Home ಬ್ರೇಕಿಂಗ್ ಸುದ್ದಿ ದೆಹಲಿ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆ

ದೆಹಲಿ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆ

0

ದೆಹಲಿಯ ವಿಧಾನಸಭಾ ಚುನಾವಣೆ ದಿನಾಂಕವನ್ನು ಭಾರತೀಯ ಚುನಾವಣಾ ಆಯೋಗ ಪ್ರಕಟಿಸಿದೆ. ಎಲ್ಲಾ 70 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಫೆಬ್ರವರಿ 5ರಂದು ಮತದಾನ ನಡೆದು, ಫೆಬ್ರವರಿ 8ರಂದು ಮತ ಎಣಿಕೆ, ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಎಎಪಿ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡಲಿದ್ದು, ಮತದಾರ ಪ್ರಭು ಯಾರ ಕೈ ಹಿಡಿಯಲಿದ್ದಾರೆ ಎಂಬುದು ಸದ್ಯ ಕುತೂಹಲವನ್ನು ಹುಟ್ಟುಹಾಕಿದೆ.

ಒಟ್ಟು 1.55 ಕೋಟಿ ಮತದಾರರು:
ಪುರುಷ ಮತದಾರರು: 83.49 ಲಕ್ಷ
ಮಹಿಳಾ ಮತದಾರರು: 71.74 ಲಕ್ಷ
ಯುವ ಮತದಾರರು (20-29): 25.89 ಲಕ್ಷ
ಇದೇ ಮೊದಲ ಬಾರಿಗೆ ಮತದಾನ ಮಾಡುತ್ತಿರುವವರು: 2.08 ಲಕ್ಷ
ಹಿರಿಯ ಮತದಾರರು (85+ ವಯಸ್ಸಿನವರು ): 1.09 ಲಕ್ಷ
ತೃತೀಯಲಿಂಗಿ ಮತದಾರರು: 1,261 ಮತದಾರರು

You cannot copy content of this page

Exit mobile version