ಹಾಸನ : ಸಾರಿಗೆ ಬಸ್ ಮುಷ್ಕರದ ಹಿನ್ನಲೆಯಲ್ಲಿ ಇಲಾಖೆ ಆದೇಶದ ಮೆರೆಗೆ ಖಾಸಗೀ ಬಸ್ಗಳು ಕೆ.ಎಸ್.ಆರ್.ಟಿ.ಸಿ. ಬಸ್ ಒಳಗೆ ಅವಕಾಶ ಕೊಟ್ಟರೂ ಅಷ್ಟೊಂದು ಜನ ಪ್ರಯಾಣಿಕರು ಬರಲಿಲ್ಲ. ಮದ್ಯಾಹ್ನದ ವೇಳೆ ಕೆ.ಎಸ್.ಆರ್.ಟಿ.ಸಿ. ಬಸ್ಸೊಂದು ನಿಲ್ದಾಣದಲ್ಲಿ ನಿಲ್ಲಿಸಿ ಪ್ರಯಾಣಿಕರ ತುಂಬಿಸುವಾಗ ಗೊಂದಲ ಉಂಟಾಗಿ ಖಾಸಗೀ ವಾಹನದ ಚಾಲಕರು ಮತ್ತು ಮಾಲೀಕರು ಆಕ್ರೋಶಗೊಂಡು ತಮ್ಮ ವಾಹವನ್ನು ನಿಲ್ದಾಣದಿಂದ ಹೊರಗೆ ವಾಪಸ್ ಹೋದ ಘಟನೆ ನಡೆಯಿತು.

ರಾತ್ರಿಯಿಂದಲೇ ಕೆ.ಎಸ್.ಆರ್.ಟಿ.ಸಿ. ಬಸ್ ಗಳು ನಿಲ್ದಾಣಕ್ಕೆ ಬಾರದೇ ಮಂಗಳವಾರ ನಿಲ್ದಾಣ ಖಾಲಿ ಖಾಲಿ ಇರುವುದು ಕಂಡು ಬಂದಿತು. ಈ ವೇಳೆ ಖಾಸಗೀ ವಾಹನದ ಮಾಲೀಕರ ಮತ್ತು ಚಾಲಕರ ಜೊತೆ ಸಾರಿಗೆ ಸಂಸ್ಥೆ ಅಧಿಕಾರಿ, ಆರ್.ಟಿ.ಓ. ಇತರೆ ಅಧಿಕಾರಿಗಳೊಂದಿಗೆ ಸಭೆ ನಡೆಯಿತು. ಪ್ರಯಾಣಿಕರಿಗೆ ಯಾವ ತೊಂದರೆ ಆಗದಂತೆ ಎಲ್ಲಾ ಖಾಸಗೀ ವಾಹನಗಳು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ನಿಲ್ಲಿಸಲು ನಿರ್ಧರಿಸಲಾಯಿತು. ಜಿಲ್ಲಾಧಿಕಾರಿಗಳ ಸೂಚನೆ ಮೆರೆಗೆ ಖಾಸಗೀ ವಾಹನಗಳು ಸಂಚರಿಸಿದವು. ಸಾರಿಗೆ ಬಸ್ ಇಲ್ಲದೆ ದೂರದ ಊರುಗಳಿಂದ ಬರುವವರು ಅನೇಕರು ಬರಲಿಲ್ಲ. ಈ ಕಾರಣ ಬಸ್ ನಿಲ್ದಾಣದಲ್ಲಿ ಅಷ್ಟೊಂದು ಪ್ರಯಾಣಿಕರು ಕಾಣಿಸಲಿಲ್ಲ. ಮಂಗಳವಾರ ಮದ್ಯಾಹ್ನದ ವೇಳೆಗೆ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಒಂದು ಆಗಮಿಸಿ ಎಸ್ಕಾರ್ಟ್ ಮೂಲಕ ಬೆಂಗಳೂರಿಗೆ ಹೊರಡಲು ಸಿದ್ಧತೆ ನಡೆಸಿದರು. ವಿಷಯ ತಿಳಿದ ಖಾಸಗೀ ವಾಹನದ ಚಾಲಕರು ಹಾಗೂ ಮಾಲೀಕರು ಬಸ್ ಮುಂದೆ ನಿಂತು ಸಂಸ್ಥೆ ಅಧಿಕಾರಿಗಳ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು. ಇದರ ನಡುವೆಯು ಪೊಲೀಸ್ ಭದ್ರತೆಯೊಂದಿಗೆ ಬಸ್ ಹೊರಟೆ ಬಿಟ್ಟಿತು. ನಿಲ್ದಾಣದ ಮುಂಬಾಗ ಸಂಘದ ನೌಕರರು ಬಂದ ಕೂಡಲೇ ಬಸ್ ಚಾಲಕ ಮಧ್ಯೆಯೇ ಚಾಲನೆ ಸ್ಥಗಿತಗೊಳಿಸಿ ಅಲ್ಲಿಂದ ಬೈಕ್ ಮೂಲಕ ಕಣ್ಮರೆಯಾದ ಘಟನೆ ನಡೆಯಿತು. ಸಿಟ್ಟಿಗೆದ್ದ ಖಾಸಗೀ ವಾಹನ ಚಾಲಕರು ಮತ್ತು ಮಾಲೀಕರು ಎಲ್ಲಾ ವಾಹನವನ್ನು ನಿಲ್ದಾಣದಿಂದ ಹೊರ ತೆಗೆದರು. ಎಷ್ಟೊ ಸಮಯವಾದ ಮೇಲೆ ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯವರು ಸಮಧಾನಪಡಿಸಿ ಮತ್ತೆ ನಿಲ್ದಾಣಕ್ಕೆ ಖಾಸಗೀ ವಾಹನ ಬರುವಂತೆ ಮಾಡಲು ಯಶಸ್ವಿಯಾದರು. ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕರ ಮುಷ್ಕರದಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳು ಪರದಾಡಬೇಕಾಯಿತು. ಸ್ವಂತ ವಾಹನ ಇರುವವರಿಗೆ ಯಾವ ಸಮಸ್ಯೆ ಆಗಲಿಲ್ಲ. ಕೆಲ ವಿದ್ಯಾರ್ಥಿಗಳು ಇತರೆ ವಾಹನದಲ್ಲಿ ತೆರಳಿದರು. ಶಾಲಾ ಕಾಲೇಜಿನಲ್ಲಿಯೂ ಕೂಡ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಮುಖ ಕಂಡು ಬಂದಿತು.
ಇದೆ ವೇಳೆ ಖಾಸಗೀ ವಾಹನ ಚಾಲಕ ರಾಜೇಶ್ ಮಾಧ್ಯಮದೊಂದಿಗೆ ಮಾತನಾಡಿ, ಸರಕಾರ ನೆಚ್ಚಿಕೊಂಡು ನಾವು ಲಕ್ಷಾಂತರ ರೂಗಳ ಬಂಡವಾಳ ಹಾಕಿರುವುದಿಲ್ಲ. ನಮ್ಮಪ್ಪ ಮನೆಯದು ಹಣ ತಂದು ಹಾಕಿರುವುದು. ನಾವು ಮೆಂಟೇನೆಸ್ ಮಾಡುತ್ತೆವೆ ಎಂದು ಬಂಡವಾಳ ಹಾಕಿದ್ದೇವೆ. ಇವರು ಮುಷ್ಕರ ಮಾಡುತ್ತಾರೆ ಈ ವೇಳೆ ನಾವು ಬಸ್ ಚಾಲನೆ ಮಾಡಿ ಜೀವನ ಮಾಡಬೇಕೆಂದು ಬಂಡವಾಳ ಹಾಕಿಲ್ಲ. ಆರ್.ಟಿ.ಓ. ಇಲಾಖೆ ಅಧಿಕಾರಿ ಯಶವಂತ್ ಅವರ ಮಾತಿಗೆ ಬೆಲೆಕೊಟ್ಟು ಗಾಡಿಯನ್ನು ನಿಲ್ದಾಣಕ್ಕೆ ಹಾಕಿದ್ದೇವೆ. ಸಭೆ ಮಾಡಿ ಜನರಿಗೆ ತೊಂದರೆ ಆಗಬಾರದು ಆ ಉದ್ದೇಶದಲ್ಲಿ ನೀವು ಆಪರೇಟ್ ಮಾಡಿ ಎಂದಿದ್ದರು. ಈ ವೇಳೆ ಸಾರಿಗೆ ಇಲಾಖೆಯವರು ಯಾವುದೊ ಒಂದು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ತಂದಿದ್ದಾರೆ. ಆ ಚಾಲಕ ಇಲಾಖೆಯಲ್ಲಿ ಕೆಲಸವೇ ಮಾಡುತ್ತಿಲ್ಲ ಎಂದು ದೂರಿದರು. ಡ್ಯೂಟಿಯಲ್ಲಿ ಇರದ ಚಾಲಕನನ್ನು ಕರೆದುಕೊಂಡು ಬಂದು ಬಸ್ ಓಡಿಸಲು ಮುಂದಾಗಿದ್ದಾರೆ. ಉದ್ದೇಶಪೂರ್ವಕವಾಗಿ ನಾವೇನು ವಾಹನ ತಂದಿರುವುದಿಲ್ಲ, ಎಸ್ಪಿ, ಆರ್.ಟಿ.ಓ ಸಾರಿಗೆ ಇಲಾಖೆ ಅಧಿಕಾರಿಗಳು ಹೇಳಿದಕ್ಕೆ ತರಲಾಗಿದೆ. ಟಿಕೆಟ್ ಧರ ಕೂಡ ಹೆಚ್ಚಿಗೆ ಮಾಡಿರುವುದಿಲ್ಲ. ಅವರ ಸ್ವತ್ತು ಅವರಿಗೆ ಬಿಟ್ಟುಕೊಟ್ಟು ವಾಪಸ್ ಹೋಗುವುದಾಗಿ ಹೇಳಿದರು.
ಬಸ್ ಮಾಲೀಕ ಜಗದೀಶ್ ಮಾಧ್ಯಮದೊಂದಿಗೆ ಮಾತನಾಡಿ, ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕರ ಮತ್ತು ನಿರ್ವಹಕರ ಮುಷ್ಕರ ಹಿನ್ನಲೆಯಲ್ಲಿ ಖಾಸಗೀ ವಾಹನಗಳ ಸಹಕಾರವನ್ನ ಕೇಳಿದ್ದರು. ಅವರ ಮನವಿಗೆ ಅನೇಕರು ಮೊದಲು ಬುಕ್ ಆಗಿರುವುದನ್ನ ರದ್ದು ಮಾಡಿ ರಾತ್ರಿಯಿಂದಲೇ ನಿಲ್ದಾಣಕ್ಕೆ ಬಸ್ ತರಲಾಗಿದೆ. ಆದರೇ ಈಗ ಕೆ.ಎಸ್.ಆರ್.ಟಿ.ಸಿ. ಬಸ್ಸೊಂದನ್ನು ತಂದಿದ್ದಾರೆ. ಈ ಬಸ್ ಬಂದರೇ ನಮ್ಮ ಖಾಸಗೀ ವಾಹನಕ್ಕೆ ಯಾರು ಬರುವುದಿಲ್ಲ. ಹಾಕಿಕೊಳ್ಳುವುದಾದರೇ ಎಲ್ಲಾ ಬಸ್ ಹಾಕಿಕೊಳ್ಳಲಿ ಎಂದು ಆಗ್ರಹಿಸಿದರು. ಇವರ ಈ ನಡವಳಿಕೆಯಿಂದ ನಮಗೆ ಲಾಸಾಗಿದೆ. ನಾವುಗಳೆಲ್ಲಾ ವಾಹನವನ್ನು ತೆಗೆಯುತ್ತಿದ್ದೇವೆ ಎಂದು ತಿಳಿಸಿದರು.