Home ಅಪರಾಧ ಗಾಂಜಾ, ಹೆರಾಯಿನ್ ಮಾರಾಟ ಜಾಲ ಪತ್ತೆ ; ಬೆಂಗಳೂರಲ್ಲಿ ನಾಲ್ವರು ಉತ್ತರ ಭಾರತೀಯ ಆರೋಪಿಗಳ ಬಂಧನ

ಗಾಂಜಾ, ಹೆರಾಯಿನ್ ಮಾರಾಟ ಜಾಲ ಪತ್ತೆ ; ಬೆಂಗಳೂರಲ್ಲಿ ನಾಲ್ವರು ಉತ್ತರ ಭಾರತೀಯ ಆರೋಪಿಗಳ ಬಂಧನ

0

ಕರ್ನಾಟಕದಲ್ಲಿ ಉತ್ತರ ಭಾರತೀಯರ ಅಪರಾಧ ಪ್ರಕರಣ ಹೆಚ್ಚಾಗುತ್ತಿರುವ ಮಾತುಗಳ ನಡುವೆಯೇ ಈಗ ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ ಉತ್ತರ ಭಾರತೀಯರ ಜಾಲ ಪತ್ತೆಯಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.

ಬೆಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ ಗಾಂಜಾ ಹೆರಾಯಿನ್ ನಂತಹ ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದವರನ್ನು ಬಂಧಿಸಲಾಗಿದೆ. ಆರೋಪಿಗಳು ಮಾಲು ಸಮೇತ ಸಿಕ್ಕಿಬಿದ್ದಿದ್ದಾರೆ. ಬೆಂಗಳೂರು ಹೊರವಲಯದ ಆನೇಕಲ್ ಬಳಿಯ ಬುಕ್ಕಸಾಗರ ಕೆರೆ ಬಳಿ ಈ ಘಟನೆ ನಡೆದಿದೆ.

ಬಂಧಿತರನ್ನು ಒಡಿಶಾದ ಬದ್ರಕ್ ಜಿಲ್ಲೆ ಮೂಲದ ಮಾಸ್ತೇನಹಳ್ಳಿ ವಾಸಿ ಬಿಗ್ ಬಾಸ್ಕೆಟ್​ನಲ್ಲಿ ಕೆಲಸ ಮಾಡುತ್ತಿದ್ದ ಅಕ್ಷಯ್ (24), ಅಸ್ಸಾಂನ ದೆಮಾಜಿ ಜಿಲ್ಲೆ ಮೂಲದ ವೀರಸಂದ್ರದ ಪ್ಲಿಪ್ಕಾರ್ಟ್ ಉದ್ಯೋಗಿ ಬಿಸ್ವಜಿತ್ ದಾವೊ(24), ಅಸ್ಸಾಂನ ಕರಿಮಾಗಂಜ್ ಜಿಲ್ಲೆ ಮೂಲದ ವೀರಸಂದ್ರ ಡೆಲಿವರಿ ಬಾಯ್ ಜಾಕಿರ್ ಹುಸೇನ್ (24), ಮಂಗಳೂರು ನಗರ ಮೂಲದ ತಿರುಪಾಳ್ಯ ವಾಸಿ ಚಾಲಕ ಸರ್ಪುದ್ದೀನ್ (28) ಬಂದಿತ ಆರೋಪಿಗಳಾಗಿದ್ದಾರೆ.

ಆರೋಪಿಗಳಿಂದ 88 ಗ್ರಾಂ ಎಂಡಿಎಂಎ, 01.100 ಕಿಲೋ ಗಾಂಜಾ, 04.06 ಗ್ರಾಂ ಹೆರಾಯಿನ್, 4 ಸಿರೆಂಜ್, 4 ಮೊಬೈಲ್ ಸಮೇತ ಎರಡು ಬೈಕ್ ಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಮಾದಕವಸ್ತು ಮಾರಾಟ ನಿಷೇಧ ಕಾಯಿದೆಯಂತೆ ಪ್ರಕರಣ ದಾಖಲಿಸಿರುವ ಜಿಗಣಿ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಪರಪ್ಪನ ಕೇಂದ್ರ ಕಾರಾಗೃಹಕ್ಕೆ ರವಾನಿಸಿದ್ದಾರೆ.

You cannot copy content of this page

Exit mobile version