ಹಾಸನ : ನಗರಸಭೆಯ ಆಸ್ತಿ ತೆರಿಗೆ ಕಟ್ಟುವವರಿಗೆ ರಿಯಾಯತಿಯನ್ನು ನೀಡಲಾಗುತ್ತಿದೆ. ಅದ್ದರಿಂದ ಹಾಸನ ನಗರಸಭಾ ವ್ಯಾಪ್ತಿಯ ಸಾರ್ವಜನಿಕರು ಆಸ್ತಿ ತೆರಿಗೆಯನ್ನು ತಕ್ಷಣ ಪಾವತಿ ಮಾಡಿ ರಿಯಾಯತಿಯನ್ನು ಪಡೆಯಿರಿ ಎಂದು ನಗರಸಭಾಧ್ಯಕ್ಷ ಎಂ. ಚಂದ್ರೇಗೌಡ ಕರೆ ನೀಡಿದ್ದಾರೆ.
ಅವರು ಮಾಧ್ಯಮದೊಂದಿಗೆ ಮಾತನಾಡಿ, ಇದೀಗ ಆಸ್ತಿತೆರಿಗೆಯನ್ನು ನಗರಸಭೆಯಲ್ಲಿ ಕಟ್ಟಿಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದ್ದು, ಇದಕ್ಕೆ ಈ ತಿಂಗಳು ಶೇ5.ರಷ್ಟು ರಿಯಾಯತಿ ನೀಡಲಾಗುತ್ತಿದೆ.
ಈ ಹಿಂದೆ ತೆರಿಗೆ ಕಟ್ಟಿಕೊಳ್ಳಲು ಎರಡು ಕೌಂಟರ್ ಗಳನ್ನು ಮಾತ್ರ ತೆರೆಯಾಲಾಗುತ್ತಿತ್ತು, ಆದರೆ ಇದೀಗ ವಾರ್ಡ್ ವಿಂಗಡಣೆ ಮಾಡಿ ಹಲವಾರು ಕೌಂಟರ್ ಗಳನ್ನು ತೆರೆದಿದ್ದು, ಸುಲಭವಾಗಿ ತೆರೆಗೆ ಕಟ್ಟ ಬಹುದಾಗಿದೆ.
ಇದರೊಂದಿಗೆ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಶಾಮಿಯಾನ, ಚೇರ್‌ಗಳು ಮತ್ತು ಕುಡಿಯುವ ನೀರಿನ ವ್ಯವಸ್ತೆಯನ್ನು ಮಾಡಲಾಗಿದೆ, ಯಾವುದೇ ಗೊಂದಲ, ಅಡ್ಡಿ ಆತಂಕವಿಲ್ಲದೇ ತೆರಿಗೆ ಕಟ್ಟಲು ವ್ಯವಸ್ತೆ ಕಲ್ಪಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸುತ್ತಾ, ಹಾಸನ ನಗರದ ಸಾರ್ವಜನಿಕರು ತಮ್ಮ ತೆರಿಗೆಗಳನ್ನು ತಕ್ಷಣ ಪಾವತಿ ಮಾಡಿ, ನಗರದ ಅಭಿವೃದ್ದಿ ಮತ್ತು ಏಳಿಗೆಗೆ ಸಹಕಾರ ನೀಡಿ ಎಂದು ಮನವಿ ಮಾಡಿದ್ದಾರೆ.