“ಅಮೇರಿಕ ಪದ, ಇಂಗ್ಲಿಷ್ ನವರು ಅಮೆರಿಕ ಅಂತನೇ ಅನ್ನುವುದು, ಗುಜರಾತಿಯವರು ಅಮೆರಿಕ ಅಂತಲೇ ಅನ್ನುವುದು, ಕನ್ನಡದವರು ಅಮೆರಿಕ ಅಂತಲೇ ಅನ್ನುವುದು ಆದರೆ ಇಂಡಿಯಾವನ್ನು ಭಾರತ ಅನ್ನೋದೇಕೆ? ಅಸಲಿಗೆ ಈ ‘ಭಾರತ’ ಯಾವ ಭಾಷೆಯ ಪದ?” ಅಭಿ ಒಕ್ಕಲಿಗ ಅವರ ಬರಹದಲ್ಲಿ
“ಪದ ಬಳಕೆ ಸರಿಯಾಗಿರಲಿ, ವಿಚಾರ ಸರಿ ಇದೆ ಆದರೆ ಪದ ಬಳಕೆ ತಿದ್ದುಕೊಳ್ಳಬೇಕು, ಪದಬಳಕೆ ಮಾಡುವಾಗ ಎಚ್ಚರಿಕೆ ಇರಲಿ” ಈ ರೀತಿ ಸಾಮಾನ್ಯವಾಗಿ ಕೇಳುತ್ತಿರುತ್ತೇವೆ ಸರ್ಕಾರಗಳು ಬದಲಾದಗೆಲ್ಲ ಯೋಜನೆಗಳ ಹೆಸರು ಬದಲಾಯಿಸುವುದು, ವಾರ್ಡ್ ಗಳಿಗೆ, ಮೆಟ್ರೋ ಸ್ಟೇಶನ್ ಗೆ ನೂತನ ಹೆಸರು ಇಡುವುದು ಮಾಡುತ್ತಾರಲ್ಲವೆ? ಹೆಸರು ಕೂಡ ಒಂದು ಪದ ಅದರಲ್ಲೂ ನಾಮಪದ. ನಾಮಪದವೆಂದರೆ ಅದೇ ಪದದಿಂದ ಎಲ್ಲಾ ಭಾಷಿಕರು ಕರೆಯಬೇಕು ಎಂದರ್ಥ. ತೀರಾ ಇತ್ತೀಚೆಗೆ ಬಿಹಾರದಲ್ಲಿ ಅತಿ ಕಿರಿಯ ಹುಡುಗಿ ಒಬ್ಬಳು ಶಾಸಕಳಾಗಿ ಆಯ್ಕೆಯಾಗಿದ್ದಾಳೆ ಆಕೆ ಮತ ಕೇಳಲು ಹೋಗುವಾಗ ನಾನು ಆಯ್ಕೆಯಾದೊಡನೆ ‘ಅಲಿ’ ನಗರವನ್ನು ‘ಸೀತಾ’ ನಗರ ಎಂದು ಬದಲಾಯಿಸುತ್ತೇನೆ ಎಂದು ಭರವಸೆ ನೀಡಿದ್ದಳು. ಈಗ ಹೇಳಿ ನೋಡೋಣ ಹೆಸರು ಬದಲಾಯಿಸುವುದರಿಂದ ಏನು ಪ್ರಯೋಜನ ಇಲ್ಲ ಎಂದು.
ವಸ್ತುಗಳಿಗೆ ಇಟ್ಟಂತಹ ನಾಮಪದ ಬೇರೆ ಬೇರೆ ನುಡಿಯಾಡುವ ಜನರು ಅವರವರ ನುಡಿಯಲ್ಲಿ ಹೆಸರು ಕೊಟ್ಟು ಕೊಂಡಿರುತ್ತಾರೆ. ಆದರೆ ವ್ಯಕ್ತಿಯ ಹೆಸರು ಅಥವಾ ಸ್ಥಳದ ಹೆಸರು ಯಾವ ಭಾಷೆಯಲ್ಲಿ ನಾಮಪದವಾಗಿರುತ್ತದೆ ಅದೇ ಪದವನ್ನು ಎಲ್ಲಾ ಭಾಷಿಕರೂ ಬಳಸುತ್ತಾರೆ. ಉದಾಹರಣೆಗೆ ಅಮೇರಿಕ ಪದ, ಇಂಗ್ಲಿಷ್ ನವರು ಅಮೆರಿಕ ಅಂತನೇ ಅನ್ನುವುದು, ಗುಜರಾತಿಯವರು ಅಮೆರಿಕ ಅಂತಲೇ ಅನ್ನುವುದು, ಕನ್ನಡದವರು ಅಮೆರಿಕ ಅಂತಲೇ ಅನ್ನುವುದು ಆದರೆ ಇಂಡಿಯಾವನ್ನು ಭಾರತ ಅನ್ನೋದೇಕೆ? ಅಸಲಿಗೆ ಈ ‘ಭಾರತ’ ಯಾವ ಭಾಷೆಯ ಪದ? ಭಾರತ ಪದ ಕನ್ನಡ ಭಾಷೆಯದ್ದಾಗಿದ್ದರೆ ಗುಜರಾತಿನಲ್ಲಿ ಏನು? ಮರಾಠಿಯಲ್ಲಿ ಏನು? ಹಿಂದಿಯಲ್ಲಿ ಏನು? ತಮಿಳಿನಲ್ಲಿ ಏನು? ಈ ಮೇಲಿನ ಭಾಷಿಕರೆಲ್ಲರೂ ಕನ್ನಡ ಪದವನ್ನು ಒಪ್ಪಿಕೊಂಡು ಬಿಡುತ್ತಿದ್ದರೆ? ಹಾಗಾದರೆ ಈ ಭಾರತ ಪದ ಯಾವ ಭಾಷೆ? ಯಾವ ಅನುಮಾನವೂ ಬೇಡ ಯಾವ ಭಾಷೆ ಮಾನವರ ನಡುವೆ ಇದ್ದ ಭಿನ್ನತೆಗಳನ್ನು ತಾರತಮ್ಯವಾಗಿ ಪರಿವರ್ತಿಸಿ ಶ್ರೇಷ್ಠ ಕನಿಷ್ಠ ಅನಿಷ್ಠ ಎಂದು ವಿಭಜಿಸಿ ಯಾಮಾರಿಸುತ್ತಿದ್ದೀಯೊ ಅದೇ ಸಂಸ್ಕೃತ ಭಾಷೆಯ ಪದವೇ ಈ ಭಾರತ.
ದ್ರಾವಿಡ ನುಡಿ ಕುಟುಂಬದ ನುಡಿಗಳು ಜಗತ್ತಿನ ಮೊದಲ ನುಡಿಗಳು. ಕನ್ನಡ ಕೂಡ ದ್ರಾವಿಡ ನುಡಿ ಕುಟುಂಬಕ್ಕೆ ಸೇರಿದ ಪ್ರಮುಖ ನುಡಿ. ಈ ನುಡಿಗಳು ಶಬ್ದಗಳಿಂದ ಅಕ್ಷರವಾಗಿ ಅಕ್ಷರದಿಂದ ಪದವಾಗಿ ಪದಗಳಿಂದ ನುಡಿಯಾಗಿ ನುಡಿಯಿಂದ ನಾಡಾಗಿ ನಾಡಿನಿಂದ ನಾಗರಿಕತೆ ಬಂದಿರುವುದು. ಇಂಥ ನಾಗರೀಕ ಸಮಾಜಕ್ಕೆ ಬಂದಂತಹ ವಲಸಿಗರಾದ ಆರ್ಯರು ನಮ್ಮದೇ ನುಡಿಗಳನ್ನು ವಿಜಾತಿ ಒತ್ತಕ್ಷರಗಳ ಸೇರಿಸಿ ಮಹಾಪ್ರಾಣಗಳ ಸೇರಿಸಿ ‘ಪ’ಕಾರವನ್ನು ‘ಹ’ಕಾರ ಮಾಡಿ ತಿರುಚಿ ಬಳಸಿ ಆ ತಿರುಚಿದ ಪದಗಳ ಗುಂಪನ್ನೇ ಸಂಸ್ಕೃತ ಭಾಷೆ ಎಂದು ಬಿಟ್ಟರು.
ಈ ರೀತಿ ಅಕ್ರಮವಾಗಿ ಜನಿಸಿದಂತಹ ಸಂಸ್ಕೃತ ಭಾಷೆಯ ಪದ ಬಳಕೆಯಿಂದ ಕನ್ನಡಿಗರ ಆಚಾರ ವಿಚಾರಗಳೇ ಗಬ್ಬೆದ್ದು ಹೋಗಿರುವುದರಿಂದ 12ನೆ ಶತಮಾನದಲ್ಲಿ ಬಸವಣ್ಣನವರ ಮುಂದಾಳುತನದಲ್ಲಿ ಕನ್ನಡನಾಡಿನಲ್ಲಿ ಕನ್ನಡ ನುಡಿಯಲ್ಲಿ ವಚನ ಚಳುವಳಿ ನಡೆದದ್ದು. ಇಂದಿಗೂ ಸಂಸ್ಕೃತದಲ್ಲಿ ಪೂಜೆ ಮಂತ್ರ ಪಠಿಸುವುದೇಕೆ? ಅರ್ಥವೇ ತಿಳಿಯದ ಸಂಸ್ಕೃತದ ಮೂಲಕ ಕನ್ನಡಿಗರನ್ನು ವಂಚಿಸುವ ಇರಾದೆ ಬಿಟ್ಟರೆ ಬೇರೆ ಇನ್ಯಾವ ಘನ ಉದ್ದೇಶವು ಇಲ್ಲ. ಆದುದ್ದರಿಂದಲೇ ನಮ್ಮೆಲ್ಲ ಹಿರಿಯರು ಸಂಸ್ಕೃತದಲ್ಲಿ ಏನನ್ನು ಹೇಳಲಿಲ್ಲ ಇವತ್ತಿಗೂ ನಡೆಯುತ್ತಿರುವ ಸಂಸ್ಕೃತ ತೂರಿಕೆಯಿಂದ ಕನ್ನಡ ಪದವೋ ಸಂಸ್ಕೃತ ಪದವೋ ಎಂದು ವ್ಯತ್ಯಾಸ ತಿಳಿಯದೆ ಬಳಸಿದ ಪದಕ್ಕೆ ತಪ್ಪದೆ ವಿವರಣೆ ಕೊಡದೆ ಬಿಟ್ಟಿಲ್ಲ ನಮ್ಮ ಹಿರಿಯರು.
ಸ್ವಾತಂತ್ರ್ಯ ಚಳುವಳಿ ಜೊತೆ ಜೊತೆಗೆ ಕನ್ನಡ ಮಾತನಾಡುವ ಸೀಮೆಗಳೆಲ್ಲ ಒಂದೇ ಆಡಳಿತಕ್ಕೆ ಒಳಪಡಬೇಕೆಂಬ ಕರ್ನಾಟಕ ಏಕೀಕರಣ ಚಳುವಳಿ 1956ರಲ್ಲಿ ಯಶಸ್ವಿಯಾಗಿದ್ದರೂ ಅದು ಶುರುವಾಗಿದ್ದು 1890ರ ಆಸುಪಾಸಿನಲ್ಲಿ ಅಂದರೆ ಸರಿ ಸುಮಾರು 60 ವರ್ಷ ಈ ಚಳುವಳಿ ಸ್ವಾತಂತ್ರ್ಯ ಚಳುವಳಿಗೆ ಸ್ವಾತಂತ್ರ್ಯ ಚಳುವಳಿ ಏಕೀಕರಣ ಕರ್ನಾಟಕ ಚಳುವಳಿಗೆ ಪೂರಕವಾಗಿ ನಡೆದುಕೊಂಡು ಬಂದಿದೆ ಸ್ವಾತಂತ್ರ್ಯ ಬಂದ ನಂತರ ರಾಜರು ಮೈಸೂರು ದೇಶವನ್ನು ಇಂಡಿಯಾ ಒಕ್ಕೂಟದೊಳಗೆ ವಿಲೀನ ಮಾಡೋದಿಲ್ಲ ಅಂದಿದ್ದಕ್ಕೆ ಅಂದಿನ ಜನಸಾಮಾನ್ಯರು ರಾಜ ಪ್ರಭುತ್ವವನ್ನು ಮೈಸೂರು ಚಲೋ ಚಳುವಳಿ ಮೂಲಕ ವಿನಾಶಗೊಳಿಸಿದರು. ಆಗ ಕೂಡ ಇತರೆ ಭಾಷಿಕರ ಜೊತೆ ಒಂದು ಒಕ್ಕೂಟವಾಗಿ ಬಾಳೋಣ ಅಂದಿದ್ದಕ್ಕೆ ಈ ನಡೆ ಇಟ್ಟಿದ್ದಾರೆ ವಿನಃ ‘ಒಂದು ದೇಶ ಒಂದೇ ಭಾಷೆ’ ಕಾರಣಕ್ಕಲ್ಲ ಈಗ ಅನ್ನುತ್ತಿರುವಂತೆ ‘ಒಂದು ದೇಶ ಒಂದೇ ಭಾಷೆ’ ಎಂದಿದ್ದರೆ ಅಂದೇ ಕನ್ನಡ ಭಾಷೆಗೆ ಕನ್ನಡ ದೇಶ ಉದಯವಾಗಿರೋದು. ರಾಜ ಪ್ರಭುತ್ವವನ್ನೆ ವಿನಾಶಗೊಳಿಸಿದ ನಮ್ಮ ಹಿರಿಯರಿಗೆ ಯಾವ ಪ್ರಭುತ್ವವನ್ನಾದರೂ ಹೊಡೆದುರುಳಿಸುವ ತಾಕತ್ತು ಇದ್ದೇ ಇತ್ತು. ಅದು ಕೂಡ ನೆತ್ತರು ಚೆಲ್ಲಿ ಅಲ್ಲ ಶಾಂತಿಯುತವಾಗಿ.
1950ರಲ್ಲಿ ಡಾ. ಬಿ ಆರ್ ಅಂಬೇಡ್ಕರ್ ರವರು ರಚಿಸಿದ ಸಂವಿಧಾನ ಒಪ್ಪಿಕೊಂಡಿದ್ದು ಕೂಡ ಇಂಡಿಯಾ ಒಕ್ಕೂಟಕ್ಕೆ ಎರಡು ನುಡಿ ಇರುತ್ತದೆ ಒಂದು ಇಂಗ್ಲೀಷ್ ಮತ್ತೊಂದು ಹಿಂದಿ ಎಂಬ ಕಾರಣಕ್ಕೆ ವಿನಃ ಕನ್ನಡಿಗರ ಸೀಮೆಗೂ ಇಂಗ್ಲಿಷ್ ಮತ್ತು ಹಿಂದಿ ನುಡಿ ಸ್ವೀಕರಿಸಿ ಅಲ್ಲ. ಈ ಸಂವಿಧಾನ ಬಳಸಿಕೊಂಡೆ ಕನ್ನಡ ಸೀಮೆಗಳೆಲ್ಲವನ್ನು ಸೇರಿಸಿಕೊಂಡು 1956 ರಲ್ಲಿ ಕಿರಿದಾದ ಮೈಸೂರು ದೇಶದಿಂದ ವಿಶಾಲ ಮೈಸೂರು ರಾಜ್ಯವಾಗಿ ಉದಯವಾಗಿದ್ದು ಮತ್ತೆ 1973 ರಲ್ಲಿ ಆ ರಾಜ್ಯಕ್ಕೆ ಮೈಸೂರ್ ಹೆಸರು ತೆಗೆದು ಕರ್ನಾಟಕ ರಾಜ್ಯ ಹೆಸರು ಇಟ್ಟು ಕೊಂಡಿರುವುದು ತದನಂತರ ಇಂಡಿಯಾ ಒಕ್ಕೂಟದ ಸಂವಿಧಾನ ಸದ್ಬಳಕೆ ಮಾಡಿಕೊಂಡು ಕರ್ನಾಟಕ ರಾಜ್ಯವನ್ನು ಕನ್ನಡ ನಾಡು ದೇಶವಾಗಿ ಉನ್ನತೀಕರಿಸಿಕೊಳ್ಳುವುದರ ಕಡೆ ಗಮನ ಕೊಡದೆ ಸಂಸ್ಕೃತ ಮತ್ತು ಹಿಂದಿ ಹೇರಿಕೆಗಳ ಪಿತೂರಿಯಿಂದ ಕನ್ನಡನಾಡಿನಲ್ಲೇ ಕನ್ನಡ ಉಳಿಸಿ ಕನ್ನಡ ಬೆಳೆಸಿ ಅನ್ನುವಂತಹ ಅದೋಗತಿಗೆ ಬಂದಿದ್ದೇವೆ.
ಜನಸಂಖ್ಯೆಯಲ್ಲಿ 25% ಇರುವ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಇದರ ಬಾಗವಾಗಿರುವವರು, ಅಂದಿನಿಂದಲೂ ತಮ್ಮ ಚಿತ್ರ ವಿಚಿತ್ರ ಕುತಂತ್ರಗಳಿಂದ ಆಳುವ ವರ್ಗವಾಗಿರುವ ಜುಟ್ಟು – ಸೇಟುಗಳು ಮತ್ತು ಭೂ ಮಾಲೀಕರು ಬಂಡವಾಳಶಾಹಿಗಳು ಸಂವಿಧಾನ ಬಳಸಿಕೊಳ್ಳುತ್ತಿರುವಂತೆ 75% ಇರುವ ಜನಸಾಮಾನ್ಯರಾದ ನಾವುಗಳು ಬಳಸಿಕೊಳ್ಳುತ್ತಿಲ್ಲ ಆದುದ್ದರಿಂದಲೇ ಇನ್ನೂ ಕೂಡ ಜನಸಾಮಾನ್ಯರು ಮೂಲಭೂತ ಸೌಕರ್ಯಗಳು ಇಲ್ಲದೆ ನರಳಾಟದ ಬದುಕು ಸವೆಸುತ್ತಿರೋದು.
2025 ನವೆಂಬರ್ 26 ರ Constitution Day ನೆಪದಲ್ಲಿ ಮನವರಿಕೆ ಮಾಡಿಕೊಳ್ಳೋಣ Constitution Of India ಇರೋದು ನಮ್ಮ ರಾಜ್ಯವನ್ನು ದೇಶವಾಗಿ ಉನ್ನತಿಕರಿಸಲೆ ವಿನಃ ಒಕ್ಕೂಟವನ್ನ ದೇಶ ಮಾಡಿ ಅಧೋಗತಿಗೆ ತಲುಪಲು ಅಲ್ಲ. ಇಂದಿನಿಂದ ಶಪಥ ಮಾಡೋಣ ಭಾರತ ಅನ್ನುವುದಿಲ್ಲ, India ಅಂತೀವಿ ಅಂತ. ಏಕೆ ಗೊತ್ತಾ? ಕಾರ್ ಬೈಕ್ ಗಳ ಗಮನಿಸಿ KA ಹೋಗಿ BH ಬರ್ತಾ ಇದೆ. KA ಅಂದರೆ ಕರ್ನಾಟಕ, BH ಅಂದರೆ ಭಾರತ. India ಪದ ಯಾವೊತ್ತು ಕರ್ನಾಟಕವನ್ನು ಬೆಳೆಸುತ್ತದೆ, ಭಾರತ ಪದ ಕರ್ನಾಟಕವನ್ನು ಅಳಿಸುತ್ತದೆ. ಅದೇ ರೀತಿ English ಕನ್ನಡವನ್ನ ಬೆಳೆಸುತ್ತದೆ, ಸಂಸ್ಕೃತ ಕನ್ನಡವನ್ನ ಅಳಿಸುತ್ತದೆ. ನೀವೀಗ ಇದನ್ನು ಓದುತ್ತಿರೋದು ಕೂಡ English ನಿಂದ ತಯಾರಾಗಿರುವ ಮೊಬೈಲ್ ನಿಂದಲೆ.
ಈ ಬೈಕ್ ಕಾರ್ ಪುರಾವೆ ನೋಡಿ ಕೂಡ ಭಾರತ ಎಂಬುದು ಎಂತಾ ಡೇಂಜರ್ ಅನ್ನುವುದ ಪರಿಗಣಿಸದೆ ಮತ್ತೆ ಉಡಾಫೆಯಿಂದ ಕುತಂತ್ರ ಸಂಸ್ಕ್ರುತದ ಪದ ಭಾರತ ಅನ್ನೋದು, ಭಾರತ ಅಂತ ಬರೆಯೋದನ್ನ ಮುಂದುವರಿಸೋದು ಮಾಡುವವರು ಕನ್ನಡನಾಡಾಳರು. ಮನೆಯಾಳರ ರೀತಿ ನಾಡಾಳರು.
ಇಂಗ್ಲೀಷ್ ಮೀಡಿಯಂ ನಲ್ಲಿ ಓದಿಸಿ ಎಂದು ತಿಳಿಸುವ ಬಹುತೇಕ ಸಂವಿಧಾನ ಅಭಿಮಾನಿಗಳು English ನಲ್ಲಿ ಬರೆದಿರುವ constitution of India ದ preamble ಇಂಗ್ಲಿಷ್ನಲ್ಲಿ ಓದುವುದ ರೂಡಿಸಿಕೊಂಡರೆ ಮುಂದಿನ ಪೀಳಿಗೆಯಾದರೂ ಈ ಸಂಸ್ಕೃತ ಪಿತೂರಿಯಿಂದ ಪಾರಾಗುತ್ತದೆ. ಮರೆಯಬೇಡಿ ಭಾರತ ಪದ ಸಂಸ್ಕೃತ ಭಾಷೆಯದು ಸಂಸ್ಕೃತ ಭಾಷೆ ಎಂದರೆ ಶ್ರೇಷ್ಠ – ಕನಿಷ್ಠ – ಅನಿಷ್ಠ ಎಂಬ ತಾರತಮ್ಯವನ್ನು ಬಿತ್ತಿ ಬೆಳಸಿ ಇವತ್ತಿಗೂ ಗಟ್ಟಿಗೊಳಿಸಲು ಪಿತೂರಿ ಮಾಡುತ್ತಲೇ ಇರುವ ಭಾಷೆ.
ಪ್ರತಿಯೊಬ್ಬರು ಕನ್ನಡ ನಾಡಿನಲ್ಲಿ ಆನಂದವಾಗಿ ಅನುಕೂಲದಿಂದ ಬದುಕುವಂತಹ ವಾತಾವರಣ ತರಲು ‘ಭಾರತ ಪದ ಬೇಡ, ಇಂಡಿಯಾ ಅನ್ನೋಣ’ ಎಂಬುದು ಬಹುದೊಡ್ಡ ಉಪಾಯ. ‘ಒಂದು ದೇಶ – ಒಂದೇ ಭಾಷೆ’ ಎಂಬ ಅಪಾಯದಿಂದ ಪಾರಾಗಲು ಹೊಸ ಹೊಸ ಉಪಾಯ ಹೂಡುವುದು ಚಲನಶೀಲ ಕನ್ನಡನಾಡಿನ ನಾಗರೀಕರ ಸಂಕೇತ.
ಅಬಿ ಒಕ್ಕಲಿಗ
ಮುಂದಾಳು
ನಾವು Dravida ಕನ್ನಡಿಗರು ಚಳುವಳಿ
