Home ರಾಜ್ಯ ಹೋರಾಟಕ್ಕೆ ಮಣಿದ ಹಂಪಿ ವಿವಿ ಆಡಳಿತಾಂಗ; ಮುಷ್ಕರ ತಾತ್ಕಾಲಿಕ ನಿಲುಗಡೆ


ಹೋರಾಟಕ್ಕೆ ಮಣಿದ ಹಂಪಿ ವಿವಿ ಆಡಳಿತಾಂಗ; ಮುಷ್ಕರ ತಾತ್ಕಾಲಿಕ ನಿಲುಗಡೆ

0

ಹೊಸಪೇಟೆ: ಕಳೆದ ಮೂರು ದಿನಗಳಿಂದ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ನಡೆಸುತ್ತಿದ್ದ ಆಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ವಿವಿ ಆಡಳಿತಾಂಗ ಮಣಿದಿದ್ದು ವಿದ್ಯಾರ್ಥಿಗಳ ಬೇಡಿಕೆ ಆಂಶಿಕವಾಗಿ ಈಡೇರಿದೆ.

ಈ ಕುರಿತು ʼಪೀಪಲ್‌ ಮೀಡಿಯಾʼದೊಂದಿಗೆ ಮಾತನಾಡಿದ ಸಂಶೋಧನಾ ವಿದ್ಯಾರ್ಥಿ ಪಂಪಾಪತಿಯವರು, ʼಇಂದು ಹೋರಾಟನಿರತ ವಿದ್ಯಾರ್ಥಿಗಳ ಬಳಿ ಧಾವಿಸಿದ ಪೊಲೀಸ್‌ ವರಿಷ್ಠಾಧಿಕಾರಿ ಹರಿಬಾಬು ವಿದ್ಯಾರ್ಥಿಗಳ ಅಹವಾಲು ಕೇಳಿಸಿಕೊಂಡ ಬಳಿಕ ವಿವಿಯ ಉಪಕುಲಪತಿ ಸ.ಚಿ.ರಮೇಶ್‌ ಮತ್ತು ಕುಲಸಚಿವರೊಂದಿಗೆ ಚರ್ಚೆ ನಡೆಸಿದ ಬಳಿಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಕಳೆದ 47 ತಿಂಗಳಿಂದ ಕೊಡದೇ ಬಾಕಿ ಉಳಿಸಿದ್ದ ಶಿಷ್ಯವೇತನವನ್ನು ನೀಡಲು ಒಪ್ಪಿಗೆ ನೀಡಿದ್ದಾರೆ. ನಂತರದಲ್ಲಿ 2017ನೇ ಸಾಲಿನ ವಿದ್ಯಾರ್ಥಿಗಳಿಗೆ ಬಾಕಿ ಇದ್ದ 26 ತಿಂಗಳ ವೇತನವನ್ನು ಅವರ ಖಾತೆಗೆ ಜಮಾ ಮಾಡಿಲಾಗಿದೆಯಲ್ಲದೆ 2018ರ ಸಾಲಿನ ವಿದ್ಯಾಥಿಗಳ 47 ತಿಂಗಳ ಬಾಕಿಯಲ್ಲಿ 40 ತಿಂಗಳ ವೇತನವನ್ನು ನೀಡಿದ್ದು ಮಿಕ್ಕ 2 ತಿಂಗಳ ಶಿಷ್ಯವೇತನವನ್ನು ಆದಷ್ಟು ಬೇಗ ಜಮಾ ಮಾಡುವುದಾಗಿ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೋರಾಟನಿರತ ವಿದ್ಯಾರ್ಥಿಗಳು ತಮ್ಮ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ನಿಲುಗಡೆ ಮಾಡಿದ್ದಾರೆʼ ಎಂದು  ತಿಳಿಸಿದ್ದಾರೆ.

ದನ್ನೂ ಓದಿ: ಇಂದಿನಿಂದ ಹಂಪಿ ಕನ್ನಡ ವಿ.ವಿ. ವಿದ್ಯಾರ್ಥಿಗಳ ಅಹೋರಾತ್ರಿ ಧರಣಿ : ರಕ್ಷಣೆ ಕೋರಿ ಪೊಲೀಸರಿಗೆ ಮನವಿ

ಹಂಪಿ ಕನ್ನಡ ವಿವಿ ಪರಿಶಿಷ್ಟ ಜಾತಿ, ಪಂಗಡದ ಸಂಶೋಧನಾರ್ಥಿಗಳ ಬಾಕಿ ಇರುವ 47 ತಿಂಗಳ ಫೆಲೋಶಿಪ್ ನೀಡುವಂತೆ ಒತ್ತಾಯಿಸಿ, ಭಾನುವಾರದಿಂದ ಅಹೋರಾತ್ರಿ ಧರಣಿ ನಡೆಸಿದ್ದರು. ಕಳೆದ ನಾಲ್ಕು ವರ್ಷಗಳಿಂದ ಫೆಲೋಶಿಪ್ ನೀಡುವಂತೆ ವಿವಿ ಆಡಳಿತಾಂಗಕ್ಕೆ ಮನವಿಗಳನ್ನು ಸಲ್ಲಿಸುತ್ತಾ ಬಂದಿದ್ದು, ಅಗತ್ಯವಿದ್ದಾಗ ಪ್ರತಿಭಟನೆ, ಧರಣಿ ಮಾಡುತ್ತಾ ಬಂದಿದ್ದರು ಕೂಡ, ವಿದ್ಯಾರ್ಥಿಗಳ ಅಳಲನ್ನು ಕೇಳಿಯೂ ಇಲ್ಲಿನ ಕುಲಪತಿಗಳು ಕಣ್ಣು ಮುಚ್ಚಿ ಕುಳಿತಿದ್ದು, ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ಹಂಪಿ ವಿವಿ- ಅಹೋರಾತ್ರಿ ಧರಣಿಯ ವೇಳೆ ವಿದ್ಯಾರ್ಥಿಯ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು

ಈ ಕಾರಣ ಅಲ್ಲಿನ ST/SC ಸಂಶೋಧನ ವಿದ್ಯಾರ್ಥಿಗಳು ಬಾಕಿ ಉಳಿದಿರುವ 47 ತಿಂಗಳ ಶಿಷ್ಯವೇತನವನ್ನು ಕೂಡಲೇ ತಮ್ಮ ಖಾತೆಗೆ ಜಮಾ ಮಾಡಬೇಕು, ಇಲ್ಲವಾದರೆ  ಹಣ ನೀಡುವವರೆಗು ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಪಟ್ಟು ಹಿಡಿದು ಕುಳಿತಿದ್ದರು.

You cannot copy content of this page

Exit mobile version