ಆಪ್ ಸ್ಟೋರ್‌ನಿಂದ ಟ್ವಿಟರ್‌ಅನ್ನು ನಿರ್ಬಂಧ ಮಾಡುತ್ತೇವೆ ಎಂದು ಆಪಲ್ ಬೆದರಿಕೆ ಹಾಕಿದ್ದು, ಈ ರೀತಿ ಮಾಡುವುದಕ್ಕೆ ಕಾರಣವಾದರೂ ಏನು ಎಂದು ಟ್ವಿಟರ್‌ನ ಸಿಇಒ ಎಲಾನ್ ಮಸ್ಕ್ ಟ್ವಿಟರ್ ಮುಖಾಂತರವೇ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಎಲಾನ್ ಮಸ್ಕ್ ಅವರು, ʼಆಪಲ್ ತನ್ನ ಆಪ್‌ಸ್ಟೋರ್‌ನಿಂದ ಟ್ವಿಟರ್(Twitter) ಅನ್ನು ತಡೆ ಹಿಡಿಯುವುದಾಗಿ ಬೆದರಿಕೆ ಹೊಡ್ಡಿದೆ, ಆದರೆ ಯಾಕೆ ಎಂದು ನಮಗೆ ಹೇಳುತ್ತಿಲ್ಲ ಎಂದು ತಿಳಿಸಿದ್ದಾರೆ.
ʼಅದಲ್ಲದೇ, ಇತ್ತೀಚೆಗೆ ಆಪಲ್ ಹೆಚ್ಚಾಗಿ ಟ್ವಿಟರ್‌ನಲ್ಲಿ ತನ್ನ ಜಾಹೀರಾತನ್ನು ಕೂಡ ಕಡಿಮೆ ಮಾಡುತ್ತಿದೆ. ಆಪಲ್‌ನವರು ಅಮೇರಿಕಾದಲ್ಲಿನ ವಾಕ್ ಸ್ವಾತಂತ್ರ್ಯವನ್ನು ದ್ವೇಷಿಸುತ್ತಾರೆಯೇ?ʼ ಎಂದು ಎಲಾನ್ ಮಸ್ಕ್ ಪ್ರಶ್ನೆ ಮಾಡಿದ್ದಾರೆ.