ದೆಹಲಿ: 2022-23ರ ಹಣಕಾಸು ವರ್ಷದಲ್ಲಿ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳ ಆದಾಯವು ಶೇ. 223ರಷ್ಟು ಹೆಚ್ಚಾಗಿದೆ.
ಈ ಪಕ್ಷಗಳಲ್ಲಿ ಶೇ. 73ರಷ್ಟು ಪಕ್ಷಗಳು ತಮ್ಮ ಹಣಕಾಸಿನ ವಿವರಗಳನ್ನು ಬಹಿರಂಗಪಡಿಸಲು ವಿಫಲವಾಗಿವೆ ಎಂದು NGO ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಬಹಿರಂಗಪಡಿಸಿದೆ.
ಗುಜರಾತ್ ಪಕ್ಷಗಳ ಬೃಹತ್ ಆದಾಯ
ಅತಿ ಹೆಚ್ಚು ಆದಾಯವನ್ನು ಸಂಗ್ರಹಿಸಿದ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳ ಪಟ್ಟಿಯಲ್ಲಿ ಗುಜರಾತ್ ಅಗ್ರಸ್ಥಾನದಲ್ಲಿದೆ. ಒಟ್ಟು ಟಾಪ್ 10 ಪಕ್ಷಗಳಲ್ಲಿ, ಗುಜರಾತ್ ಪಕ್ಷಗಳು ರೂ. 1158 ಕೋಟಿ (ಶೇ. 70ಕ್ಕಿಂತ ಹೆಚ್ಚು) ಅತಿ ಹೆಚ್ಚು ಆದಾಯವನ್ನು ಹೊಂದಿವೆ.
ಇವುಗಳಲ್ಲಿ, ಗುಜರಾತ್‌ನ ಭಾರತೀಯ ರಾಷ್ಟ್ರೀಯ ಜನತಾದಳವು 2022-23ರಲ್ಲಿ ತನ್ನ ಆದಾಯವನ್ನು ರೂ. 576.58 ಕೋಟಿ ಎಂದು ತೋರಿಸಿದೆ. ಮುಂದಿನ ಅತಿ ಹೆಚ್ಚು ಆದಾಯದ ಪಕ್ಷ ನ್ಯೂ ಇಂಡಿಯಾ ಯುನೈಟೆಡ್ ಪಾರ್ಟಿ (ರೂ. 407.45 ಕೋಟಿ).
ಅತಿ ಹೆಚ್ಚು ಆದಾಯ ಹೊಂದಿರುವ ಪಕ್ಷಗಳಲ್ಲಿ ಹೆಚ್ಚಿನವು 2015ರ ನಂತರ ರಚನೆಯಾದವು. ಭಾರತೀಯ ರಾಷ್ಟ್ರೀಯ ಜನತಾ ದಳ (ಬಿಜೆಡಿ) 2019-20 ಮತ್ತು 2023-24 ರ ನಡುವೆ ಒಟ್ಟು 957 ಕೋಟಿ ರೂ. ಆದಾಯವನ್ನು ಘೋಷಿಸಿದ್ದು, ಮಾನ್ಯತೆ ಪಡೆಯದ ಪಕ್ಷಗಳಲ್ಲಿ ಅತ್ಯಂತ ಶ್ರೀಮಂತ ಪಕ್ಷವಾಗಿದೆ.
ಟಾಪ್ 10 ಪಕ್ಷಗಳು ಘೋಷಿಸಿದ ಒಟ್ಟು ಆದಾಯ 1581 ಕೋಟಿ ರೂ. ಆಗಿದ್ದು, ಅದರಲ್ಲಿ ಗುಜರಾತ್‌ನ ಪಕ್ಷಗಳ ಪಾಲು 1158 ಕೋಟಿ ರೂ. (ಶೇಕಡಾ 73.22) ಎಂದು ಎಡಿಆರ್ ಬಹಿರಂಗಪಡಿಸಿದೆ.