ಹಾಸನ : ಹಿರಿಯ ವಕೀಲ ರಾಕೇಶ್ ಕಿಶೋರ್ ಎಂಬುವವರು ಸುಪ್ರೀ ಕೋರ್ಟ್ ಸಿಜೆಐ ಬಿ ಆರ್ ಗವಾಯಿಯವರ ಮೇಲೆ ಶೂ ಎಸೆದು ಹಲ್ಲೆ ಮಾಡಿದ್ದನ್ನು ಬಹಳ ನೋವಿನಿಂದ ಜ್ಞಾನ ಪ್ರಕಾಶ ಸ್ವಾಮೀಹಿಯವರು ಖಂಡನೆ ಮಾಡಿದ್ದಾರೆ. ಈ ಭರಾಟೆಯಲ್ಲಿ ನ್ಯಾಯಾಂಗದ ವಿರುದ್ಧ ಮಾತನಾಡಿರುವುದಕ್ಕೆ ನಾವೂ ಕೂಡ ವಿಷಾದ ವ್ಯಕ್ತಪಡಿಸುತ್ತೇವೆ. ಅವರೂ ಕೂಡ ಕ್ಷಮೆ ಕೋರಿದ್ದಾರೆ. ಆದರೂ ಕೂಡ ವಕೀಲರು ಮತ್ತು ವಕೀಲರ ಸಂಘ ಅವರ ವಿರುದ್ಧ ಪ್ರತಿಭಟನೆ ಮಾಡುತ್ತಿರುವುದನ್ನು ನೋಡಿದರೆ ನಮಗೆ ನೋವುಂಟಾಗಿದೆ. ಈ ಕಾರಣಕ್ಕೆ ವಕೀಲರಲ್ಲಿ ವಕೀಲರಲ್ಲಿ ಮತ್ತು ರಾಜ್ಯ ವಕೀಲರ ಸಂಘಕ್ಕೆ ನಾವು ಮನವಿ ಮಾಡುತ್ತೇವೆ ದಯವಿಟ್ಟು ಇದನ್ನು ಇಲ್ಲಿಗೆ ಕೈಬಿಡಬೇಕೆಂದು ಕೇಳಿಕೊಳ್ಳುತಯ್ತೇವೆ. ಸ್ವಾಮೀಜಿಯವರೂ ಕ್ಷಮೆ ಕೇಳಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ವಕೀಲ ರಾಕೇಶ್ ಕಿಶೋರ್ ಸಿಜೆಐ ಅವರ ಮೇಲೆ ನಡೆಸಿದ ಕೃತ್ಯಕ್ಕೆ ಕ್ಷಮೆಯನ್ನೇ ಕೇಳುವುದಿಲ್ಲವೆಂದು ಕುಳಿತಿದ್ದಾರೆ. ಅವರ ವಿರುದ್ಧ ಯಾವ ರೀತಿಯ ಹೋರಾಟವನ್ನು ಕೈಗೊಳ್ಳುತ್ತೀರಿ ಎಂಬುದನ್ನು ಸ್ಪಷ್ಟಪಡಿಸಬೇಕು.
ಜಿಲ್ಲಾಧಿಕಾರಿಯ ವರ್ಗಾವಣೆ ಬಗ್ಗೆ ಈಗಾಗಲೇ ನೀವು ಮಾತನಾಡಿದ್ದೀರಿ. ದಯಮಾಡಿ ಸರಳತೆ ಮತ್ತು ಪ್ರಾಮಾಣಿಕತೆಯಿಂದ ಜಿಲ್ಲಾಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವಂತಹ ಕೆಲಸವನ್ನು ಮಾಡಬಾರದು. ಬದಲಿಗೆ ನೀವು ಸಲಹೆ ಸೂಚನೆಗಳನ್ನು ಕೊಡಿ, ಅವರೂ ಕೂಡ ಬದಲಾವಣೆ ಮಾಡಿಕೊಳ್ಳಲಿ. ನಮ್ಮಲ್ಲಿ ತಪ್ಪುಗಳಿದ್ದರೆ ನಾವೂ ಕೂಡ ಬದಲಾವಣೆ ಮಾಡಿಕೊಳ್ಳುತ್ತೇವೆ. ಈ ಮೂಲಕ ನಾವೆಲ್ಲರೂ ಒಟ್ಟಾಗಿ ಪ್ರಜಾಪ್ರಭುತ್ವವನ್ನು ಕಟ್ಟೋಣ ಎಂದು ಮನವಿ ಮಾಡಿದರು.
ವಕೀಲರ ಸಂಘ ಈ ನಿರ್ಣಯವನ್ನು ಕೈಬಿಟ್ಟು ಸಾಮರಸ್ಯವನ್ನು ಕಾಪಾಡಬೇಕೆಂದು ಹಾಸನ ಜಿಲ್ಲೆಯ ಜನತೆಯ ಪರವಾಗಿ ಈ ಮೂಲಕ ಕೇಳಿಕೊಳ್ಳುತ್ತೇನೆ ಎಂದು ವಿಜಯಕುಮಾರ್ ಹೇಳಿದರು.
ಖಂಡನ ಸಭೆಯಲ್ಲಿ ದಂಡೋರ ವಿಜಯಕುಮಾರ್, ಪೃಥ್ವಿ ಎಂಜಿ, ರಮೇಶ್ ಸಾತೇನಹಳ್ಳಿ, ಆರ್‌ಪಿ ಸತೀಶ್, ರಮೇಶ್ ಹಾಸನ್, ಅಂಬುಗ ಮಲ್ಲೇಶ್, ರಾಜಶೇಖರ್, ಕೃಷ್ಣಕುಮಾರ್, ಜಗದೀಶ್, ಮುಬಾಶಿರ್ ಅಹಮದ್ ಇನ್ನಿತರು ಭಾಗವಹಿಸಿದ್ದರು.
