Home ದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್‌ಕೌಂಟರ್‌: ಭದ್ರತಾ ಪಡೆಗಳ ಬಲೆಗೆ ನಾಲ್ವರು ಉಗ್ರರು

ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್‌ಕೌಂಟರ್‌: ಭದ್ರತಾ ಪಡೆಗಳ ಬಲೆಗೆ ನಾಲ್ವರು ಉಗ್ರರು

0

ಉಧಮ್‌ಪುರ: ಜಮ್ಮು ಮತ್ತು ಕಾಶ್ಮೀರದಲ್ಲಿ ಗುಂಡಿನ ಚಕಮಕಿ ಮುಂದುವರಿದಿದೆ. ಉಧಮ್‌ಪುರದಲ್ಲಿ ನಡೆಯುತ್ತಿರುವ ಈ ಎನ್‌ಕೌಂಟರ್‌ನಲ್ಲಿ (Jammu and Kashmir Encounter) ಭದ್ರತಾ ಪಡೆಗಳು ನಾಲ್ವರು ಉಗ್ರರನ್ನು ಸುತ್ತುವರಿದಿವೆ ಎಂದು ತಿಳಿದುಬಂದಿದೆ.

ಈ ಪ್ರದೇಶದಲ್ಲಿ ಉಗ್ರರ ಚಲನವಲನಗಳ ಕುರಿತು ಗುಪ್ತಚರ ಇಲಾಖೆಯಿಂದ ಮಾಹಿತಿ ಬಂದ ನಂತರ, ಸೇನೆ (Army), ವಿಶೇಷ ಕಾರ್ಯಾಚರಣೆ ಪಡೆ (Special Operation Group) ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸಂಯುಕ್ತ ಕಾರ್ಯಾಚರಣೆ ಆರಂಭಿಸಿದ್ದಾರೆ. ಉಧಮ್‌ಪುರದ ದುಡು ಬಸಂತ್‌ಗಢ ಪರ್ವತ ಪ್ರದೇಶಗಳಲ್ಲಿ ಶೋಧ ನಡೆಸುತ್ತಿದ್ದಾಗ, ಮೂರರಿಂದ ನಾಲ್ಕು ಮಂದಿ ಉಗ್ರರು ಇರುವುದು ದೃಢಪಟ್ಟಿದೆ ಮತ್ತು ಅವರನ್ನು ಸುತ್ತುವರಿದು ಕಾರ್ಯಾಚರಣೆ ಮುಂದುವರೆಸಲಾಗಿದೆ.

ಭದ್ರತಾ ಪಡೆಗಳನ್ನು ನೋಡಿದ ಉಗ್ರರು ಗುಂಡು ಹಾರಿಸಿದ್ದಾರೆ, ಇದರಿಂದ ಒಬ್ಬ ಸೇನಾ ಯೋಧ ಗಾಯಗೊಂಡಿದ್ದಾರೆ. ಅವರನ್ನು ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಉಧಮ್‌ಪುರದಲ್ಲಿ ಸಿಕ್ಕಿಬಿದ್ದಿರುವ ಉಗ್ರರು ಜೈಷ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದವರು ಎಂದು ಶಂಕಿಸಲಾಗಿದೆ.

ಪ್ರಸ್ತುತ ಈ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರಿದಿದೆ. ಇದಕ್ಕೂ ಮೊದಲು, ಕಿಶ್ತ್ವಾರ್‌ನಲ್ಲಿಯೂ ಎನ್‌ಕೌಂಟರ್ ನಡೆಯುತ್ತಿದೆ ಎಂಬ ವರದಿಗಳು ಬಂದಿದ್ದವು. ಆದರೆ, ಸೇನೆಯ ಮೂಲಗಳು ಉಧಮ್‌ಪುರದಲ್ಲಿ ಮಾತ್ರ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿವೆ.

You cannot copy content of this page

Exit mobile version