ನವದೆಹಲಿ: ಸುಪ್ರೀಂ ಕೋರ್ಟಿನಲ್ಲಿ ಸಂವಿಧಾನ ಶಿಲ್ಪಿ ಡಾ ಬಿಆರ್ ಅಂಬೇಡ್ಕರ್ ಅವರ ಪ್ರತಿಮೆ ಅನಾವರಣಗೊಂಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮತ್ತು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಅಂಬೇಡ್ಕರ್ ಅವರ 7 ಅಡಿ ಎತ್ತರದ ಪ್ರತಿಮೆಯನ್ನು ನವೆಂಬರ್ 26, ಭಾನುವಾರದಂದು ಸುಪ್ರೀಂ ಕೋರ್ಟ್‌ನಲ್ಲಿ ಉದ್ಘಾಟಿಸಿದರು.
ಅಧ್ಯಕ್ಷ ಮುರ್ಮು ಅವರು ಸಂವಿಧಾನ ದಿನದ ಅಂಗವಾಗಿ ಮೊದಲ ಕಾನೂನು ಸಚಿವ ಅಂಬೇಡ್ಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ವಕೀಲಿ ಉಡುಗೆ ತೊಟ್ಟಿರುವ, ಎಡಗೈಯಲ್ಲಿ ಎಡಗೈಯಲ್ಲಿ ಸಂವಿಧಾನದ ಪ್ರತಿಯನ್ನು ಹಿಡಿದಿರುವ ಪ್ರತಿಮೆಯನ್ನು ಸುಪ್ರೀಂ ಕೋರ್ಟ್ ಆವರಣದ ಮುಂಭಾಗದ ಉದ್ಯಾನದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಸುಪ್ರೀಂ ಕೋರ್ಟ್‌ನ ಅಂಗಳದಲ್ಲಿ ಮೊಟ್ಟಮೊದಲ ಅಂಬೇಡ್ಕರ್ ಪ್ರತಿಮೆ
ಡಾ ಬಿಆರ್ ಅಂಬೇಡ್ಕರ್ ಅವರ ಈ ಪ್ರತಿಮೆಯನ್ನು ಶಿಲ್ಪಿ ನರೇಶ್ ಕುಮಾವತ್ ನಿರ್ಮಿಸಿದ್ದಾರೆ. ಸುಪ್ರೀಂ ಕೋರ್ಟ್ ಸಂಕೀರ್ಣದಲ್ಲಿ ಇಲ್ಲಿಯವರೆಗೆ ಎರಡು ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಒಂದು ಭಾರತೀಯ ಮೂಲದ ಬ್ರಿಟಿಷ್ ಕಲಾವಿದ ಚಿಂತಾಮೋನಿ ಕರ್ ರಚಿಸಿದ ಮದರ್ ಇಂಡಿಯಾದ ಭಿತ್ತಿಚಿತ್ರ. ಇನ್ನೊಂದು ಬ್ರಿಟಿಷ್ ಶಿಲ್ಪಿ ವಿನ್ಯಾಸಗೊಳಿಸಿದ ಮಹಾತ್ಮಾ ಗಾಂಧಿಯವರ ಪ್ರತಿಮೆ.
ಸಂವಿಧಾನ ರಚನಾ ಸಮಿತಿಯ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಮತ್ತು ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಅಂಬೇಡ್ಕರ್ ಅವರ 132 ನೇ ಜನ್ಮದಿನವನ್ನು ಈ ವರ್ಷವೂ ಆಚರಿಸಲಾಗುತ್ತಿದೆ. ಡಾ ಅಂಬೇಡ್ಕರ್ ಅವರ ಜನ್ಮದಿನದ (ಏಪ್ರಿಲ್ 14 ) ಮುನ್ನಾದಿನದಂದು (ಏಪ್ರಿಲ್ 15), ವಕೀಲರಾದ ಪ್ರತೀಕ್ ಬೊಂಬಾರ್ಡ್ ಅವರು ಅಂಬೇಡ್ಕರ್ ಅವರ ಪ್ರತಿಮೆಯ ಬೇಡಿಕೆಯನ್ನು ಪ್ರಸ್ತಾಪಿಸಿ ಸಿಜೆಐ ಚಂದ್ರಚೂಡ್ ಅವರಿಗೆ ಜ್ಞಾಪಕ ಪತ್ರವನ್ನು ಸಲ್ಲಸಿದ್ದರು.
ಸುಪ್ರೀಂ ಕೋರ್ಟ್‌ನೊಳಗೆ ಲೋಕಮಾನ್ಯ ಬಾಲಗಂಗಾಧರ ತಿಲಕ್ ಮತ್ತು ಮಹಾತ್ಮ ಗಾಂಧಿಯವರ ಪ್ರತಿಮೆಗಳಿವೆ. ಆದರೆ ಕೋಟ್ಯಂತರ ದೀನದಲಿತರ, ಅಂಚಿಗೆ ತಳ್ಳಲ್ಪಟ್ಟ ಜನರ ವಿಮೋಚಕ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಇಲ್ಲ. 70 ರ ದಶಕದಲ್ಲಿ ದಾದಾಸಾಹೇಬ್ ಗಾಯಕ್ವಾಡ್ ಅವರ ನೇತೃತ್ವದಲ್ಲಿ, ಅಂಬೇಡ್ಕರ್ವಾದಿಗಳು ಸಂಸತ್ತಿನ ಒಳಗೆ ಅವರ ಪ್ರತಿಮೆಯನ್ನು ಸ್ಥಾಪಿಸಲು ಹೋರಾಟ ನಡೆಸಿದ್ದರು.