Home Uncategorized 1.17 ಕೋಟಿ ಆಧಾರ್‌ ಕಾರ್ಡ್ಗಳನ್ನು​​​​​​​ ರದ್ದುಗೊಳಿಸಿದ ಕೇಂದ್ರ ಸರ್ಕಾರ ?

1.17 ಕೋಟಿ ಆಧಾರ್‌ ಕಾರ್ಡ್ಗಳನ್ನು​​​​​​​ ರದ್ದುಗೊಳಿಸಿದ ಕೇಂದ್ರ ಸರ್ಕಾರ ?

ನವದೆಹಲಿ : ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (UIDAI)) ಆಧಾರ್ (Aadhaar) ಡೇಟಾಬೇಸ್‌ನಲ್ಲಿ ಯಾವುದೇ ಸಮಸ್ಯೆಗಳು ಬರಬಾರದು ಹಾಗೂ ಎಲ್ಲಾ ಮಾಹಿತಿಗಳು ನಿಖರವಾಗಿ ಇರಬೇಕು ಎನ್ನುವ ಕಾರಣಕ್ಕೆ ಅನೇಕ ಕ್ರಮಗಳನ್ನ ತೆಗೆದುಕೊಂಡಿದ್ದು, ಮೃತ ವ್ಯಕ್ತಿಗಳ ಆಧಾರ್ ಸಂಖ್ಯೆಗಳನ್ನು ನಿಷ್ಕ್ರಿಯಗೊಳಿಸಿದೆ.

1.55 ಕೋಟಿ ದಾಖಲೆಗಳ ಪರಿಶೀಲನೆ
ಆಧಾರ್ ನಿಷ್ಕ್ರಿಯಗೊಳಿಸಲು ಸುಮಾರು 1.55 ಕೋಟಿ ದಾಖಲೆಗಳನ್ನು ಪರಿಶೀಲನೆ ಮಾಡಿದ್ದು, ಈ ಕೆಲಸ ಮಾಡಲು ಯುಐಡಿಎಐ ಭಾರತದ ರಿಜಿಸ್ಟ್ರಾರ್ ಜನರಲ್ ಜೊತೆ ಸಹಯೋಗ ಹೊಂದಿದೆ. ಈ ಮೂಲಕ ಸಾವಿಗೀಡಾಗಿರುವವರ ದಾಖಲೆಗಳನ್ನ ಪರಿಶೀಲಿಸಿ, ನಿಷ್ಕ್ರಿಯಗೊಳಿಸಲಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈ ವಿಚಾರವಾಗಿ ಮಾಹಿತಿಯನ್ನ ನೀಡಿದ್ದು, ಭಾರತೀಯ ರಿಜಿಸ್ಟ್ರಾರ್ ಜನರಲ್ ನಾಗರಿಕ ನೋಂದಣಿ ವ್ಯವಸ್ಥೆ ಬಳಸಿಕೊಂಡು 24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಸುಮಾರು 1.55 ಕೋಟಿ ಮರಣ ದಾಖಲೆಗಳನ್ನು UIDAI ಗೆ ಒದಗಿಸಿದ್ದಾರೆ. ಈ ಎಲ್ಲಾ ಮಾಹಿತಿಗಳನ್ನ ಸರಿಯಾಗಿ ಪರೀಕ್ಷೆ ಮಾಡಿ, ಯಾವುದೇ ರೀತಿಯಾಗಿ ಸಮಸ್ಯೆಗಳಾಗದಂತೆ ಸುಮಾರು 1.17 ಕೋಟಿ ಆಧಾರ್ ಸಂಖ್ಯೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಇದಲ್ಲದೇ, ಇನ್ನೂ ಕೆಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದೇ ರೀತಿಯ ಕಾರ್ಯ ಮುಂದುವರೆದಿದ್ದು, ಇಲ್ಲಿಯವರೆಗೆ ಸುಮಾರು 6.7 ಲಕ್ಷ ಮರಣ ದಾಖಲೆಗಳನ್ನು ಸ್ವೀಕರಿಸಲಾಗಿದೆ ಮತ್ತು ಅವುಗಳ ನಿಷ್ಕ್ರಿಯಗೊಳಿಸುವ ಕೆಲಸ ಪ್ರಗತಿಯಲ್ಲಿದೆ.

ಕುಟುಂಬಸ್ಥರ ಮರಣದ ಬಗ್ಗೆ ವರದಿ ಮಾಡಬಹುದು
ನಾಗರಿಕ ನೋಂದಣಿ ವ್ಯವಸ್ಥೆಯನ್ನು ಬಳಸುತ್ತಿರುವ 24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯುಐಡಿಎಐ ಕಳೆದ ತಿಂಗಳು ಮೈಆಧಾರ್ ಪೋರ್ಟಲ್‌ನಲ್ಲಿ ‘ಕುಟುಂಬ ಸದಸ್ಯರ ಮರಣ ವರದಿ’ ಎಂಬ ಹೊಸ ಸೇವೆಯನ್ನು ಪ್ರಾರಂಭಿಸಿದೆ. ಈ ಪೋರ್ಟಲ್  ಕುಟುಂಬ ಸದಸ್ಯರ ಮರಣದ ಬಗ್ಗೆ ವರದಿ ಮಾಡಲು ಸಹಾಯ ಮಾಡುತ್ತದೆ.

ವಿಶೇಷಚೇತರಿಗೆ ಹೊಸ ರೂಲ್ಸ್‌ ತಂದಿದ್ದ ಆಧಾರ್‌
ಈ ಮೊದಲು ವಿಶೇಷಚೇತನ ವ್ಯಕ್ತಿಗಳ ಕೌಶಲ್ಯ ಅಭಿವೃದ್ಧಿಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯುವ ಜನರು ತಮ್ಮ ಆಧಾರ್ ಸಂಖ್ಯೆಯನ್ನು ನೀಡುವುದು ಅಥವಾ ಅವರು ಅದಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬುದಕ್ಕೆ ಪುರಾವೆಯನ್ನು ತೋರಿಸುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಹೇಳಿತ್ತು. ವಿಶೇಷಚೇತನ ವ್ಯಕ್ತಿಗಳು ಸಾರಿಗೆ ಭತ್ಯೆ, ವಾಸ್ತವ್ಯ ಮತ್ತು ಆಹಾರ ಬೆಂಬಲ, ಪ್ರಯಾಣ ಸಹಾಯ ಮತ್ತು ತರಬೇತಿಯ ನಂತರದ ಸಹಾಯದಂತಹ ಪ್ರಯೋಜನಗಳನ್ನು ಪಡೆಯಲು ಈ ನಿಯಮವನ್ನು ಪಾಲಿಸುವುದು ಅಗತ್ಯವಾಗಿದೆ. ಆದರೂ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಆಧಾರ್ ಇರದ ಕಾರಣ ಅಥವಾ ಆಧಾರ್ ಪರಿಶೀಲನೆ ವಿಫಲವಾಗುವ ಯಾವುದೇ ವ್ಯಕ್ತಿಗೆ ಪ್ರಯೋಜನಗಳನ್ನು ನಿರಾಕರಿಸುವುದಿಲ್ಲ ಎಂದು ಹೇಳಿತ್ತು.

ಅಂಗವೈಕಲ್ಯ ಅಥವಾ ಇತರ ಸಮಸ್ಯೆಯಿಂದಾಗಿ ವ್ಯಕ್ತಿಗಳ ಬೆರಳಚ್ಚು ಅಥವಾ ಕಣ್ಣಿನ ಸ್ಕ್ಯಾನ್ (ಬಯೋಮೆಟ್ರಿಕ್) ಕಾರ್ಯನಿರ್ವಹಿಸದಿದ್ದರೆ, ಅವುಗಳ ಬದಲಿಗೆ ಈ ಕೆಳಗಿನ ಆಯ್ಕೆಗಳನ್ನು ಬಳಸಬಹುದು ಎಂದು ಸಂಸ್ಥೆ ಹೇಳಿದೆ.

You cannot copy content of this page

Exit mobile version