ಬೆಳ್ತಂಗಡಿ: ಧರ್ಮಸ್ಥಳದ ಸುತ್ತಮುತ್ತ ಹಲವಾರು ಮೃತದೇಹಗಳನ್ನು ಹೂತುಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳಕ್ಕೆ (SIT) ಮತ್ತೆ 9 ಮಂದಿ ಪೊಲೀಸರನ್ನು ಹೆಚ್ಚುವರಿಯಾಗಿ ನೇಮಿಸಲಾಗಿದೆ. ಈ ಹಿಂದೆ ಮೂವರು ಉನ್ನತ ಅಧಿಕಾರಿಗಳು ಮತ್ತು 20 ಮಂದಿ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು.
ಡಿಜಿ ಮತ್ತು ಐಜಿಪಿ ಡಾ. ಎಂ.ಎ. ಸಲೀಂ ಅವರು ಜುಲೈ 30ರಂದು ಈ ಕುರಿತು ಆದೇಶ ಹೊರಡಿಸಿದ್ದಾರೆ. ಈ ಕೆಳಕಂಡ ಪೊಲೀಸರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಎಸ್‌ಐಟಿಗೆ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ:
ಪಿಎಸ್‌ಐ ಲಾರೆನ್ಸ್ (ಉಪ್ಪಿನಂಗಡಿ ಪೊಲೀಸ್ ಠಾಣೆ)
ಎಚ್.ಸಿ. ಪುನೀತ್ (ಸೆನ್ ಪೊಲೀಸ್ ಠಾಣೆ)
ಎಚ್.ಸಿ. ಮನೋಹರ (ಉಪ್ಪಿನಂಗಡಿ ಪೊಲೀಸ್ ಠಾಣೆ)
ಪಿ.ಸಿ. ಮನೋಜ್ (ವಿಟ್ಲ ಪೊಲೀಸ್ ಠಾಣೆ)
ಪಿ.ಸಿ. ಸಂದೀಪ್ (ಪುಂಜಾಲಕಟ್ಟೆ ಪೊಲೀಸ್ ಠಾಣೆ)
ಪಿ.ಸಿ. ಲೋಕೇಶ್ (ಉಡುಪಿ ಸಿ.ಎಸ್.ಪಿ ಪೊಲೀಸ್ ಠಾಣೆ)
ಎಚ್.ಸಿ. ಸತೀಶ್ ನಾಯ್ಕ (ಹೊನ್ನಾವರ ಪೊಲೀಸ್ ಠಾಣೆ)
ಎಚ್.ಸಿ. ಜಯರಾಮೇಗೌಡ (ಮಂಗಳೂರು ಎಫ್.ಎಮ್.ಎಸ್ ದಳ)
ಎಚ್.ಸಿ. ಬಾಲಕೃಷ್ಣ ಗೌಡ (ಮಂಗಳೂರು ಎಫ್.ಎಮ್.ಎಸ್ ದಳ)
ಈ ಹೆಚ್ಚುವರಿ ಸಿಬ್ಬಂದಿ ನೇಮಕವು ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಲು ಸಹಾಯ ಮಾಡುವ ನಿರೀಕ್ಷೆಯಿದೆ.