Home ವಿದೇಶ ಇರಾನ್ ಮೇಲೆ ಅಮೇರಿಕಾ “ದಾಳಿ” ಸುದ್ದಿ: ಟ್ರಂಪ್ ಹೇಳಿಕೆಗೆ ಗಲ್ಫ್ ಪ್ರತಿನಿಧಿಗಳ ಕಳವಳ

ಇರಾನ್ ಮೇಲೆ ಅಮೇರಿಕಾ “ದಾಳಿ” ಸುದ್ದಿ: ಟ್ರಂಪ್ ಹೇಳಿಕೆಗೆ ಗಲ್ಫ್ ಪ್ರತಿನಿಧಿಗಳ ಕಳವಳ

0

ಪಶ್ಚಿಮ ಏಷ್ಯಾದ ರಾಜತಾಂತ್ರಿಕ ಜಗತ್ತು ಈ ವಾರ ಒಂದು ಅಭೂತಪೂರ್ವ ಗಲಿಬಿಲಿಗೆ ಸಾಕ್ಷಿಯಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒಂದು ಘೋಷಣೆ ಇಡೀ ಗಲ್ಫ್ ರಾಷ್ಟ್ರಗಳಲ್ಲಿ ತಲ್ಲಣಗೊಳಿಸಿದ್ದಲ್ಲದೇ, ಮಿತ್ರ ರಾಷ್ಟ್ರಗಳ ಮುಂದೆ ಅಮೆರಿಕದ ವಿಶ್ವಾಸಾರ್ಹತೆಯ ಪ್ರಶ್ನೆಯನ್ನೇ ಹುಟ್ಟುಹಾಕಿದೆ.

ಸೋಮವಾರ (ಮೇ 18) ತಮ್ಮ ಟ್ರೂತ್ ಸೋಷಿಯಲ್ ವೇದಿಕೆಯಲ್ಲಿ ಟ್ರಂಪ್ ಒಂದು ಬಾಂಬ್ ಎಸೆದಿದ್ದರು. “ಕತಾರ್‌ನ ಎಮಿರ್ ತಮೀಮ್ ಬಿನ್ ಹಮದ್ ಅಲ್ ತಾನಿ, ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಮತ್ತು UAE ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್, ಈ ಮೂವರೂ ನನ್ನನ್ನು ವೈಯಕ್ತಿಕವಾಗಿ ಸಂಪರ್ಕಿಸಿ, ನಾಳೆಗೆ ನಿಗದಿಯಾಗಿದ್ದ ಇರಾನ್ ದಾಳಿಯನ್ನು ತಡೆಹಿಡಿಯಲು ಕೋರಿದ್ದಾರೆ” ಎಂದು ಅವರು ಬರೆದಿದ್ದರು.

ಈ ಘೋಷಣೆ ಕ್ಷಣಮಾತ್ರದಲ್ಲಿ ಜಾಗತಿಕ ಮಾಧ್ಯಮ ಲೋಕದಲ್ಲಿ ಸಂಚಲನ ಉಂಟುಮಾಡಿತು. ತೈಲ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಒಂದು ಕ್ಷಣ ತಗ್ಗಿತು. ಆದರೆ ನಿಜ ಆಘಾತ ಬರಲು ಕೆಲವು ಘಂಟೆಗಳು ಸಾಕಾಯಿತು. ಏಕೆಂದರೆ ಟ್ರಂಪ್ ಹೆಸರಿಸಿದ ಗಲ್ಫ್ ರಾಷ್ಟ್ರಗಳೇ ಈ ಹೇಳಿಕೆಯನ್ನು ನಿರಾಕರಿಸಲು ಮುಂದಾದವು.

“ಟ್ರಂಪ್ ಉಲ್ಲೇಖಿಸಿದ ಯಾವ ದಾಳಿ ಯೋಜನೆಯ ಬಗ್ಗೆಯೂ ನಮಗೆ ಯಾವ ಮಾಹಿತಿಯೂ ನೀಡಿರಲಿಲ್ಲ. ಅಂತಹ ಯೋಜನೆ ಇದ್ದ ಸುಳಿವೂ ನಮಗಿರಲಿಲ್ಲ. ಹೀಗಿರುವಾಗ ನಾವು ಹೇಗೆ ತಡೆಯಲು ಕೇಳಿಕೊಳ್ಳಬಲ್ಲೆವು?” ಎಂದು ಕತಾರ್, ಸೌದಿ ಅರೇಬಿಯಾ ಮತ್ತು UAE ದ ಉನ್ನತ ಅಧಿಕಾರಿಗಳು Wall Street Journal ಪತ್ರಿಕೆಗೆ ತಿಳಿಸಿದ್ದಾರೆ.

ಆದರೆ ಇಲ್ಲಿ ಒಂದು ಗಮನಾರ್ಹ ಸಂಗತಿ ಎಂದರೆ.. ಟ್ರಂಪ್ ಘೋಷಣೆಗೆ 24 ಗಂಟೆ ಮೊದಲು ಅವರು ಮೂರೂ ರಾಷ್ಟ್ರಗಳ ನಾಯಕರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದರು ಎಂದು ಎರಡು ಅಧಿಕೃತ ಮೂಲಗಳು ದೃಢಪಡಿಸಿವೆ.

You cannot copy content of this page

Exit mobile version