿ ಪ್ರಮಾಣದಲ್ಲಿ ಪೆಟ್ರೋಲ್ ಬಾಂಬ್ ಸ್ಟೋಟಗೊಂಡಾಗ ಸುತ್ತಮುತ್ತ ನಿವಾಸಿಗಳು ಹಾಗೂ ಪಾದಚಾರಿಗಳು ಬೆದರಿದ್ದಾರೆ.
ಪೆಟ್ರೋಲ್ ಬಾಂಬ್ ಸ್ಪೋಟಗೊಂಡ ಸಲ್ಪ ದೂರದಲ್ಲಿ ಪೆಟ್ರೋಲ್ ಟ್ಯಾಂಕರ್ ಗಳು ಸಾಲು ಸಾಲಾಗಿ ನಿಂತಿದ್ದು, ಸಲ್ಪ ದೂರದಲ್ಲೆ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆ ಇದ್ದರೂ ಸಲ್ಪವೂ ತಿಳುವಳಿಕೆ ಇಲ್ಲದಾಗೆ ಈ ಪೆಟ್ರೋಲ್ ಬಾಂಬನ್ನು ವಿದ್ಯಾರ್ಥಿಗಳು ಸ್ಪೋಟಿಸಿದ್ದಾರೆ. ಸಲ್ಪ ವ್ಯತ್ಯಾಸವಾಗಿದ್ದರೂ ಬಾರಿ ಅವಘಡವೇ ಸಂಭವಿಸುತಿತ್ತು. ಪೆಟ್ರೋಲ್ ಬಾಂಬ್ ಸ್ಫೋಟಿಸುವ ವಿಡಿಯೋ ಮಾಡಿ ಇನ್ಸ್ಟಾಗ್ರಾಂನಲ್ಲಿ ವಿದ್ಯಾರ್ಥಿಗಳು ಅಪ್‌ಲೋಡ್ ಮಾಡಿದ್ದಾರೆ. ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ
ಕರ್ನಾಟಕ ಪೊಲೀಸ್ ಕಾಯ್ದೆಯಡಿ ಮೂವರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು ಮಾಡಿ ಮೂವರನ್ನು ಕೋರ್ಟ್‌ಗೆ ಹಾಜರುಪಡಿಸಿರುವುದಾಗಿ ಹೇಳಲಾಗಿದೆ. ಓದಲು ಬಂದ ವಿದ್ಯಾರ್ಥಿಗಳಲ್ಲಿ ಇಂತಹ ಹುಚ್ಚಾಟ ಬೇಕಾಗಿತ್ತಾ! ಇಂತಹ ವಿದ್ಯಾರ್ಥಿಗಳು ಸಮಾಜದಲ್ಲಿ ಮಾರಕ ಎಂದು ಸಾರ್ವಜನಿಕ ವಲಯದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.