ಬೀದರ್: ನ್ಯಾಯಾಲಯದ ಆದೇಶಗಳನ್ನು ನಕಲಿ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಲಿಂಗಾಯತ ಮಠಾಧೀಶರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಬೀದರ್ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಬಸವ ತೀರ್ಥ ಮಠದ ಡಾ.ಸಿದ್ದಲಿಂಗ ಸ್ವಾಮಿ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಜಿಲ್ಲಾಧಿಕಾರಿ (DC) ಗೋವಿಂದ ರೆಡ್ಡಿ ಅವರು ಬುಧವಾರ ಹುಮನಾಬಾದ್ ತಹಸೀಲ್ದಾರ್ ಅವರಿಗೆ ಆದೇಶಿಸಿದ್ದಾರೆ.
ದೂರುದಾರ ಚಂದ್ರಕಾಂತ ಜಲಾದಾರ, ಸ್ವಾಮೀಜಿ ನಡುವೆ ಭೂವಿವಾದಕ್ಕೆ ಸಂಬಂಧಿಸಿದಂತೆ 2017ರ ನವೆಂಬರ್ 17ರಂದು ಕೆಎಟಿಯ ಅಧಿಕೃತ ತೀರ್ಪನ್ನು ಬಸವತೀರ್ಥ ಮಠದ ಸ್ವಾಮೀಜಿ ಫೋರ್ಜರಿ ಮಾಡಿ ಸಿಕ್ಕಿಬಿದ್ದಿದ್ದರು. ಇದೀಗ ಕೋರ್ಟ್ ಆದೇಶದಂತೆ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಹುಮ್ನಾಬಾದ್ ತಹಶೀಲ್ದಾರ್ಅವರಿಗೆ ಬೀದರ್ ಡಿಸಿ ಗೋಂವಿದರೆಡ್ಡಿ ಆದೇಶಿಸಿದ್ದಾರೆ.
ನವೆಂಬರ್ 17, 2017ರಂದು ಚಂದ್ರಕಾಂತ ಜಲದಾರ ಮತ್ತು ಆರೋಪಿ ಮಠಾಧೀಶರ ನಡುವಿನ ಭೂ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (KAT) ಆದೇಶ ನೀಡಿತು.
ಆರೋಪಿ ಮಠಾಧೀಶರು ಈ ಬಗ್ಗೆ ಕೆಎಟಿ ಹೆಸರಿನಲ್ಲಿ ನಕಲಿ ಆದೇಶವನ್ನು ಸಲ್ಲಿಸಿದ್ದು, ಡಿಸೆಂಬರ್ 5, 2017ರಂದು ಮೂಲ ಆದೇಶ ಪ್ರತಿಯಲ್ಲಿ ಇಲ್ಲದ ವಿಷಯಗಳನ್ನು ಸೇರಿಸಿದ್ದಾರೆ.
ನಂತರ ಮಠಾಧೀಶರು ಆದೇಶದ ನಕಲಿ ಪ್ರತಿಯನ್ನು ಸಲ್ಲಿಸಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಹೈಕೋರ್ಟ್‌ನ ಕಲಬುರಗಿ ಪೀಠದ ಮೆಟ್ಟಿಲೇರಿದ್ದು, ಕ್ರಿಮಿನಲ್ ಮೊಕದ್ದಮೆ ಹೂಡಲು ನ್ಯಾಯಾಲಯ ಸೂಚನೆ ನೀಡಿತ್ತು.
ಜಿಲ್ಲಾಧಿಕಾರಿ ರೆಡ್ಡಿ ಇದೀಗ ಐಪಿಸಿ ಸೆಕ್ಷನ್ 466 (ನ್ಯಾಯಾಲಯದ ದಾಖಲೆ ಅಥವಾ ಸಾರ್ವಜನಿಕ ನೋಂದಣಿಯ ನಕಲಿ) ಮತ್ತು ಇತರ ನಿಬಂಧನೆಗಳ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಇನ್ನಷ್ಟೇ ಹೊರಬರಬೇಕಿದೆ.