ಜಗತ್ತಿನ ಶ್ರೀಮಂತ ಉದ್ಯಮಿ, ಸ್ಪೇಸ್ ಎಕ್ಸ್, ಟೆಸ್ಲಾ ಮಾಲಿಕ ಎಲಾನ್ ಮಸ್ಕ್ ಮೇಲೆ ಮಹಿಳಾ ಉದ್ಯೋಗಿಗಳನ್ನು ಲೈಂಗಿಕವಾಗಿ ಬಳಸಿಕೊಂಡ ಗಂಭೀರ ಆರೋಪ ಕೇಳಿಬಂದಿದೆ. ಸ್ಪೆಸ್ ಎಕ್ಸ್ ಹಾಗೂ ಟೆಸ್ಲಾ ಮಹಿಳಾ ಉದ್ಯೋಗಿಗಳೇ ಈಗ ತಮ್ಮ ಮಾಲಿಕನ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಎಲಾನ್ ಮಸ್ಕ್ ಕಚೇರಿಯಲ್ಲಿ ಅಸಭ್ಯ ಸಂಸ್ಕೃತಿಯಿಂದ ಮಹಿಳಾ ಉದ್ಯೋಗಿಗಳು ಕೆಲಸ ಮಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಕೊಕೇನ್ ಸೇರಿದಂತೆ ಇತರ ಕೆಲ ಡ್ರಗ್ಸ್ ಸೇವಿಸುವ ಎಲಾನ್ ಮಸ್ಕ್, ಮಹಿಳಾ ಉದ್ಯೋಗಿಗಳನ್ನು ದೈಹಿಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಮಾಧ್ಯಮ ವರದಿ ಮಾಡಿದೆ.
ಮಹಿಳಾ ಉದ್ಯೋಗಿಯೊಬ್ಬರು ಆರೋಪಿಸಿದಂತೆ ಆಕೆಯನ್ನು ಎಲಾನ್ ಮಸ್ಕ್ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಬಳಿಕ ತನ್ನ ಮಗುವಿಗೆ ತಾಯಿಯಾಗುವಂತೆ ಆಮಿಷ ಹಾಗೂ ಒತ್ತಡ ಹೇರಿದ್ದಾರೆ ಎಂಬ ಆರೋಪ ಇದೀಗ ಎಲ್ಲೆಡೆ ಸಂಚಲನ ಸೃಷ್ಟಿಸಿದೆ.
ಈ ಮಹಿಳಾ ಉದ್ಯೋಗಿಯ ಸಾಕುತ್ತಿದ್ದ ಕುದುರೆಯನ್ನು ದುಪ್ಪಟ್ಟ ಹಣ ನೀಡಿ ಎಲಾನ್ ಮಸ್ಕ್ ಖರೀದಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ತನ್ನ ಜೊತೆ ಸೆಕ್ಸ್ ನಡೆಸುವಂತೆ ಒತ್ತಾಯಿಸಿದ್ದಾನೆ. ಈ ಘಟನೆ ಬೆನ್ನಲ್ಲೇ ಮಹಿಳಾ ಉದ್ಯೋಗಿ ರಾಜೀನಾಮೆ ನೀಡಿ ಕಂಪನಿಯಿಂದ ಹೊರಬಂದಿದ್ದಾರೆ.
2013ರಲ್ಲಿ ಸ್ಪೆಸ್ ಎಕ್ಸ್ ಮಹಿಳಾ ಉದ್ಯೋಗಿಯನ್ನು ಕರೆಯಿಸಿ ಕೆಲ ಆಮಿಷ ಒಡ್ಡಿದ ಎಲಾನ್ ಮಸ್ಕ್, ತನ್ನ ಮಕ್ಕಳಿಗೆ ತಾಯಿಯಾಗುವಂತೆ ಒತ್ತಾಯಿಸಿದ್ದಾನೆ ಎಂದು ಮಹಿಳಾ ಉದ್ಯೋಗಿ ಆರೋಪಿಸಿದ್ದಾರೆ. ಎಲಾನ್ ಮಸ್ಕ್ ಜೊತೆ ಸುದೀರ್ಘ ದಿನಗಳಿಂದ ಮಹಿಳಾ ಉದ್ಯೋಗಿ ದೈಹಿಕ ಸಂಬಂಧ ಹೊಂದಿದ್ದಳು. ಇದರ ನಡುವೆ ಇವರಿಬ್ಬರ ಚಾಟ್ ಹಿಸ್ಟರಿ ಈಗ ಬಹಿರಂಗಗೊಂಡಿದ್ದು, ಮಹಿಳಾ ಉದ್ಯೋಗಿ ಜೊತೆಯಲ್ಲಿ ನಡೆಸಿದ ಅಸಭ್ಯ ಚಾಟ್ ಹಲವೆಡೆ ವೈರಲ್ ಆಗಿದೆ.
ಆದರೆ ದಿಢೀರ್ ಇವರ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಹೀಗಾಗಿ ಮಹಿಳಾ ಉದ್ಯೋಗಿ ಕಂಪನಿಯಿಂದ ಹೊರಬಿದ್ದರು ಎಂದು ವರದಿಯಾಗಿದೆ.