ಹಾಸನ: ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ರೋಟರಿ ಕ್ಲಬ್ ಆಫ್ ಹಾಸನ ಹೊಯ್ಸಳ, ರೋಟರಿ ಬೆಂಗಳೂರಿ ಸೌತ್ ಪರೇಡ್, ರೋಟರಿ ಬೆಂಗಳೂರು ಕೋರಮಂಗಲ, ರೋಟರಿ ಬೆಂಗಳೂರು ಲೇಕ್ ಸೈಡ್, ಸಂಜೀವಿನಿ ಸಹಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಹಾಸನ, ಶ್ರೀ ಭಗವಾನ್ ಮಹಾವೀರ್ ವಿಕಲಾಂಗ ಸಹಾಯತ ಸಮಿತಿ ಜೈಪುರ, ಭಾರತ ಸೇವಾದಳ ಹಾಸನ, ಇನ್ನರ್ ವೀಲ್ ಕ್ಲಬ್ ಆಫ್ ಹಾಸನ್ ಹೊಯ್ಸಳ ವೈಸಿರಿ ಹಾಗೂ ಐ.ಎಫ್.ಎಂ.ಆರ್ ಹಾಸನ ಇವರ ಸಹಯೋಗದೊಂದಿಗೆ ಏಪ್ರಿಲ್ 9 ರಿಂದ ಮೂರು ದಿನಗಳ ಕಾಲ ಸಂಜೀವಿನಿ ಸಹಕಾರಿ ಆಸ್ಪತ್ರೆ, ಕೆ ಆರ್ ಪುರಂ ಹಾಸನದಲ್ಲಿ 5ನೇ ವರ್ಷದ ಉಚಿತ ಕೃತಕ ಕೈ ಕಾಲು ಜೋಡಣೆ ಶಿಬಿರವನ್ನು ಏರ್ಪಡಿಸಲಾಗಿದೆ. ಪ್ರತಿ ವರ್ಷನೂ ಕೂಡ ಇಂತಹ ಶಿಬಿರ ಏರ್ಪಡಿಸಿ ನಿರೀಕ್ಷೆಗೂ ಮೀರಿ ಯಶಸ್ವಿಗೊಂಡಿದ್ದೇವೆ. ಪ್ರಮುಖವಾಗಿ ಈ ಶಿಬಿರದಲ್ಲಿ ಫಲಾನುಭವಿಗಳಿಗೆ ಕೃತಕ ಮುಂಗೈ ಹಾಗೂ ಕೃತಕ ಕಾಲು ಮತ್ತು ಪೋಲಿಯೋ ಪೀಡಿತರಿಗಾಗಿ ಕ್ಯಾಲಿಪರ್ಸ್ ಗಳನ್ನು ಉಚಿತವಾಗಿ ಅಳವಡಿಸಲಾಗುವುದು. ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಮತ್ತು ಕರ್ನಾಟಕದ ಇತರೆ ಜಿಲ್ಲೆಗಳಿಂದ ಅರ್ಹ ಫಲಾನುಭವಿಗಳು ಭಾಗವಹಿಸಿ ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದರು. ಉಚಿತ ಕೃತಕ ಕೈ ಕಾಲು ಜೋಡಣಾ ಶಿಬಿರಕ್ಕೆ ನೋಂದಾಯಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ 9035360232, 7899301010 ಸಂಪರ್ಕಿಸಬಹುದು. ಈಗಾಗಲೇ 15 ಕ್ಕೂ ಹೆಚ್ಚು ಜನರು ನೊಂದಾವಣಿ ಮಾಡಿಕೊಂಡಿದ್ದು, ನಿರೀಕ್ಷೆಗೂ ಮೀರಿ ಇದರ ಸದುಪಯೋಗಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕ್ಲಬ್ ಆಫ್ ಹಾಸನ ಹೊಯ್ಸಳ ಬೆಂಗಳೂರಿನ ರವಿ ಚಕ್ರವರ್ತಿ, ಅಧ್ಯಕ್ಷ ಹರೀಶ್, ಮೋಹನ್, ಅನುರಾಧ, ಅಭಿಲಾಷಾ, ಪ್ರಸನ್ನ, ಸಂಜೀವಿನಿ ಆಸ್ಪತ್ರೆ ಉಪಾಧ್ಯಕ್ಷ ಸುರೇಶ್, ಹಿರಿಯ ಸದಸ್ಯ ಶಿವಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
;;;;;;;;;;;;;;;;;;;;;;;; ;;;;;;;;;;;;;;;;;;;;;;;;;