ನಾಗಮಂಗಲ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ನಡೆದ ಗುಂಪು ಗಲಭೆ, ಹಿಂಸಾಚಾರದ ಹಿಂದೆ ಸಂಸದ ಹೆಚ್ ಡಿ ಕುಮಾರಸ್ವಾಮಿ ಕೈವಾಡ ಇದೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಆರೋಪಿಸಿದ ಬೆನ್ನಲ್ಲೇ ಇದಕ್ಕೆ ಮಾಧ್ಯಮಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ ಕುಮಾರಸ್ವಾಮಿ ಹಾರಿಕೆಯ ಉತ್ತರ ನೀಡಿದ್ದಾರೆ.
ಹೇಳಿ ಕೇಳಿ ಕುಮಾರಸ್ವಾಮಿ ಮಂಡ್ಯ ಸಂಸದ. ಅಲ್ಲದೇ ಬಿಜೆಪಿ ಜೊತೆ ಕೈ ಜೋಡಿಸಿದ ಹಿನ್ನೆಲೆಯಲ್ಲಿ ನಾಗಮಂಗಲದಲ್ಲಿ ನಡೆದ ಕೋಮು ಗಲಭೆ ಹಿಂದೆ ಕುಮಾರಸ್ವಾಮಿಯ ಕೈವಾಡವೂ ಇರಬಹುದು. ಮಂಡ್ಯ ಈ ಹಿಂದೆ ಕಾಣದಂತಾ ಕೋಮು ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ. ಹೀಗಿರುವಾಗ ಇದರ ಹೊಣೆ ಕುಮಾರಸ್ವಾಮಿಯೇ ಹೊರಬೇಕು ಎಂದು ಸಂಸದ ಡಿಕೆ ಸುರೇಶ್ ಹೇಳಿಕೆಯ ಬೆನ್ನಲ್ಲೇ ಮಾಧ್ಯಮಗಳು ಕುಮಾರಸ್ವಾಮಿಗೆ ಈ ಪ್ರಶ್ನೆ ಮುಂದಿಟ್ಟಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಡಿಕೆ ಬ್ರದರ್ಸ್ ಹಿನ್ನಡೆ ಬಗ್ಗೆ, ಅವರ ನಡೆದು ಬಂದ ದಾರಿಯ ಬಗ್ಗೆ ಮಾತನಾಡಿ, ತಮ್ಮ ಮೇಲೆ ಬಂದ ಆರೋಪಕ್ಕೆ ಪ್ರತಿಕ್ರಿಯಿಸದೇ ಹಿಂತಿರುಗಿದ್ದಾರೆ.
ಒಬ್ಬ ಸಂಸದನಾಗಿ ನೇರವಾಗಿ ತಮ್ಮ ಮೇಲೆ ಆರೋಪ ಮಾಡಿದ ವಿಚಾರಕ್ಕೆ ಪ್ರತಿಕ್ರಯಿಸದೇ, ಡಿಕೆ ಬ್ರದರ್ಸ್ ಲೂಟಿಕೋರರು, ಅವರ ಬಂದ ದಾರಿ ಎಂತದ್ದು, ಅವರು ಕೇಳುವ ಪ್ರಶ್ನೆಗೆ ಉತ್ತರಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.