Home ಬ್ರೇಕಿಂಗ್ ಸುದ್ದಿ ಬೆಳಗಾವಿಯಲ್ಲಿ ಆಟೋ ಚಾಲಕನಿಂದ ಮಾಜಿ ಶಾಸಕನ ಬರ್ಬರ ಕೊ*ಲೆ

ಬೆಳಗಾವಿಯಲ್ಲಿ ಆಟೋ ಚಾಲಕನಿಂದ ಮಾಜಿ ಶಾಸಕನ ಬರ್ಬರ ಕೊ*ಲೆ

0

ಆಟೋಗೆ ಶಾಸಕನ ಕಾರು ತಾಗಿದ ಕ್ಷುಲ್ಲಕ ಕಾರಣಕ್ಕೆ ಗೋವಾ ರಾಜ್ಯದ ಮಾಜಿ ಶಾಸಕನನ್ನು ಬೆಳಗಾವಿಯಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಆಟೋ ಚಾಲಕ ಮಾಡಿದ ತೀವ್ರ ಹಲ್ಲೆಯಿಂದಾಗಿ ಗೋವಾದ ಮಾಜಿ ಶಾಸಕ ಲಾವೋ ಮಾಮಲೇದಾರ್ (69) (Ex MLA Lao Mamaleda) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಲಾವೋ ಮಾಮಲೇದಾರ್, ಗೋವಾದ ಪೋಂಡಾ ಕ್ಷೇತ್ರದ ಶಾಸಕರಾಗಿದ್ದರು.

ಬೆಳಗಾವಿಯ ಖಡೇಬಜಾರ್ ಬಳಿ ಆಟೋಗೆ ಮಾಜಿ ಶಾಸಕರ ಕಾರು ಅಚಾನಕ್ಕಾಗಿ ಡಿಕ್ಕಿಯಾಗಿದೆ. ಘಟನೆ ಬಳಿಕ ಅವರು ಶ್ರೀನಿವಾಸ ಲಾಡ್ಜ್ ಕಡೆಗೆ ಬಂದಿದ್ದಾರೆ. ಈ ವೇಳೆ ಲಾಡ್ಜ್ ಎದುರು ಬಂದು ಮಾಜಿ ಶಾಸಕನ ಮೇಲೆ ಚಾಲಕ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದಾಗಿ ಲಾವೋ ಮಾಮಲೇದಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತೀವ್ರ ಹಲ್ಲೆಯ ನಂತರ ಮಾಜಿ ಶಾಸಕ ಲಾವೋ ಮಾಮಲೇದಾರ್ ಮೃತ ದೇಹವನ್ನು ಬೆಳಗಾವಿ ಬೀಮ್ಸ್‌ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ತಕ್ಷಣವೆ ಆರೋಪಿಯನ್ನು ಮಾರ್ಕೆಟ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆಸ್ಪತ್ರೆಗೆ ಡಿಸಿಪಿ ರೋಹನ್ ಜಗದೀಶ್ ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಘಟನೆ ಸಂಬಂಧ ಆರೋಪಿ ಮುಜಾಯಿದ್ ಶಕಿಲ್ ಸನದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

You cannot copy content of this page

Exit mobile version