ಬೆಂಗಳೂರು : ಶಿಕ್ಷಣ ನೀಡಬೇಕಾದ ಮದರಸಾದಲ್ಲಿ ಶಿಸ್ತಿನ ಹೆಸರಲ್ಲಿ ಮಕ್ಕಳ ಮೇಲೆ ವ್ಯಕ್ತಿಯೊಬ್ಬ ಮನಬಂದಂತೆ ಹಲ್ಲೆ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರಿನ ಹೆಗಡೆನಗರದಲ್ಲಿ ನಡೆದಿದೆ. ಮದರಸಾದಲ್ಲಿ ಬಾಲಕಿಯರ ಮೇಲೆ ದೈಹಿಕ ದೌರ್ಜನ್ಯ ನಡೆಸಿದ ಆರೋಪ ಕೇಳಿಬಂದಿದ್ದು, ಪೈಶಾಚಿಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮದರಸಾದಲ್ಲಿ ಬಾಲಕಿಯರ ಮೇಲೆ ದೌರ್ಜನ್ಯ ನಡೆಯುತ್ತಿರುವ ಆರೋಪ ಮುಂಚಿನಿಂದಲೂ ಕೇಳಿಬಂದಿತ್ತು. ಇದೀಗ ಅಮಾನವೀಯ ಕೃತ್ಯದ ವಿಡಿಯೋ ಹೊರಬಿದ್ದಿದ್ದು ಎಲ್ಲರನ್ನು ಬೆಚ್ಚಿಬೀಳಿಸಿದೆ.ಬಾಲಕಿ ತಪ್ಪು ಮಾಡಿದ್ದಾರೆಂದು ಮದರಸಾದ ಕಚೇರಿಗೆ ಕರೆದು ಹಲ್ಲೆ ನಡೆಸಲಾಗಿದ್ದು, ಮನಬಂದಂತೆ ಹೊಡೆಯಲಾಗಿದೆ. ಅಲ್ಲದೆ ಬಾಲಕಿಯ ಖಾಸಗಿ ಅಂಗಾಂಗಗಳನ್ನು ಮುಟ್ಟಿ ಕ್ರೌರ್ಯ ಮೆರೆಯಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಘಟನೆ ಬಗ್ಗೆ ತಿಳಿದಾಕ್ಷಣ ಸಿಟ್ಟಿಗೆದ್ದ ಪೋಷಕರು ಮದರಸ ಮುಂದೆ ಪ್ರತಿಭಟಿಸಿದ್ದಾರೆ.ಬಾಲಕಿ ಹೇಳುವ ಪ್ರಕಾರ.. ಈ ಮದರಸಾದಲ್ಲಿ ಮಕ್ಕಳ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಲುಗುತ್ತೆ, ಜೋರಾಗಿ ಮಾತನಾಡಿದ್ದಕ್ಕೂ ಎಷ್ಟೋ ಬಾರಿ ನಮಗೆ ಹೊಡೆದಿದ್ದಾರೆ. ಅದಲ್ಲದೇ ಈ ಮದರಸಾದಲ್ಲಿ ಊಟ, ತಿಂಡಿ ಹಾಗೂ ನೈರ್ಮಲ್ಯದ ಸಮಸ್ಯೆಯೂ ಇದೆ ಎನ್ನಲಾಗಿದೆ.