ಹಾಡೊಂದರ ಸಂಗೀತದ ಕುರಿತಂತೆ ಕಾಪಿರೈಟ್ ಆಡಿಯೋ ಸಂಸ್ಥೆಯೊಂದು ದಾಖಲಿಸಿದ್ದ ದೂರಿನ ಅನ್ವಯ ಕಾಂಗ್ರೆಸ್ ಪಕ್ಷದ ಮುಖ್ಯ ಖಾತೆ ಮತ್ತು ಅದರ ಬೃಹತ್ ಜನಾಂದೋಲನ ಅಭಿಯಾನ ಭಾರತ್ ಜೋಡೋ ಯಾತ್ರೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವಂತೆ ಬೆಂಗಳೂರಿನ ನ್ಯಾಯಾಲಯ ಸೋಮವಾರ ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್‌ಗೆ ಆದೇಶಿಸಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.
ಎರಡೂ ಖಾತೆಗಳು ಕೆಜಿಎಫ್ – ಭಾಗ 2 ಚಿತ್ರದ ಸಂಗೀತದ ತುಣುಕುಗಳನ್ನು ಅಕ್ರಮವಾಗಿ ಬಳಸಿಕೊಂಡಿವೆ ಎಂದು ಆರೋಪಿಸಿ ಎಂಆರ್‌ಟಿ ಮ್ಯೂಸಿಕ್ ಸಲ್ಲಿಸಿದ ದಾವೆಗೆ ಸಂಬಂಧಿಸಿದಂತೆ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಧೀಶೆ ಲತಾಕುಮಾರಿ ಎಂ ಈ ಆದೇಶವನ್ನು ನೀಡಿದರು.
ಸಾಮಾಜಿಕ ಮಾಧ್ಯಮ ವೇದಿಕೆಯಿಂದ ಮೂರು ಲಿಂಕ್‌ಗಳನ್ನು ತೆಗೆದುಹಾಕಲು ಮತ್ತು ವಿಚಾರಣೆಯ ಮುಂದಿನ ದಿನಾಂಕದವರೆಗೆ @INCIndia ಮತ್ತು @BharatJodo ಎಂಬ ಎರಡು ಹ್ಯಾಂಡಲ್‌ಗಳನ್ನು ನಿರ್ಬಂಧಿಸಲು ನ್ಯಾಯಾಧೀಶರು ಟ್ವಿಟರ್‌ಗೆ ಸೂಚನೆ ನೀಡಿದರು.
“ಮೇಲ್ನೋಟಕ್ಕೆ ಹಕ್ಕುಸ್ವಾಮ್ಯದ ಉಲ್ಲಂಘನೆ ಎದ್ದು ಕಾಣುತ್ತದೆಯದ್ದರಿಂದ, ಫಿರ್ಯಾದುದಾರರಿಗೆ ಹೆಚ್ಚಿನ ಹಾನಿಯನ್ನು ತಪ್ಪಿಸುವ ಸಲುವಾಗಿ ಇದನ್ನು ಮಾಡಲೇಬೇಕಿದೆ. ಇಲ್ಲವಾದರೆ ನಾವು ಪೈರಸಿಯನ್ನು ಬೆಂಬಲಿಸಿದಂತಾಗುತ್ತದೆ,” ಎಂದೂ ನ್ಯಾಯಧೀಶರು ಹೇಳಿದ್ದಾರೆ.
ನವೆಂಬರ್ ಏಳರಂದು ತಮ್ಮ ಹಕ್ಕು ಸ್ವಾಮ್ಯದಲ್ಲಿರುವ ಸಂಗೀತದ ತುಣುಕನ್ನು ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯಲ್ಲಿ ಅನುಮತಿಯಿಲ್ಲದೆ ಬಳಸಲಾಗಿದೆ ಎಂದು ಎಂಆರ್‌ಟಿ ಮ್ಯೂಸಿಕ್ ಪ್ರಕರಣ ದಾಖಲಿಸಿತ್ತು. ಆ ಕುರಿತಾದ ಪೀಪಲ್ ಮೀಡಿಯಾ ವರದಿಯನ್ನು ನೀವು ಇಲ್ಲಿ ಓದಬಹುದು