Home ದೇಶ ಪ್ರಧಾನಿ ಮೋದಿ ಪದವಿ ವಿವರ ವೈಯಕ್ತಿಕ ಮಾಹಿತಿ: ಕೇಜ್ರಿವಾಲ್ ಅರ್ಜಿ ವಜಾಗೊಳಿಸಿದ ಗುಜರಾತ್ ಹೈಕೋರ್ಟ್

ಪ್ರಧಾನಿ ಮೋದಿ ಪದವಿ ವಿವರ ವೈಯಕ್ತಿಕ ಮಾಹಿತಿ: ಕೇಜ್ರಿವಾಲ್ ಅರ್ಜಿ ವಜಾಗೊಳಿಸಿದ ಗುಜರಾತ್ ಹೈಕೋರ್ಟ್

0

ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ಪದವಿ ವಿವರಗಳು ಸಂಪೂರ್ಣವಾಗಿ ಅವರ ವೈಯಕ್ತಿಕ ಮಾಹಿತಿಯಾಗಿದ್ದು, ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ಇವುಗಳನ್ನು ಬಹಿರಂಗಪಡಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಗುಜರಾತ್ ಹೈಕೋರ್ಟ್, ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ಪ್ರಧಾನಿಯಾದ ಮಾತ್ರಕ್ಕೆ ಅವರ ವೈಯಕ್ತಿಕ ಶೈಕ್ಷಣಿಕ ದಾಖಲೆಗಳು ಸಾರ್ವಜನಿಕ ಹಿತಾಸಕ್ತಿಯ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಹೈಕೋರ್ಟ್ ಪೀಠ ಹೇಳಿದೆ. ಪ್ರಧಾನಿಯವರ ಪದವಿಯ ವಿವರಗಳು ಈಗಾಗಲೇ ಸಾರ್ವಜನಿಕವಾಗಿ ಲಭ್ಯವಿವೆ ಎಂದು ಈ ಹಿಂದೆ ಕೇಂದ್ರ ಮಾಹಿತಿ ಆಯೋಗ ತಿಳಿಸಿದ್ದ ಅಂಶವನ್ನು ನ್ಯಾಯಾಲಯ ಉಲ್ಲೇಖಿಸಿದೆ.

ಅಲ್ಲದೆ, ಗುಜರಾತ್ ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಈ ಪ್ರಮಾಣಪತ್ರಗಳು ಈಗಾಗಲೇ ಲಭ್ಯವಿದ್ದರೂ ಕೇಜ್ರಿವಾಲ್ ಅವರು ಪ್ರಕರಣವನ್ನು ಮುಂದುವರಿಸಿದ್ದಾರೆ ಎಂದು ತಿಳಿಸಿದ ನ್ಯಾಯಾಲಯ, ಏಕಸದಸ್ಯ ಪೀಠವು ಈ ಹಿಂದೆ ಕೇಜ್ರಿವಾಲ್ ಅವರಿಗೆ ವಿಧಿಸಿದ್ದ 25,000 ರೂಪಾಯಿಗಳ ದಂಡದ ಆದೇಶವನ್ನು ಎತ್ತಿಹಿಡಿದಿದೆ.

You cannot copy content of this page

Exit mobile version