ಹಾಸನ : ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದರೂ ಅರಣ್ಯಾಧಿಕಾರಿಗಳು ಅನುಭೋಗದಲ್ಲಿರುವ ಗೋಮಾಳ ಜಮೀನನ್ನು ತರೆವುಗೊಳಿಸಲು ಏಕಾ ಏಕಿ ಜಮೀನಿನಲ್ಲಿ ಬೆಳೆದಿರುವ ಜೋಳ ಹಾಗೂ ಇತರೆ ಪೈರುಗಳನ್ನು ಯಂತ್ರಗಳ ಸಹಾಯದಿಂದ ನಾಶಮಾಡಿದ್ದು, ಯಾವುದೇ ನೋಟಿಸ್ ನೀಡದೇ ಹಾನಿ ಮಾಡಿರುವವರ ವಿರುದ್ಧ ಕ್ರಮಕ್ಕೆ ಹಾಗೂ ಸೂಕ್ತ ರಕ್ಷಣೆ ನೀಡಿ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಸಾವಂತನ ಹಳ್ಳಿ ಗ್ರಾಮಸ್ಥರು ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಇದೆ ವೇಳೆ ವಕೀಲರು ಹಾಗೂ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ ಮತ್ತು ಪ್ರಕಾಶ್ ಮಾಧ್ಯಮದೊಂದಿಗೆ ಮಾತನಾಡಿ, ತಾಲೂಕಿನ ಸಾವಂತನಹಳ್ಳಿ ಗ್ರಾಮದ ಸರ್ವೆ ನಂಬರ್ 99 ರಲ್ಲಿನ ಗೋಮಾಳದ ಜಮೀನಿನಲ್ಲಿ ಸುಮಾರು 40 ರಿಂದ 50 ವರ್ಷಗಳಿಗೂ ಮೇಲ್ಪಟ್ಟು ಸಾಗುವಳಿ ಮಾಡುತ್ತಾ ಶಾಂತಿಯುತವಾಗಿ ಅನುಭವಿಸಿಕೊಂಡು ಬರುತ್ತಿರುತ್ತೇವೆ. ಆದರೆ ಈ ಸಂಭಂಧ ಅಗಕ್ಕೆ ಅನುಭೋಗದ ರೀತ್ಯಾ ಗ್ರಾಮಸ್ತರುಗಳು ಅಗತ್ಯ ಮಂಜೂರಾತಿ ಮತ್ತು ಖಾತಾ ಆದೇಶಗಳನ್ನು ಹೊಂದಲು ಸಾಧ್ಯವಾಗದ ಕಾರಣ ಗ್ರಾಮಸ್ತರುಗಳು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಕೇಸು ದಾಖಲಿಸಿರುತ್ತೇವೆ. ಸಾವಂತನ ಹಳ್ಳಿ ಗ್ರಾಮದ ಸರ್ವೆ ನಂಬರ್ 99 ರಲ್ಲಿನ ಗೋಮಾಳದ ಜಮೀನನ್ನು ಅನುಭೋಗದಲ್ಲಿ ಇಲ್ಲದ ಗ್ರಾಮದವರೇ ಅಲ್ಲದ ಇತರೆಯವರಿಗೆ ಮಂಜೂರು ಮಾಡಿರುವುದಾಗಿ ದಾಖಲಾತಿಗಳನ್ನು ಸೃಷ್ಟಿಸಿಕೊಂಡು ಅನುಭೋಗದಲ್ಲಿರುವ ಗ್ರಾಮಸ್ತರುಗಳಿಗೆ ಅಡ್ಡಿಪಡಿಸಲು ಮುಂದಾಗಿ ಸ್ಥಳದಲ್ಲಿ ವಿನಾಕಾರಣ ಶಾಂತಿಭಂಗವನ್ನುಂಟು ಮಾಡುತ್ತಿರುತ್ತಾರೆ ಎಂದು ದೂರಿದರು. ನಾವುಗಳು ಮಂಜೂರಾತಿಗಳಿಗೆ ಸಂಬಂದಿಸಿದ ದಾಖಲಾತಿಗಳ ಪ್ರತಿಗಳನ್ನು ಕೋರಿ ಸಂಬAಧಪಟ್ಟ ಅಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಿದ್ದರೂ “ದಾಖಲಾತಿಗಳೂ ಲಭ್ಯವಿಲ್ಲ’ ಎಂದು ಹಿಂಬರಹ ನೀಡಿರುತ್ತಾರೆ. ಸಾವಂತನಹಳ್ಳಿ ಗೋಮಾಳದ ಜಮೀನನ್ನು ಕಾನೂನುಬಾಹಿರವಾಗಿ ಅರ್ಹರಲ್ಲದವರಿಗೆ ಮಂಜೂರು ಮಾಡಿರುವುದಾಗಿ ಆದೇಶವನ್ನು ಮಾಡಿದ್ದು, ಇದರಿಂದ ಸುಮಾರು 40 ವರ್ಷಗಳಿಂದ ಅನುಭೋಗದಲ್ಲಿರುವ ಗ್ರಾಮಸ್ತರುಗಳಿಗೆ ತೀವ್ರ ಅನ್ಯಾಯವಾಗಿರುತ್ತೆ. ಸದರಿ ಕಾನೂನುಬಾಹಿರ ಆದೇಶದಿಂದ ರೆವಿನ್ಯೂ ಅಧಿಕಾರಿಗಳು ಅನುಭೋಗದಲ್ಲಿ ಇರುವವರನ್ನೂ ಸ್ವತ್ತಿನಿಂದ ಹೊರಹಾಕಲು ಮುಂದಾಗಿದ್ದು ಗ್ರಾಮಸ್ತರುಗಳು ಹಲವಾರು ಬಾರಿ ಪ್ರತಿಭಟನೆ ನಡೆಯಿಸಿ ಮನವಿಯನ್ನು ನೀಡಿರುತ್ತಾರೆ. ಅನುಭೋಗದಲ್ಲಿರುವ ಗ್ರಾಮಸ್ತರುಗಳು ಮಂಜೂರಾತಿ ಕೋರಿ ನಮೂನೆ 57 ನ್ನು ಕೂಡ ಸಲ್ಲಿಸಿರುತ್ತಾರೆ. ಗ್ರಾಮಸ್ತರುಗಳು ಹಲವಾರು ಬಾರಿ ಜಿಲ್ಲಾಧಿಕಾರಿಗಳು,ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು ಹಾಸನ ಇವರುಗಳ ಕಛೇರಿಯ ಮುಂದೆ ಪ್ರತಿಭಟನೆ ನಡೆಯಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿಯನ್ನು ಕೂಡ ನೀಡಿರುತ್ತಾರೆ. ಅನುಭೋಗದಲ್ಲಿರುವ ಗ್ರಾಮಸ್ಥರು ಮಂಜೂರಾತಿ ಕೋರಿ ನಮೂನೆ 57 ನ್ನೂ ಕೂಡ ಸಲ್ಲಿಸಿರುತ್ತಾರೆ ಎಂದರು.
ವಿಧ್ಯಮಾನಗಳು ಹೀಗಿರುವಾಗ್ಗೆ ಹಾಸನದ ಅರಣ್ಯ ಇಲಾಖಾ ಅಧಿಕಾರಿಗಳು ದಿನಾಂಕ 01-08-2025 ರಂದು ಸಾವಂತನ ಹಳ್ಳಿ ಗ್ರಾಮದ ಸರ್ವೆ ನಂಬರ್ 99 ರಲ್ಲಿನ ಗೋಮಾಳದ ಜಮೀನಿನಲ್ಲಿ ಗ್ರಾಮಸ್ತರುಗಳು ದನಕರುಗಳ ಮೇವಿಗೆಂದು ಬೆಳೆದಿದ್ದ ಜೋಳ ಹಾಗೂ ಇತರೆ ಬೆಳೆಗಳನ್ನು ಯಂತ್ರೋಪಕರಣಗಳನ್ನು ಬಳಿಸಿ ಸರ್ವನಾಶವನ್ನು ಮಾಡಿರುತ್ತಾರೆ. ಸ್ಥಳದಲ್ಲಿದ್ದ ಗ್ರಾಮಸ್ತರು ಬೆಳೆದಿರುವ ಮೇವನ್ನು ಕಟಾವು ಮಾಡಿಕೊಳ್ಳಲು ಅವಕಾಶವನ್ನು ನೀಡುವಂತೆ ಕೋರಿಕೊಂಡರೂ ಕೂಡ ಯಾವುದಕ್ಕೂ ಕಿವಿಗೊಡದೆ ಸರ್ವಾಧಿಕಾರಿಗಳಂತೆ ವರ್ತಿಸಿ ಜೊತೆಯಲ್ಲಿ ಕರೆದುಕೊಂಡು ಬಂದಿದ್ದ ಅರಕ್ಷರವರ ದಬ್ಬಾಳಿಕೆಯಿಂದ ಹಾಗೂ ಬಲಪ್ರಯೋಗದಿಂದ ಬೆಳೆದಿದ್ದ ಬೆಳೆಯನ್ನು ಕೆಲವೇ ನಿಮಿಷದಲ್ಲಿ ನಾಶಗೊಳಿಸಿ ಅಪಾರ ಹಾನಿಮಾಡಿರುತ್ತಾರೆ ಎಂದು ತಮ್ಮ ಅಳಲು ತೋಡಿಕೊಂಡರು. ಸ್ಥಳಕ್ಕೆ ಬಂದಿದ್ದ ಅರಣ್ಯ ಇಲಾಖಾ ಅಧಿಕಾರಿಗಳನ್ನು ಯಾವ ಆಧಾರದ ಮೇಲೆ ಈ ರೀತ್ಯ ಕ್ರಮಕೈಗೊಳ್ಳುತ್ತಿರುವುದಾಗಿ ವಿಚಾರಿಸಿದ್ದಕ್ಕೆ ಗೋಮಾಳದ ಜಮೀನು ಅರಣ್ಯ ಇಲಾಖೆಗೆ ಹಸ್ತಾಂತರವಾಗಿದ್ದು ಅರಣ್ಯವನ್ನು ಬೆಳೆಸಲು ಸಸಿಗಳನ್ನು ನೆಡೆಸಲು ಮುಂದಾಗಿರುವುದಾಗಿ ತಿಳಿಸಿದ್ದು ಇದರಿಂದ ಗ್ರಾಮಸ್ತರುಗಳಿಗೆ ತೀವ್ರ ಆಶ್ಚರ್ಯವಾಗಿದ್ದು, ಗೋಮಾಳದ ಜಮೀನನ್ನು ಕಾನೂನು ಬಾಹಿರವಾಗಿ ಅರಣ್ಯ ಇಲಾಖೆಗೆ ನೀಡಿರುವುದು ತಿಳಿದುಬಂದಿರುತ್ತೆ. ಸಾವಂತನ ಹಳ್ಳಿ ಗ್ರಾಮಸ್ತರುಗಳಿಗೆ ಗೋಮಾಳವು ಅತ್ಯಗತ್ಯವಾಗಿ ಬೇಕಾಗಿದ್ದು, ಗೋಮಾಳವನ್ನು ಸಂರಕ್ಷಿಸಿಕೊಳ್ಳಲು ಗ್ರಾಮಸ್ತರುಗಳು ಕಾನೂನು ಸಮರ ನೆಡೆಸುತ್ತಾ ಬಂದಿರುತ್ತಾರೆ. ಅರಣ್ಯ ಇಲಾಖಾ ಅಧಿಕಾರಿಗಳು ಬಾರಿ ಉದ್ಧಟತನದಿಂದ ವರ್ತಿಸುತಾ ಹಾಗೂ ಬಲಪ್ರಯೋಗದಿಂದ ಗ್ರಾಮಸ್ತರುಗಳನ್ನು ಗೋಮಾಳದ ಜಮೀನಿನಿಂದ ಹೊರಹಾಕಲು ಮುಂದಾಗಿ ಸ್ಥಳದಲ್ಲಿ ಶಾಂತಿ ಭಂಗವನುAಟುಮಾಡಿ ಅಹಿತಕರ ಘಟನೆಗೆ ಕಾರಣಕರ್ತರಾಗಿರುತ್ತಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.
ನ್ಯಾಯಾಲಯಲ್ಲಿರುವ ಕೇಸು ಅಂತಿಮವಾಗಿ ತೀರ್ಮಾನವಾಗುವವರೆಗೂ ಹಾಗೂ ಗೋಮಾಳದ ಸಂರಕ್ಷಣೆಗಾಗಿ ಗ್ರಾಮಸ್ತರುಗಳ ನೆಡೆಸಿರುವ ಹೋರಾಟವು ತಾರ್ಕಿಕ ಅಂತ್ಯ ಕಾಣುವವರೆಗೂ ಅನುಭೋಗದಲ್ಲಿರುವ ಗ್ರಾಮಸ್ತರುಗಳನ್ನು ಗೋಮಾಳದ ಜಮೀನಿನಿಂದ ತರೆವುಗೊಳಿಸಲು ಯಾವುದೇ ಬಲವಂತ ಕ್ರಮ ಜರುಗಿಸದಂತೆ ಸಂಬಂಧಪಟ್ಟ ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಕಂದಾಯ ಇಲಾಖಾಧಿಕಾರಿಗಳಿಗೆ ಸೂಕ್ತ ನಿರ್ದೇಶನವನ್ನು ನೀಡಿ ಗ್ರಾಮಸ್ತರುಗಳ ಹಿತವನ್ನು ರಕ್ಷಿಸಿ ನ್ಯಾಯವನ್ನು ದೊರಕಿಸಿ ಕೊಡಬೇಕಾಗಿ ಗ್ರಾಮಸ್ತರು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಸಾವಂತನಹಳ್ಳಿ ಗ್ರಾಮದ ಪ್ರಕಾಶ್, ಪುಟ್ಟಶೆಟ್ಟಿ, ಮಂಜುನಾಥ್, ವೆಂಕಟೇಶ್, ದೊಡ್ಡಯ್ಯ, ವಿರುಪಾಕ್ಷ, ರಂಗಯ್ಯ, ವಿಜಯಕುಮಾರ್, ಜಗದೀಶ್, ಪ್ರಶಾಂತ್ ಕುಮಾರ್, ಮಂಜೇಗೌಡ, ತಿಮ್ಮೇಗೌಡ ಇತರರು ಉಪಸ್ಥಿತರಿದ್ರು.