ಮಂಡ್ಯ: ಕಳೆದವಾರವಷ್ಟೆ ಜಿಲ್ಲೆಯಲ್ಲಿ ನೀರಲ್ಲಿ ಮುಳುಗಿ ಮಕ್ಕಳ ಸಾವು ಮರೆಯುವ ಮುನ್ನವೆ ಇಬ್ಬರು ಯುವತಿಯರು ನೀರು ಪಾಲಾದ ಘಟನೆ ನಡೆದಿದೆ. ಊರಿನ ಹಬ್ಬದ ಹಿನ್ನೆಲೆಯಲ್ಲಿ ಕೆಲಸಕ್ಕೆಂದು ಮುತ್ತತ್ತಿಗೆ ಬಂದಿದ್ದ ಇಬ್ಬರು ಯುವತಿಯರು ಕಾವೇರಿ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದರು. ಆದರೆ ಯುವತಿಯರು ಕಾಲು ಜಾರಿ, ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಆದರೆ ಬಲ್ಲ ಮೂಲಗಳ ಪ್ರಕಾರ ಸಾವಿಗೆ ನಾನಾ ಕಾರಣಗಳು ಎಂಬುದು ತಿಳಿದು ಬಂದಿದೆ ಹಾಗಾಗಿ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.