ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಜೆರ್ಸಿ ನಂ 7 ಕ್ಕೆ ನಿವೃತ್ತಿ ಘೋಷಿಸಲು ತೀರ್ಮಾನಿಸಿದೆ. ಭಾರತೀಯ ಕ್ರಿಕೆಟ್ ನ ದಂತಕಥೆ ಮಹೇಂದ್ರ ಸಿಂಗ್ ಧೋನಿ ಅವರ ಅಸ್ಮಿತೆಯಂತಿದ್ದ ಈ ಸಂಖ್ಯೆಯ ಜೆರ್ಸಿ ಇನ್ನು ಮುಂದೆ ನಿವೃತ್ತಿ ಪಡೆಯಲಿದೆ. ಅಷ್ಟಕ್ಕೂ ಈ ಜೆರ್ಸಿ ಹಾಗೂ ಮಹೇಂದ್ರ ಸಿಂಗ್ ಧೋನಿಯವರಿಗೆ ಇರುವ ಅವಿನಾಭಾವ ಸಂಬಂಧ ಏನು ಅಂತೀರಾ.. ಈ ಸ್ಟೋರಿ ಓದಿ.
ಭಾರತ ಕ್ರಿಕೆಟ್ ಕಂಡ ಯಶಸ್ವಿ ನಾಯಕರಲ್ಲಿ ಮಹೇಂದ್ರ ಸಿಂಗ್ ಧೋನಿ ಅಗ್ರಗಣ್ಯರು. ಭಾರತ ತಂಡಕ್ಕೆ ಮೂರು ಐಸಿಸಿ ಟ್ರೋಫಿ ಗೆಲ್ಲಿಸಿಕೊಟ್ಟ ಏಕೈಕ ನಾಯಕರಾಗಿ ಮಹೇಂದ್ರ ಸಿಂಗ್ ಧೋನಿ ನಿಲ್ಲುತ್ತಾರೆ. ಎಂಎಸ್ ದೋನಿಯವರ ಸೌಮ್ಯ ಸ್ವಭಾವ, ಸಹ ಆಟಗಾರರನ್ನು ಒಮ್ಮತಕ್ಕೆ ತಂದು ತಂಡವನ್ನು ಮುನ್ನಡೆಸುವ ರೀತಿಗೆ ದೋನಿಗೆ ದೋನಿಯವರೇ ಸಾಟಿ.
ಐಸಿಸಿ ಟೂರ್ನಿಗಳ ವಿಷಯಕ್ಕೆ ಬಂದಾಗ ಭಾರತ ತಂಡದ ಅತ್ಯಂತ ಯಶಸ್ವಿ ನಾಯಕನಾಗಿ ಉಳಿದಿರುವ ಎಂಎಸ್ ಧೋನಿಗೆ ಸಮನಾರ್ಥಕವಾಗಿ ಜೆರ್ಸಿ ನಂ 7 ಅನ್ನು ಪರಿಗಣಿಸಲಾಗಿದೆ. ಐಸಿಸಿ ಟೂರ್ನಿಯಲ್ಲಿ ದೋನಿಯ ಆಟ ಶುರುವಾದಾಗಿನಿಂದ ಈ ಸಂಖ್ಯೆ ದೋನಿಯವರ ಅದೃಷ್ಟ ಸಂಖ್ಯೆಯಂತೆ ನಡೆದು ಬಂದಿದೆ.
ಭಾರತದ ಮತ್ತೋರ್ವ ಶ್ರೇಷ್ಠ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ನಂ.10 ಜೆರ್ಸಿ ಈಗಾಗಲೇ ಭಾರತೀಯ ಕ್ರಿಕೆಟ್ ಮಂಡಳಿಯಿಂದ ನಿವೃತ್ತಿ ಹೊಂದಿದ್ದು, ಭಾರತ ತಂಡಕ್ಕೆ ವಿಕೆಟ್ ಕೀಪರ್, ಬ್ಯಾಟರ್ ನೀಡಿದ ಕೊಡುಗೆಯನ್ನು ಗೌರವಿಸಿ, ಎಂಎಸ್ ಧೋನಿಯ ನಂ.7 ಜೆರ್ಸಿಯನ್ನು ಆ ಪಟ್ಟಿಗೆ ಸೇರಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಚಿನ್ ತೆಂಡೂಲ್ಕರ್ ಅವರನ್ನು ಗುರುತಿಸುವ ನಂ.10 ಜೆರ್ಸಿಯನ್ನು ಆಯ್ಕೆ ಮಾಡಲು ಯಾರಿಗೂ ಅವಕಾಶವಿಲ್ಲದಂತೆ, ಭಾರತೀಯ ಕ್ರಿಕೆಟ್ ತಂಡದ ಜೆರ್ಸಿ ಧರಿಸುವಾಗ ತಮ್ಮ ಬೆನ್ನಿನಲ್ಲಿ ನಂ.7 ಅನ್ನು ಧರಿಸುವಂತಿಲ್ಲ ಎಂದು ಬಿಸಿಸಿಐ ಭಾರತೀಯ ಕ್ರಿಕೆಟ್ ತಂಡದ ಆಟಗಾರರಿಗೆ ತಿಳಿಸಿದೆ ಎಂದು ಗೊತ್ತಾಗಿದೆ. ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ನಂ.7 ಜೆರ್ಸಿ ಭಾರತೀಯ ಆಟಗಾರರ ಕಪಾಟಿನಲ್ಲಿಲ್ಲ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ದೃಢಪಡಿಸಿದೆ.
ಪ್ರಸ್ತುತ ಭಾರತ ತಂಡದ ಆಟಗಾರರಿಗೆ ಒಟ್ಟು 60 ಸಂಖ್ಯೆಗಳನ್ನು ನೀಡಲಾಗಿದೆ ಎಂದು ಬಿಸಿಸಿಐ ಅಧಿಕಾರಿ ಖಚಿತಪಡಿಸಿದ್ದಾರೆ. “ಸದ್ಯ 60-ಬೆಸ ಸಂಖ್ಯೆಗಳನ್ನು ಭಾರತೀಯ ತಂಡದಲ್ಲಿನ ನಿಯಮಿತ ಆಟಗಾರರಿಗೆ ಮತ್ತು ಸ್ಪರ್ಧೆಯಲ್ಲಿರುವವರಿಗೆ ಗೊತ್ತುಪಡಿಸಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೃಪೆ : Mykhel