Home ದೇಶ ಗುಜರಾತ್: ಪ್ರಚಂಡ ಗೆಲುವಿನತ್ತ ಬಿಜೆಪಿ

ಗುಜರಾತ್: ಪ್ರಚಂಡ ಗೆಲುವಿನತ್ತ ಬಿಜೆಪಿ

0

ಹೊಸದಿಲ್ಲಿ: ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆಗಳಿಗೆ ನಡೆದ ಚುನಾವಣೆಗಳ ಮತ ಎಣಿಕೆ ಕಾರ್ಯ ಮುಂದುವರೆದಿದ್ದು, ಗುಜರಾತ್ ನಲ್ಲಿ ಆಡಳಿತಾರೂಢ ಭಾರತೀಯ ಜನತಾಪಕ್ಷ ಪ್ರಚಂಡ ಗೆಲುವಿನತ್ತ ಮುನ್ನಡೆದಿದೆ.

ಮತ್ತೊಂದೆಡೆ ಹಿಮಾಚಲ ಪ್ರದೇಶ ವಿಧಾನಸಭೆಗೆ ನಡೆದ ಚುಮಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತುರುಸಿನ ಸ್ಪರ್ಧೆಯ ನಡುವೆಯೂ ಸರಳ ಬಹುಮತ ಪಡೆಯುವ ಸಾಧ್ಯತೆ ಕಂಡುಬರುತ್ತಿದೆ.

ಗುಜರಾತ್ ನ 182 ಸ್ಥಾನಗಳಿಗೆ ನಡೆದ ಚುನಾವಣೆಗಳಲ್ಲಿ ಬಿಜೆಪಿ ಈಗಾಗಲೇ 152 ಸ್ಥಾನಗಳಲ್ಲಿ ಮುಂದಿದ್ದು, ಕಾಂಗ್ರೆಸ್ ಕೇವಲ 22 ಸ್ಥಾನಗಳಲ್ಲಿ ಮುಂದಿದೆ. ಆಮ್ ಆದ್ಮಿ ಪಾರ್ಟಿ ಈ ಬಾರಿ ಖಾತೆ ತೆರೆಯಲಿದ್ದು ಒಟ್ಟು ಆರು ಸ್ಥಾನಗಳಲ್ಲಿ ಮುಂದಿದೆ. ಪಕ್ಷೇತರರು ನಾಲ್ಕು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. 182 ವಿಧಾನಸಭಾ ಕ್ಷೇತ್ರಗಳ ಗುಜರಾತ್ ವಿಧಾನಸಭೆಯಲ್ಲಿ ಬಹುಮತಕ್ಕೆ 92 ಸ್ಥಾನಗಳಲ್ಲಿ ಗೆಲುವು ಬೇಕಾಗಿದ್ದು, ಬಿಜೆಪಿ ಎರಡನೇ ಮೂರರಷ್ಟು ಸ್ಥಾನಗಳನ್ನು ಗಳಿಸುವ ಸಾಧ್ಯತೆ ನಿಚ್ಚಳವಾಗಿದೆ.

ಹಿಮಾಚಲಪ್ರದೇಶದಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ತುರುಸಿ‌ನ‌ ಹಣಾಹಣಿ‌ ನಡೆಯುತ್ತಿದ್ದು, ಕಾಂಗ್ರೆಸ್ 35 ಹಾಗು ಬಿಜೆಪಿ 30 ಸ್ಥಾನಗಳಲ್ಲಿ ಮುಂದಿವೆ. ಪಕ್ಷೇತರರು ಮೂರು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಗಳು ಕಂಡು ಬರುತ್ತಿದೆ. 68 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಹಿಮಾಚಲ ವಿಧಾನಸಭೆಯಲ್ಲಿ ಬಹುಮತಕ್ಕೆ 35 ಸ್ಥಾನಗಳು ಬೇಕಾಗಿದೆ.

You cannot copy content of this page

Exit mobile version