Home Uncategorized ಬಿಜೆಪಿ ತನ್ನ ಅಧ್ಯಕ್ಷಗಿರಿಯನ್ನು ಸಂತೋಷ್‌ ಪಾದದಡಿ ಇರಿಸಿದೆ: ಕರ್ನಾಟಕ ಕಾಂಗ್ರೆಸ್‌

ಬಿಜೆಪಿ ತನ್ನ ಅಧ್ಯಕ್ಷಗಿರಿಯನ್ನು ಸಂತೋಷ್‌ ಪಾದದಡಿ ಇರಿಸಿದೆ: ಕರ್ನಾಟಕ ಕಾಂಗ್ರೆಸ್‌

0

ಕರ್ನಾಟಕದಲ್ಲಿ ದ್ವಿಪಕ್ಷಗಳ ಟ್ವಿಟರ್‌ ಯುದ್ಧ ತಾರಕಕ್ಕೇರಿದ್ದು ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳು ಒಂದು ಹಂತ ಮೀರಿ ಟ್ವೀಟ್‌ ಮೂಲಕ ಪರಸ್ಪರ ಪಕ್ಷದ ರಾಜಕಾರಣಿಗಳನ್ನು ಟಾರ್ಗೆಟ್‌ ಮಾಡುತ್ತಿವೆ.

ಎರಡು ದಿನಗಳ ಕೆಳಗೆ ನಳಿನ್‌ ಕುಮಾರ್‌ ಕಟೀಲ್‌ ಅವರು ಕಾಂಗ್ರೆಸ್‌ ತನ್ನ ಗೃಹ ಖಾತೆಯನ್ನು ಮರಿ ಖರ್ಗೆಯವರಿಗೆ ಲೀಸ್‌ ನೀಡಿದೆಯೆನ್ನುವ ಹೇಳಿಕೆಯನ್ನು ನೀಡಿದ್ದರು. ಅದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಇನ್ನು ನಮ್ಮ ಸರಕಾರ ಬಿಜೆಪಿಯ ಕೆಲವು ನಾಯಕರಿಗೆ ಉಚಿತ ಮಾನಸಿಕ ಚಿಕಿತ್ಸೆಯ ವ್ಯವಸ್ಥೆಯನ್ನೂ ಮಾಡಬೇಕಾಗುತ್ತದೆ ಎಂದು ಕಿಡಿಕಾರಿದೆ.

ಮೊದಲು 140 ಅಕ್ಷರಗಳಿಗೆ ಮುಗಿದು ಹೋಗುತ್ತಿದ್ದ ಟ್ವೀಟುಗಳು ಈಗ ಟ್ವಿಟರ್ ಎಲನ್‌ ಮಸ್ಕ್‌ ಸುಪರ್ದಿಗೆ ಬಂದ ಮೇಲೆ ದೀರ್ಘ ಟ್ವೀಟುಗಳಿಗೆ ಅವಕಾಶ ನೀಡುತ್ತಿರುವ ಕಾರಣ ರಾಜಕೀಯ ಪಕ್ಷಗಳ ಜಗಳಗಳೂ ದೀರ್ಘವಾಗುತ್ತಿವೆ.

https://twitter.com/INCKarnataka/status/1672182077666521088?t=JQqSa9HdksVZ4OpcoZ9_ww&s=19

ಕಾಂಗ್ರೆಸ್‌ ಮುಂದುವರೆದು “ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲಿಗೆ ಕಾರಣನಾದ ನಾಮಕಾವಸ್ಥೆ ಅಧ್ಯಕ್ಷ ನಳಿನ್‌ ಕುಮಾರ್‌ ಅವರಿಗೆ ಕನಿಷ್ಠ ಕಾಮನ್ ಸೆನ್ಸ್ ಇಲ್ಲ, ಇನ್ನು ಸಂಸದೀಯ ನಿಯಮಗಳ ಬಗ್ಗೆ ಅರಿವಿರಲು ಹೇಗೆ ಸಾಧ್ಯ!?” ಎಂದು ಪ್ರಶ್ನಿಸಿದೆ.

“ಪ್ರಿಯಾಂಕ್‌ ಖರ್ಗೆಯವರು ಅವರು ಕಲಬುರ್ಗಿಯ ಉಸ್ತುವಾರಿ ಸಚಿವರು, ಅಲ್ಲಿನ ವ್ಯವಸ್ಥೆಯನ್ನು ಸರಿಪಡಿಸುವುದು ಅವರ ಹೊಣೆಗಾರಿಕೆ, ಅಲ್ಲಿನ ಅಧಿಕಾರಿಗಳನ್ನು ಸರಿದಾರಿಗೆ ತರುವುದು ಅವರದ್ದೇ ಜವಾಬ್ದಾರಿ. ಇಷ್ಟು ಸಾಮಾನ್ಯ ತಿಳುವಳಿಕೆ ಇಲ್ಲದಿರುವುದಕ್ಕಾಗಿಯೇ ಕಟೀಲ್ ಅವರನ್ನು “ಕಾಮಿಡಿ ಕಿಲಾಡಿ” ಎನ್ನುವುದು!” ಎಂದು ಕೂಡಾ ಕಾಂಗ್ರೆಸ್‌ ಜರಿದಿದೆ.

ಅಲ್ಲದೆ ನೀವು ನಿಮ್ಮ ಅಧ್ಯಕ್ಷಗಿರಿಯನ್ನು ಬಿ ಎಲ್‌ ಸಂತೋಷ ಅವರ ಪಾದರಕ್ಷೆಗಳಿಗೆ ಲೀಸ್‌ ನೀಡಿದ್ದೀರೆಂದು ಎಲ್ಲರೂ ಹಾಗೇ ಮಾಡುವುದಿಲ್ಲ. ಹಾಗೆ ತಿಳಿದಿದ್ದರೆ ಅದು ಮೂರ್ಖತನ ಎಂದು ಅದು ಹೇಳಿದೆ.

You cannot copy content of this page

Exit mobile version