Home ಬೆಂಗಳೂರು ಫೇಸ್ ಬುಕ್ ನಲ್ಲಿ ಸಿಎಂ ನಿಂದನೆ ಸಕಲೇಶಪುರದ ಮಾಜಿ ಯೋಧ ಅಂದರ್‌

ಫೇಸ್ ಬುಕ್ ನಲ್ಲಿ ಸಿಎಂ ನಿಂದನೆ ಸಕಲೇಶಪುರದ ಮಾಜಿ ಯೋಧ ಅಂದರ್‌

0

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಿಂದಿಸಿದ್ದ ನಿವೃತ್ತ ಯೋಧನನ್ನು ಬೆಂಗಳೂರಿನ ಸಿಸಿಬಿ ಸೈಬರ್ ಪೊಲೀಸರು ಬಂಧಿಸಿದ್ದಾರೆ.

ವಸಂತ್ ಕುಮಾರ್ (40) ಬಂಧಿತ ಆರೋಪಿ. ಸಕಲೇಶಪುರದ ವಸಂತ್ ಕುಮಾರ್ ನಿವೃತ್ತಿ ಬಳಿಕ ಊರಿನಲ್ಲಿ ವ್ಯವಸಾಯ ಮಾಡುತ್ತಿದ್ದರು.

ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು ‘ಕನ್ನಡ ಬರುತ್ತಾ?’ ಎಂದು ಸಿಎಂ ಸಿದ್ದರಾಮಯ್ಯ ಕೇಳಿದ್ದರು. ಇದಕ್ಕೆ ಹನುಮ ಭಕ್ತ ಅನ್ನೋ ಫೇಸ್‌ಬುಕ್ ಪೇಜ್‌ನಲ್ಲಿ ಸಿಎಂ ಅವರನ್ನು ನಿಂದಿಸಿ ವಸಂತ್ ಕುಮಾರ್ ಪೋಸ್ಟ್ ಹಾಕಿದ್ದರು.

ಸಿಎಂ ಕುರಿತು ಏಕವಚನದಲ್ಲೇ ಕೆಟ್ಟದಾಗಿ ನಿಂದಿಸಿ ಪೋಸ್ಟ್ ಮಾಡಿದ್ದ. ಈ ಸಂಬಂಧ ಸಿಸಿಬಿ ಸೈಬರ್ ಪೊಲೀಸರು ವಸಂತ್ ಕುಮಾರ್‌ರನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ

You cannot copy content of this page

Exit mobile version