Home ಬ್ರೇಕಿಂಗ್ ಸುದ್ದಿ ಕೇಂದ್ರದ ಅಸಹಕಾರದ ನಡುವೆಯೇ ರಾಜ್ಯ ಸರ್ಕಾರದಿಂದ ಬರ ಪರಿಹಾರದ ಹಣ ಬಿಡುಗಡೆ

ಕೇಂದ್ರದ ಅಸಹಕಾರದ ನಡುವೆಯೇ ರಾಜ್ಯ ಸರ್ಕಾರದಿಂದ ಬರ ಪರಿಹಾರದ ಹಣ ಬಿಡುಗಡೆ

0

ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಯಾವುದೇ ಹಣ ಬಿಡುಗಡೆ ಆಗದಿದ್ದರೂ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಬರದ ಹಣ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಇದೆ. ಹೀಗಾಗಿ ಕೇಂದ್ರದಿಂದ ಬರ ಪರಿಹಾರ ಘೋಷಣೆಗೆ ಆಗ್ರಹಗಳು ಕೇಳಿಬರುತ್ತಿದ್ದವು.

SDRF ಅಡಿಯಲ್ಲಿ 31 ಜಿಲ್ಲೆಗಳಿಗೆ 324 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ರಾಜ್ಯದ 235 ತಾಲೂಕುಗಳ ಪೈಕಿ 216 ತಾಲೂಕುಗಳು ಬರ ಪೀಡಿತ ಅಂತ ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು, ಕೇಂದ್ರ ಸರ್ಕಾರಕ್ಕೆ ಬರಪರಿಹಾರವಾಗಿ 17 ಸಾವಿರ ಕೋಟಿ ರೂಪಾಯಿ ಕೇಳಲಾಗಿತ್ತು.

ಮುಂಗಾರು ವೈಫಲ್ಯದಿಂದ ರೈತರಿಗೆ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಕಲ ರೈತರು ಬೆಳೆದಿದ್ದರೂ ನೀರಿನ ಕೊರತೆಯಿಂದ ಬೆಳೆ ಒಣಗಿ ಹೋಗಿವೆ. ಇದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ಹಲವು ರೈತ ಸಂಘಟನೆಗಳು ಬೆಳೆ ಪರಿಹಾರ ಘೋಷಣೆ ಮಾಡಿಬೇಕೆಂದು ಆಗ್ರಹಿಸಿದ್ದವು.

ಪ್ರಸ್ತುತ ಕೇಂದ್ರದಿಂದ ಯಾವುದೇ ಅನುದಾನ ಅಥವಾ ಪರಿಹಾರದ ಹಣ ಬಿಡುಗಡೆ ಆಗಿಲ್ಲ. ಇತ್ತ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿ, ಪ್ರಧಾನಿ ನರೇಂದ್ರ ಮೋದಿಯನ್ನು ವಿಶ್ವಾಸಕ್ಕೆ ತಗೆದುಕೊಳ್ಳಲು ಸಿದ್ದರಾಮಯ್ಯ ಸೋತಿದ್ದಾರೆ‌. ಮಾತೆತ್ತಿದರೆ ನರೇಂದ್ರ ಮೋದಿ ವಿರುದ್ಧ ಆರೋಪ ಮಾಡಿದರೆ ರಾಜ್ಯ ನಿರ್ಲಕ್ಷ್ಯಕ್ಕೆ ಒಳಗಾಗದೇ ಇರುತ್ತದೆಯೇ, ಇನ್ನಾದರೂ ಸಿದ್ದರಾಮಯ್ಯ ನರೇಂದ್ರ ಮೋದಿಯವರ ಬಗ್ಗೆ ಮಾತನಾಡುವುದು ಕಡಿಮೆ ಮಾಡಬೇಕು ಎಂದು, ಬರದ ಸ್ಥಿತಿಯ ಬಗ್ಗೆ ಮರೆಮಾಚುವಂತೆ ಮಾತನಾಡಿದ್ದಾರೆ.

ಯಾವ ಜಿಲ್ಲೆಗೆ ಎಷ್ಟು ಅನುದಾನ..?
ಬೆಂಗಳೂರು ನಗರ- 7.50 ಕೋಟಿ.
ಬೆಂಗಳೂರು ಗ್ರಾಮಾಂತರ- 6 ಕೋಟಿ.
ರಾಮನಗರ-7.50 ಕೋಟಿ.
ಕೋಲಾರ – 9 ಕೋಟಿ.
ಚಿಕ್ಕಬಳ್ಳಾಪುರ- 9 ಕೋಟಿ.
ತುಮಕೂರು-15 ಕೋಟಿ.
ಚಿತ್ರದುರ್ಗ- 9 ಕೋಟಿ.
ದಾವಣಗೆರೆ- 9 ಕೋಟಿ.
ಚಾಮರಾಜನಗರ-7.50 ಕೋಟಿ
ಮೈಸೂರು – 13.50 ಕೋಟಿ.
ಮಂಡ್ಯ- 10.50 ಕೋಟಿ.
ಬಳ್ಳಾರಿ- 7.50 ಕೋಟಿ.
ಕೊಪ್ಪಳ- 10.50 ಕೋಟಿ.
ರಾಯಚೂರು- 9 ಕೋಟಿ.
ಕಲಬುರ್ಗಿ- 16.50 ಕೋಟಿ.
ಬೀದರ್- 4.50 ಕೋಟಿ.
ಬೆಳಗಾವಿ- 22.50 ಕೋಟಿ.
ಬಾಗಲಕೋಟೆ- 13.50 ಕೋಟಿ.
ವಿಜಯಪುರ- 18 ಕೋಟಿ.
ಗದಗ-10.50 ಕೋಟಿ.
ಹಾವೇರಿ-12 ಕೋಟಿ.
ಧಾರವಾಡ-12 ಕೋಟಿ.
ಶಿವಮೊಗ್ಗ-10.50 ಕೋಟಿ.
ಹಾಸನ- 12 ಕೋಟಿ.
ಚಿಕ್ಕಮಗಳೂರು-12 ಕೋಟಿ.
ಕೊಡಗು-7.50 ಕೋಟಿ.
ದಕ್ಷಿಣ ಕನ್ನಡ- 3 ಕೋಟಿ.
ಉಡುಪಿ- 4.50 ಕೋಟಿ.
ಉತ್ತರ ಕನ್ನಡ-16.50 ಕೋಟಿ.
ಯಾದಗಿರಿ-9 ಕೋಟಿ.
ವಿಜಯನಗರ-9 ಕೋಟಿ.

You cannot copy content of this page

Exit mobile version